twitter
    X
    Home ಚಲನಚಿತ್ರಗಳ ಒಳನೋಟ

    ನೀವು ಮಿಸ್ ಮಾಡದೇ ನೋಡಲೇಬೇಕಾದ ಟಿ.ಎಸ್.ನಾಗಾಭರಣ ನಿರ್ದೇಶನದ ಸಿನಿಮಾಗಳಿವು!

    Author Sowmya Bairappa | Updated: Tuesday, January 23, 2024, 03:03 PM [IST]

    ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿಯಾಗಿ ಗುರುತಿಸಿಕೊಂಡಿರುವ ಟಿ.ಎಸ್.ನಾಗಾಭರಣ ಅವರು ಸಹಾಯಕ ನಿರ್ದೇಶಕರಾಗಿ ಸಿನಿಮಾರಂಗ ಪ್ರವೇಶಿಸಿದರು. 1978ರಲ್ಲಿ `ಗ್ರಹಣ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು. ಈ ಚಿತ್ರ ಎರಡು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಸುಮಾರು 20 ಚಿತ್ರಗಳು ಅಂತರಾಷ್ಟ್ರೀಯ, ರಾಷ್ಟೀಯ ಮತ್ತು ರಾಜ್ಯ ಮಟ್ಟಗಳಲ್ಲಿ ಪ್ರಶಸ್ತಿಗಳನ್ನು ಪಡೆದಿವೆ. ಇವರು ಕೆಲಕಾಲ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಟಿ.ಎಸ್.ನಾಗಾಭರಣ ನಿರ್ದೇಶನದ 5 ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image
    ಗ್ರಹಣ

    ಗ್ರಹಣ

    1

    ಟಿ.ಎಸ್.ನಾಗಾಭರಣ ಅವರು ಮೊಟ್ಟಮೊದಲ ಬಾರಿಗೆ ನಿರ್ದೇಶಿಸಿದ ಸಿನಿಮಾ ಗ್ರಹಣ. 1978ರಲ್ಲಿ ತೆರೆಕಂಡ ಈ ಸಿನಿಮಾಈ ಚಿತ್ರ ಎರಡು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು. ತುಮಕೂರಿನ ಸಮೀಪದ ಹಳ್ಳಿಯೊಂದರ ಸಾಮಾಜಿಕ ಸಂಸ್ಕೃತಿಯನ್ನು ಆಯ್ದುಕೊಂಡು ಈ ಸಿನಿಮಾ ಮಾಡಲಾಗಿತ್ತು. ಹೊನ್ನರತಿ ಎಂಬ ಬ್ರಾಹ್ಮಣ ಹುಡುಗಿಯೊಬ್ಬಳು ಪ್ರೌಢವಾಸ್ಥೆಗೆ ಬಂದ ನಂತರವೂ ಮದುವೆಯಾಗಿರುವುದಿಲ್ಲ. ಹೀಗಾಗಿ, ಜನರು ಅವಳನ್ನು ಕೀಳಾಗಿ ನೋಡಲು ಪ್ರಾರಂಭಿಸುತ್ತಾರೆ. ಬಳಿಕ ಆಕೆಯ ಕುಟುಂಬಸ್ಥರು ಕೂಡ ಆಕೆಯನ್ನು ತ್ಯಜಿಸುತ್ತಾರೆ. ನಂತರದಲ್ಲಿ  ಹೊನ್ನರತಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಜ ಜೀವನದ ಸನ್ನಿವೇಶ ಹೊಂದಿರುವ ಈ ಸಿನಿಮಾವು ಬಿಡುಗಡೆಯಾದ ದಿನಗಳಲ್ಲಿ ಸಾಕಷ್ಟು ಜನಮನ್ನಣೆಯನ್ನು ಪಡೆದಿತ್ತು.  

     

    ಆಸ್ಪೋಟ

    ಆಸ್ಪೋಟ

    2

    1988ರಲ್ಲಿ ಬಿಡುಗಡೆಯಾದ ಆಸ್ಪೋಟ ಸಿನಿಮಾ ಪಿ.ಎನ್ ರಂಗ ಅವರು ಬರೆದ 'ಅಯ್ನ್ ಬೈ ಮನು' ಕಾದಂಬರಿಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಶ್ರೀಧರ್ ಮತ್ತು ಎಚ್.ಜಿ.ದತ್ತಾತ್ರೇಯ ಪ್ರಮುಖಗಳಲ್ಲಿ ನಟಿಸಿದ್ದರು. ಈ ಸಿನಿಮಾವು ಸಮಾಜದಲ್ಲಿನ ರಾಜಕೀಯ ಸಮಸ್ಯೆಗಳು ಮತ್ತು ಜನರು ರಾಜಕಾರಣಿಗಳು ಮಾಡಿದ ತಪ್ಪನ್ನು ಹೇಗೆ  ಅರಿತುಕೊಳ್ಳುತ್ತಾರೆ ಎಂಬುದನ್ನು ಆಧರಿಸಿತ್ತು. ಈ ಸಿನಿಮಾ ಕನ್ನಡ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಸೌತ್ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.    

