twitter
    X
    Home ಚಲನಚಿತ್ರಗಳ ಒಳನೋಟ

    ಪಾರ್ವತಮ್ಮ ರಾಜ್‌ಕುಮಾರ್ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಆಸಕ್ತಿಕರ ವಿಷಯಗಳು ಇಲ್ಲಿವೆ.

    Author Sowmya Bairappa | Updated: Wednesday, December 6, 2023, 11:48 AM [IST]

    ಕನ್ನಡ ಚಿತ್ರೋದ್ಯಮಕ್ಕೆ ಆಧಾರಸ್ತಂಭವಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್ ಹಲವಾರು ಚಿತ್ರಗಳನ್ನು ನಿರ್ಮಿಸುವ ಮೂಲಕ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ವರನಟ, ಕರ್ನಾಟಕರತ್ನ ಡಾ.ರಾಜ್ ಕುಮಾರ್ ಅವರ ಧರ್ಮಪತ್ನಿಯಾದ ಪಾರ್ವತಮ್ಮ ಅವರು, ಅನೇಕ ನಟ-ನಟಿಯರು, ಗಾಯಕರು ಹಾಗೂ ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜೊತೆಗೆ ೮೦ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಪಾರ್ವತಮ್ಮ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ.

    cover image
    13ನೇ ವಯಸ್ಸಿನಲ್ಲೇ ಮದುವೆ

    13ನೇ ವಯಸ್ಸಿನಲ್ಲೇ ಮದುವೆ

    1

    ಪಾರ್ವತಮ್ಮ 1939ರಲ್ಲಿ ಮೈಸೂರಿನ ಸಾಲಿಗ್ರಾಮ ಎಂಬಲ್ಲಿ ಅಪ್ಪಾಜಿ ಗೌಡ ಹಾಗೂ ಲಕ್ಷ್ಮಮ್ಮ ಮಗಳಾಗಿ ಜನಿಸಿದರು. 1953ರ ಜೂನ್ 25ರಂದು ತಮ್ಮ ತಂದೆ ರಾಜ್‌ಕುಮಾರ್ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿಯವರಿಗೆ ಕೊಟ್ಟ ಮಾತಿನಂತೆ 13ನೇ ವಯಸ್ಸಿನಲ್ಲಿ  ಡಾ.ರಾಜ್‌ಕುಮಾರ್ ಅವರನ್ನು ಮದುವೆಯಾದರು. ಆಗ ರಾಜ್‌ಕುಮಾರ್ ಅವರಿಗೆ 24 ವರ್ಷವಾಗಿತ್ತು. ಅಂದಿನಿಂದ ಡಾ.ರಾಜ್ ಮತ್ತು ಕುಟುಂಬದ ಬೆನ್ನೆಲುಬಾಗಿ ನಿಲ್ಲುತ್ತಾರೆ.

    80ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ

    80ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ

    2

    ಪಾರ್ವತಮ್ಮ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಈವರೆಗೂ 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈ ಪೈಕಿ ಆನಂದ್, ಓಂ, ಜನುಮದ ಜೋಡಿ, ಕವಿರತ್ನ ಕಾಳಿದಾಸ, ಹಾಲು ಜೇನು ಸೇರಿದಂತೆ ಅನೇಕ ಸಿನಿಮಾಗಳು ಸೇರಿವೆ. 

    ಗಣಿತದಲ್ಲಿ ಚುರುಕು

    ಗಣಿತದಲ್ಲಿ ಚುರುಕು

    3

    ಪಾರ್ವತಮ್ಮ ರಾಜ್‌ಕುಮಾರ್ ಅವರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಗಣಿತ ಅವರ ನೆಚ್ಚಿನ ವಿಷಯವಾಗಿತ್ತು. ಇದರಿಂದಾಗಿಯೇ ಅವರು ಸಿನಿಮಾದ ನಿರ್ಮಾಣದ ಹಣಕಾಸಿನ ವಿಚಾರದಲ್ಲಿ ಬಲವಾದ ಹಿಡಿತ ಸಾಧಿಸಲು ಸಾಧ್ಯವಾಗಿತ್ತು.  

