ಕನ್ನಡ ಬಾಕ್ಸಾಫೀಸ್ ಟಾಪ್ 10 ಕನ್ನಡ ಚಲನಚಿತ್ರಗಳು

  ಕನ್ನಡ ಚಿತ್ರರಂಗ ಪ್ರಸ್ತುತ ಜಾಗತಿಕವಾಗಿಯೂ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡು ಬೆಳೆಯುತ್ತಿದೆ. ಕೆಲ ವರ್ಷಗಳ ಹಿಂದೆ ಪಕ್ಕದ ರಾಜ್ಯಗಳಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೆ ಹೆಣಗಾಡುತ್ತಿದ್ದ ಚಿತ್ರ ನಿರ್ಮಾಪಕರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಮೊದಲೆಲ್ಲಾ ಚಿತ್ರ ಪ್ರದರ್ಶನ ಕಂಡ ದಿನಗಳ ಮೇಲೆ ಚಿತ್ರದ ಯಶಸ್ಸನ್ನು ಅಳೆಯುತ್ತಿದ್ದ ಚಿತ್ರರಂಗ ಈಗ ಬಾಕ್ಸಾಫೀಸ್ ಕಲೆಕ್ಸನ್ ಮೇಲೆ ಅವಲಂಬಿಸಿದೆ. ಕೆಲವು ಚಿತ್ರಗಳ ಅಧಿಕೃತ ಗಳಿಕೆಯ ಮಾಹಿತಿಯು ಲಭ್ಯವಿಲ್ಲದಿರುವುದರಿಂದ, ಆ ಚಿತ್ರಗಳನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ. ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 10 ಚಿತ್ರಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ ನೋಡಿ..

  1. ಕೆಜಿಎಫ್ (250 crores)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  21 Dec 2018

  ಬಾಕ್ಸಾಫೀಸಿನಲ್ಲಿ ನೂರು ಕೋಟಿ ಗಳಿಕೆ ಕಂಡ ಮೊದಲ ಚಿತ್ರವಾಗಿ ಕೆಜಿಎಫ್ ದಾಖಲಾಗಿದೆ. ಕನ್ನಡ ಮಾತ್ರವಲ್ಲದೇ, ತಮಿಳು, ತೆಲಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆಯಾಯಿತು. ಎಲ್ಲ ಭಾಷೆಗಳಲ್ಲಿ ಸೇರಿ ಸುಮಾರು 243 ಕೋಟಿ ಗಳಿಸಿದೆ.

  2. ಕುರುಕ್ಷೇತ್ರ (100+ crores)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Epic

  ಬಿಡುಗಡೆ ದಿನಾಂಕ

  09 Aug 2019

  ಪಾತ್ರವರ್ಗ

  ದರ್ಶನ್,ಅಂಬರೀಶ್

  ಭಾರತದ ಮೊದಲ ಪೌರಾಣಿಕ 3D ಚಿತ್ರವಾದ ಕುರುಕ್ಷೇತ್ರ ನೂರಉ ಕೋಟಿ ಕ್ಲಬ್ ಸೇರಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರ 50 ನೇ ಚಿತ್ರವಾದ ಕುರುಕ್ಷೇತ್ರ ಕನ್ನಡದ ಬಹುತೇಕ ಹಿರಿಯ ಕಲಾವಿದರು ನಟಿಸಿದರು.

  3. ರಾಜಕುಮಾರ (75-80 Crores)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Drama

  ಬಿಡುಗಡೆ ದಿನಾಂಕ

  24 Mar 2017

  ಪುನೀತ್ ರಾಜಕುಮಾರ್ ಮತ್ತು ಸಂತೋಷ್ ಆನಂದರಾಮ್ ಕಾಂಬಿನೇಶನ್ ನಲ್ಲಿ ಮೂಡಿಬಂದ ರಾಜಕುಮಾರ ಚಿತ್ರ ತನ್ನ ಸಾಮಾಜಿಕ ಸಂದೇಶದಿಂದ ಯಶಸ್ವಿಯಾಯಿತು. ಕರ್ನಾಟಕದ ಸುಮಾರು 40 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X