    ಮೈಸೂರು ಮಲ್ಲಿಗೆ

    ಮೈಸೂರು ಮಲ್ಲಿಗೆ

    3

    ಮೈಸೂರು ಮಲ್ಲಿಗೆ ಸಿನಿಮಾ ಟಿ.ಎಸ್.ನಾಗಭರಣ ಅವರ ವೃತ್ತಿ ಜೀವನದ ಮತ್ತೊಂದು ಯಶಸ್ವಿ ಸಿನಿಮಾ. ಇದು 1942ರ ಕೆ.ಎಸ್. ನರಸಿಂಹ ಸ್ವಾಮಿಯವರ ಕಾದಂಬರಿಯನ್ನು ಆಧರಿಸಿದೆ.  ಪದ್ಮ ಎಂಬ ಹಳ್ಳಿ ಹುಡುಗಿಯೊಬ್ಬರು ಮಂಜು ಎಂಬ ಕವಿಯನ್ನು ಪ್ರೀತಿಸುತ್ತಾಳೆ. ಆಕೆಯ ತಂದೆ ಗ್ರಾಮಲೆಕ್ಕಿಗನಾಗಿದ್ದು, ಪದ್ಮಾಳ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಾನೆ. ಜೊತೆಗೆ ಪದ್ಮಗೆ ಚನ್ನಯ್ಯ ಎಂಬ ಯುವಕನೊಂದಿಗೆ ಮದುವೆ ಮಾಡಿಸುತ್ತಾನೆ. ನಂತರ ಚೆನ್ನಯ್ಯ ರಾಷ್ಟ್ರೀಯ ಹೋರಾಟದಲ್ಲಿ ತೊಡಗಿಕೊಂಡಾಗ ಮಂಜು ಚೆನ್ನಯ್ಯನನ್ನು ಹಾಗೂ ಆತನಿಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸುತ್ತಾನೆ. ನಂತರ ಚೆನ್ನಯ್ಯ ಬರೆದ ಕೃತಿಗಳನ್ನ ಪದ್ಮ ಪ್ರಕಟಿಸುತ್ತಾನೆ. ಈ ಪುಸ್ತಕ ಬಿಡುಗಡೆಯ ನಂತರ ಮಂಜು ಮತ್ತು ಪದ್ಮ ಮತ್ತೆ ಒಂದಾಗುತ್ತಾರೆ. 

    ಕಲ್ಲರಳಿ ಹೂವಾಗಿ

    ಕಲ್ಲರಳಿ ಹೂವಾಗಿ

    4

    'ಕಲ್ಲರಳಿ ಹೂವಾಗಿ' ಸಿನಿಮಾವನ್ನು ಟಿ.ಎಸ್.ನಾಗಭರಣ ನಿರ್ದೇಶಿಸಿದ್ದಾರೆ. ಇದು ಮದಕರಿ ನಾಯಕನ ಆಳ್ವಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಪ್ರೇಮಕಥೆಯ ಮೇಲೆ ಬಿ.ಎಲ್.ವೇಣು ಅವರು ಬರೆದ ಕಾದಂಬರಿಯನ್ನು ಆಧರಿಸಿದೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಉಮಾಶಂಕರಿ, ಅನಂತ್ ನಾಗ್, ಭಾರತಿ, ಅಂಬರೀಷ್, ಅವಿನಾಶ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರೇಮಕಥೆಯುಳ್ಳ ಈ ಸಿನಿಮಾ ಅತ್ಯುತ್ತಮ ಕಥೆಗಾಗಿ ರಾಷ್ಟ್ರಪ್ರಶಸ್ತಿ ಹಾಗೂ ಅನೇಕ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿತು. 

    ನಾಗಮಂಡಲ

    ನಾಗಮಂಡಲ

    5

    'ನಾಗಮಂಡಲ'ವನ್ನು ಗಿರೀಶ್ ಕಾರ್ನಾಡ್ ಈ ಸಿನಿಮಾದ ಕಥೆ ಬರೆದಿದ್ದು, ಟಿ.ಎಸ್.ನಾಗಾಭರಣ್ ನಿರ್ದೇಶಿಸಿದ್ದರು. 1997ರಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು,  ಹಿಂದಿಯಾ ದುವಿಧಾ ಸಿನಿಮಾದ ಕಥಾಹಂದರವನ್ನು ಹೊಂದಿದೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಮತ್ತು ವಿಜಯಲಕ್ಷ್ಮಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ದಾಂಪತ್ಯ ಜೀವನದ ಹಲವು ಸಾಮಾಜಿಕ ಸೂಕ್ಷ್ಮ ವಿಚಾರಗಳನ್ನು ಹೊಂದಿರುವ ಈ ಸಿನಿಮಾ, ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. 

    ಜನುಮದ ಜೋಡಿ

    ಜನುಮದ ಜೋಡಿ

    6

    1996ರಲ್ಲಿ ತೆರೆಕಂಡ `ಜನುಮದ ಜೋಡಿ' ಸಿನಿಮಾವನ್ನು ಟಿ.ಎಸ್.ನಾಗಾಭರಣ ಅವರು ನಿರ್ದೇಶಿಸಿದ್ದು,  ಬರಗೂರು ರಾಮಚಂದ್ರಪ್ಪ ಬರೆದಿದ್ದರು. ಚಿತ್ರದಲ್ಲಿ ಶಿವರಾಜ್ ಕುಮಾರ್, ಶಿಲ್ಪ, ಮುಖ್ಯಮಂತ್ರಿ ಚಂದ್ರು, ಪವಿತ್ರ ಲೋಕೇಶ್ ಹೊನ್ನವಳ್ಳಿ ಕೃಷ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಪ್ರೇಮಕಥೆಯುಳ್ಳ  ಈ ಸಸಿನಿಮಾ ಆಗಿನ ಕಾಲದಲ್ಲಿ 10 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರವಾಗಿ ದಾಖಲೆ ಬರೆಯಿತು. ಈ ಚಿತ್ರ ಅಮೇರಿಕಾ ವಿಶ್ವವಿದ್ಯಾಲಯವೊಂದರ ಮಾನವಶಾಸ್ತ್ರ ವಿಭಾಗದ ಆಧ್ಯಯನ ವಿಷಯವಾಗಿದೆ.    

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X