    ಒಂದು ವರ್ಷ ಪ್ರದರ್ಶನ ಕಂಡ ಪಾರ್ವತಮ್ಮ ನಿರ್ಮಾಣದ 5 ಸಿನಿಮಾಗಳು

    ಒಂದು ವರ್ಷ ಪ್ರದರ್ಶನ ಕಂಡ ಪಾರ್ವತಮ್ಮ ನಿರ್ಮಾಣದ 5 ಸಿನಿಮಾಗಳು

    4

    ಪಾರ್ವತಮ್ಮ ನಿರ್ಮಾಣದ ಶಂಕರ್ ಗುರು, ಅನುರಾಗ ಅರಳಿತು, ಜೀವನ ಜೈತ್ರ, ಜನುಮದ ಜೋಡಿ ಹಾಗೂ ನಂಜುಂಡಿ ಕಲ್ಯಾಣ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಒಂದು ವರ್ಷ ಪ್ರದರ್ಶನ ಕಂಡಿವೆ. ಅವರ ನಿರ್ಮಾಣದ 16 ಸಿನಿಮಾಗಳು 25 ವಾರ ಪ್ರದರ್ಶನ ಕಂಡರೆ, 33 ಸಿನಿಮಾಗಳು 100 ದಿನಗಳು ಹಾಗೂ 19 ಸಿನಿಮಾಗಳು 50 ದಿನ ಪ್ರದರ್ಶನ ಕಂಡಿವೆ.  

    ನಿರ್ಮಾಣ ಸಂಸ್ಥೆ

    ನಿರ್ಮಾಣ ಸಂಸ್ಥೆ

    5

    ರಾಜ್‌ಕುಮಾರ್ ಅವರು ಮೊದಲೆಲ್ಲ ಬೇರೆ  ನಿರ್ಮಾಪಕರ ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದರು. ಆದರೆ, ಯಾವಾಗ ಸಿನಿಮಾಗಳು ಸೋಲುತ್ತಿವೆ ಎಂದು ಪಾರ್ವತಮ್ಮ ಮುಂದೆ ನಿರ್ಮಾಪಕರು ಹೇಳಿದರೋ ಆಗ ಪಾರ್ವತಮ್ಮ ತಮ್ಮದೇ ನಿರ್ಮಾಣ ಸಂಸ್ಥೆ ಮಾಡುವ ನಿರ್ಧಾರಕ್ಕೆ ಬಂದರು. ಅದರಂತೆ ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್‌ಪ್ರೈಸಸ್ ಹುಟ್ಟುಹಾಕಿದರು. ರಾಜ್ ಕುಟುಂಬದ ಸಂಸ್ಥೆಯಿಂದ ನಿರ್ಮಾಣಗೊಂಡ ಮೊದಲ ಸಿನಿಮಾ ತ್ರಿಮೂರ್ತಿ. ಈ ಸಿನಿಮಾ ಹಿಟ್ ಆಯಿತು. ಅಂದಿನಿಂದ ರಾಜ್ ಕುಟುಂಬದ ಸಿನಿಮಾಗಳು ಈ ಸಂಸ್ಥೆಯಿಂದಲೇ ನಿರ್ಮಾಣಗೊಂಡವು. 

    ಪ್ರಶಸ್ತಿಗಳು

    ಪ್ರಶಸ್ತಿಗಳು

    6

    ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಕರ್ನಾಟಕ ಸರ್ಕಾರದಿಂದ ಫಾಲ್ಕೆ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ಸಂಸ್ಕೃತಿ ಮತ್ತು ಪರಂಪರೆಗೆ ಧಕ್ಕೆಯುಂಟಾದಾಗ ಪಾರ್ವತಮ್ಮ ಯಾವಾಗಲೂ ಧ್ವನಿ ಎತ್ತುತ್ತಿದ್ದರು.

