ರಾಧಿಕಾ ಕುಮಾರಸ್ವಾಮಿ ಅಭಿನಯದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.

  ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ ಆಳಿದ ನಟಿ ರಾಧಿಕಾ ಕುಮಾರಸ್ವಾಮಿ. ಆಟೋಶಂಕರ್​, ಹಠವಾದಿ, ನಿನಗಾಗಿ, ತವರಿಗೆ ಬಾ ತಂಗಿ ಸಿನಿಮಾಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದರು. ಎಲ್ಲರ ಮನಸ್ಸು ಗೆದ್ದಿದ್ದರು. ಒಂದಷ್ಟು ವರ್ಷಗಳ ಕಾಲ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಬಳಿಕ ಸ್ವೀಟಿ ಸಿನಿಮಾದ ಮೂಲಕ ಮತ್ತೆ ಕಮ್​ಬ್ಯಾಕ್ ಮಾಡಿದ್ದರು. ಸಿನಿಮಾ ಹೇಳಿಕೊಳ್ಳುವ ಯಶಸ್ಸು ತಂದುಕೊಡಲಿಲ್ಲ. ಮತ್ತೆ ಒಂದಷ್ಟು ದಿನ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಂಡರು. ಬಳಿಕ ದಮಯಂತಿ ಸಿನಿಮಾದ ಮೂಲಕ ಮತ್ತೆ ಸಖತ್​ ಸೌಂಡ್ ಮಾಡಿದ್ದರು. ರಾಧಿಕಾ ಕುಮಾರಸ್ವಾಮಿ ಅಭಿನಯದ ಸೂಪರ್ ಹಿಟ್ ಸಿನಿಮಾಗಳ ಮಾಹಿತಿ ಇಲ್ಲಿದೆ.
  1. 'ನಿನಗಾಗಿ'

  ನಟಿ ರಾಧಿಕಾ ಕುಮಾರಸ್ವಾಮಿ 2002ರಲ್ಲಿ ತೆರೆಕಂಡ 'ನಿನಗಾಗಿ' ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಆಗ ರಾಧಿಕಾ ಕೇವಲ ಒಂಭತ್ತನೆಯ ತರಗತಿ ಓದುತ್ತಿದ್ದರು. ರಾಧಿಕಾ ಅವರ ಮೊದಲ ಸಿನಿಮಾವಾದ ನಿನಗಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ್ದರು.  

  2. ನೀಲಾ ಮೇಘ ಶ್ಯಾಮ

  ರಾಜ್ ಕಿಶೋರ್ ನಿದೇಶನದ ನೀಲಾ ಮೇಘ ಶ್ಯಾಮ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಹಾಗೂ ರವಿಶಂಕರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು.  ಈ ಸಿನಿಮಾ 2002ರಲ್ಲಿ ಬಿಡುಗಡೆಯಾಗಿತ್ತು.  

  ತವರಿಗೆ ಬಾ ತಂಗಿ ಚಿತ್ರದಳ್ಳಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಅಣ್ಣ-ತಂಗಿ ಬಾಂಧವ್ಯದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ  ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಸಂಯೋಜನೆಯಿದೆ.

   

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ವಿಜಯ್ ರಾಘವೇಂದ್ರ ನಟನೆಯ ರಿಷಿ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. 2005ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ನಟಿ ರಾಧಿಕಾ ಕುಮಾರಾಸ್ವಾಮಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ಪ್ರಕಾಶ್ ನಿರ್ದೇಶನ ಮಾಡಿದ್ದರು.  

  ಉಪೇಂದ್ರ ನಟನೆಯ ಆಟೋ ಶಂಕರ್ ಸಿನಿಮಾವನ್ನು ಡಿ ರಾಜೇಂದ್ರ ಬಾಬು ನಿದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಆಟೋ ಚಾಲಕನ ಪಾತ್ರ ನಿರ್ವಹಿಸಿದ್ದು, ರಾಧಿಕಾ ಕುಮಾರಾಸ್ವಾಮಿ ನಾಯಕಿಯಾಗಿ ನಟಿಸಿದ್ದರು. ಇವರಲ್ಲದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಅಭಿನಯಿಸಿದ್ದರು. 

   

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ 'ಅಣ್ಣ ತಂಗಿ' ಸಿನಿಮಾ ಆಭೂತಪೂರ್ವ ಯಶಸ್ಸು ಸಾಧಿಸಿತ್ತು. ಅಣ್ಣ-ತಂಗಿ ಸಿನಿಮಾದಲ್ಲಿ ಇಬ್ಬರ ನಟನೆ ಪ್ರೇಕ್ಷಕರ ಮನದಲ್ಲಿ ಇನ್ನು ಅಚ್ಚಳಿಯಾಗಿ ಉಳಿದುಕೊಂಡಿದೆ. 2005ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಓಂ ಸಾಯಿಪ್ರಕಾಶ್ ನಿರ್ದೇಶಿಸಿದ್ದರು. ಶಿವಣ್ಣ ಹಾಗೂ ರಾಧಿಕಾ ಕಾಂಬಿನೇಷನ್ ನ  ಈ ಸಿನಿಮಾ ಅದ್ಭುತವಾಗಿ ಮೂಡಿಬಂದಿತ್ತು. 

   

  ಅನಾಥರು ಸಿನಿಮಾವನ್ನು ಸಾಧು ಕೋಕಿಲ ನಿರ್ದೇಶನ ಮಾಡಿದ್ದರು. ತಮಿಳಿನ 'ಪಿತಾಮಗನ್' ಚಿತ್ರದ ರೀಮೆಕ್ 'ಅನಾಥರು'. ಮೂಲ ಚಿತ್ರದಲ್ಲಿ ಚಿಯಾನ್ ವಿಕ್ರಂ ಹಾಗೂ ಸೂರ್ಯ ಮಾಡಿದ್ದ ಪಾತ್ರಗಳನ್ನು ಕನ್ನಡದಲ್ಲಿ ಉಪೇಂದ್ರ ಹಾಗೂ ದರ್ಶನ್ ನಿಭಾಯಿಸಿದ್ದರು. ಇಬ್ಬರ ಅಭಿನಯಕ್ಕೆ ಕನ್ನಡ ಸಿನಿರಸಿಕರು ಫಿದಾ ಆಗಿ ಹೋಗಿದ್ದರು. ರುದ್ರ ಆಗಿ ಉಪೇಂದ್ರ, ಸತ್ಯ ಪ್ರಕಾಶ್ ಆಗಿ ದರ್ಶನ್ ಇಬ್ಬರು ಪೈಪೋಟಿಗೆ ಬಿದ್ದು ನಟಿಸಿದ್ದರು. ಸಾಂಘವಿ ಹಾಗೂ ರಾಧಿಕಾ ಕುಮಾರಸ್ವಾಮಿ ಕೂಡ ಬಹಳ ಸೊಗಸಾಗಿ ನಟಿಸಿದ್ದರು. 

  8. ಹಠವಾದಿ

  ಹಠವಾದಿ ಸಿನಿಮಾವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರೇ ನಿರ್ದೇಶಿಸಿ, ನಟಿಸಿದ್ದರು. 2006ರ ಮಾರ್ಚ್  24ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ನಾಯಕಿಯಾಗಿ  ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಹಾಡುಗಳು ಇಂದಿಗೂ ಫೇಮಸ್ ಆಗಿವೆ. 

   

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X