    ಅದ್ಭುತ ನಾಯಕಿಯರ ಪರಿಚಯ

    ಅದ್ಭುತ ನಾಯಕಿಯರ ಪರಿಚಯ

    7

    ಕನ್ನಡ ಚಿತ್ರರಂಗಕ್ಕೆ ದೊಡ್ಡ-ದೊಡ್ಡ ನಟಿಯರನ್ನು ಪರಿಚಯಿಸಿದ ಹೆಗ್ಗಳಿಕೆ ಪಾರ್ವತಮ್ಮ ಅವರಿಗೆ ಸಲ್ಲುತ್ತದೆ. ಮಾಲಾಶ್ರೀ, ಪ್ರೇಮಾ, ಸುಮಲತಾ, ಅನುಪ್ರಭಾಕರ್, ಸುಧಾರಾಣಿ, ರಕ್ಷಿತ, ರಮ್ಯಾ ಸೇರಿದಂತೆ ಹಲವಾರು ನಟ-ನಟಿಯರನ್ನು ಪಾರ್ವತಮ್ಮ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.  

    ಮಕ್ಕಳಿಗೆ ದಾರಿದೀಪ

    ಮಕ್ಕಳಿಗೆ ದಾರಿದೀಪ

    8

    ಪಾರ್ವತಮ್ಮ ಅವರು ರಾಜ್‌ಕುಮಾರ್ ರೀತಿಯೇ ಮಕ್ಕಳ ವಿಷಯದಲ್ಲೂ ಒಳ್ಳೊಳ್ಳೆಯ ಕಥೆಗಳನ್ನು ಆಯ್ಕೆ ಮಾಡುತ್ತಿದ್ದರು. ಶಿವಣ್ಣ ಅವರಿಗೆ ಆನಂದ್, ಓಂ, ಜನುಮದ ಜೋಡಿ ಸಿನಿಮಗಳನ್ನು ಮಾಡಿದರು. ರಾಘವೇಂದ್ರ ರಾಜ್ ಕುಮಾರ್ ಅವರಿಗೆ ನಂಜುಡಿ ಕಲ್ಯಾಣದಂತಹ ಸಿನಿಮಾ ಮಾಡಿದರು. ಪ್ರೀತಿಯ ಅಪ್ಪುಗಾಗಿ ಅಪ್ಪು, ಅಭಿ, ಹುಡುಗರು ಇಂತಹ ಸಿನಿಮಗಳು ಬಂದವು. ಹೀಗೆ ಪಾರ್ವತಮ್ಮ ತಮ್ಮ ಕುಟುಂಬದ ಬೆಳವಣಿಗೆಗೆ ಸದಾ ಬೆನ್ನೆಲುಬಾಗಿದ್ದರು.  

    ರಾಜ್‌ಕುಮಾರ್ ಅವರಿಗೆ ಸಂಗೀತ ಶಿಕ್ಷಕರಾಗಿದ್ದ ಪಾರ್ವತಮ್ಮ ತಂದೆ

    ರಾಜ್‌ಕುಮಾರ್ ಅವರಿಗೆ ಸಂಗೀತ ಶಿಕ್ಷಕರಾಗಿದ್ದ ಪಾರ್ವತಮ್ಮ ತಂದೆ

    9

    ಪಾರ್ವತಮ್ಮ ಅವರ ತಂದೆ ಅಪ್ಪಾಜಿಗೌಡ ಅವರು ಸಂಗೀತ ಶಿಕ್ಷಕರಾಗಿದ್ದರು. ಮೂಲಗಳ ಪ್ರಕಾರ ಡಾ.ರಾಜ್‌ಕುಮಾರ್ ಅವರಿಗೂ ಅಪ್ಪಾಜಿಗೌಡ ಅವರೇ ಸಂಗೀತ ಕಳಿಲಿಸಿದ್ದು.  ರಾಜ್‌ಕುಮಾರ್ ಅವರಿಗೆ ಉತ್ತಮ ಕಂಠ ಹಾಗೂ ಆಸಕ್ತಿ ಇದ್ದಿದ್ದರಿಂದ ಬೇಗ ಕಲಿತರು.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X