twitter
    X
    Home ಚಲನಚಿತ್ರಗಳ ಒಳನೋಟ

    Happy Birthday: ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಕುರಿತು ನಿಮಗೆ ಗೊತ್ತಿಲ್ಲದ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

    Author Sowmya Bairappa | Updated: Wednesday, November 29, 2023, 09:58 AM [IST]

    ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಇಂದು ೪೦ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯಾ ನಟಿ ಮಾತ್ರವಲ್ಲದೆ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. ೨೦೨೩ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು, ನಂತರ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ಮಿಂಚಿದರು. ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ ಆನ್ ಪಟ್ಟದಲ್ಲಿದ್ದ ರಮ್ಯಾ, ಸುದೀಪ್, ದರ್ಶನ್, ಪುನೀತ್ ರಾಜ್‍ಕುಮಾರ್ ಹಾಗೂ ಯಶ್ ಸೇರಿದಂತೆ ಬಹುತೇಕ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ, ಆರೇಳು ವರ್ಷದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ, ಈ ವರ್ಷ ಮತ್ತೆ ಸ್ಯಾಂಡಲ್‌ವುಡ್‌ ಗೆ ಮರಳಿದ್ದಾರೆ. ಡಾಲಿ ಧನಂಜಯ್ ನಟನೆಯ ಉತ್ತಾರಖಂಡ ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ರಮ್ಯಾ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

    cover image
    ಮೊದಲ ಹೆಸರು

    ಮೊದಲ ಹೆಸರು

    1

    ಮೂಲತಃ ಬೆಂಗಳೂರಿನವರಾದ ನಟಿ ರಮ್ಯಾ ಅವರ ಮೊದಲ ಹೆಸರು ದಿವ್ಯ ಸ್ಪಂದನ. ಕನ್ನಡದ ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರು ದಿವ್ಯ ಸ್ಪಂದನ ಅವರಿಗೆ ಅಭಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿ, ಈ ಚಿತ್ರದಲ್ಲಿ ಅವರ ಹೆಸರನ್ನು ರಮ್ಯ ಎಂದು ಬದಲಾಯಿಸಿದರು.

    ಮೊದಲ ಸಿನಿಮಾ

    ಮೊದಲ ಸಿನಿಮಾ

    2

    ಮೋಹಕ ತಾರೆ ರಮ್ಯಾ ಅವರ ಮೊದಲ ಸಿನಿಮಾ ಅಭಿ. 2003ರಲ್ಲಿ ತೆರೆಕಂಡ ಅಭಿ ಸಿನಿಮಾ ಮೂಲಕ ರಮ್ಯಾ ಚಿತ್ರರಂಗ ಪ್ರವೇಶಿಸಿದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ನಟನೆಯ ಈ ಚಿತ್ರ ೧೫೦ ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದರು. ಈ ಸಿನಿಮಾ ಮೂಲಕ ಪುನೀತ್ ಮತ್ತು ರಮ್ಯಾ ಜೋಡಿ ಹಿಟ್ ಆಗಿತ್ತು. 

    ರಮ್ಯಾ ಅವರ ಹಿಟ್ ಸಿನಿಮಾಗಳು

    ರಮ್ಯಾ ಅವರ ಹಿಟ್ ಸಿನಿಮಾಗಳು

    3

    ಅಭಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಮ್ಯಾ, ನಂತರ ಅನೇಕ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆಗೆದ್ದರು. ರಮ್ಯಾ ಕೇವಲ ಗ್ಲಾಮರಸ್ ಗೊಂಬೆಯಾಗಿರಲಿಲ್ಲ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಿದ್ದರು. ಆಕಾಶ್, ಎಕ್ಸ್ ಕ್ಯೂಸ್ ಮಿ, ಅಮೃತಧಾರೆ, ಗೌರಮ್ಮ, ಜೊತೆ ಜೊತೆಯಲಿ, ಸಂಜು ವೆಡ್ಸ್ ಗೀತಾ, ಮುಸ್ಸಂಜೆ ಮಾತು, ಸಿದ್ಲಿಂಗು, ಸೇವಂತಿ ಸೇವಂತಿ, ಅರಸು ರಮ್ಯಾ ನಟನೆಯ ಹಿಟ್ ಸಿನಿಮಾಗಳು.  

    ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟನೆ

    ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟನೆ

    4

    ನಟಿ ರಮ್ಯಾ ಆರಂಭದ ದಿನಗಳಲ್ಲೇ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ತಮಿಳಿನಲ್ಲಿ ಕುತ್ತು ಮತ್ತು ಗಿರಿ ಎಂಬ ಎರಡು ಹಿಟ್ ಸಿನಿಮಾಗಳನ್ನು ಮಾಡಿದ್ದರು. ನಂತರದ ದಿನಗಳಲ್ಲಿ ಧನುಷ್ ಜೊತೆ ಪೊಲ್ಲಾದವನ್ ಹಾಗೂ ಸೂರ್ಯ ಜೊತೆ ವಾರಣಂ ಆಯಿರಂ ಎಂಬ ಹಿಟ್ ಸಿನಿಮಾದಲ್ಲಿ ನಟಿಸಿದ್ದರು. ತೆಲುಗಿನಲ್ಲಿ ಅಭಿಮನ್ಯು ಎಂಬ ಸಿನಿಮಾ ಮಾಡಿದ್ದರು.  

    ರಾಜಕೀಯ

    ರಾಜಕೀಯ

    5

    ನಟಿ ರಮ್ಯಾ ನಟನೆಯಲ್ಲಿ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಸೇರಿದ್ದರು. 2012ರಲ್ಲಿ ರಮ್ಯಾ ಕಾಂಗ್ರೆಸ್​ ಪಾರ್ಟಿ ಸೇರ್ಪಡೆ ಆಗಿದ್ದರು. 2013ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ರಮ್ಯಾ ಗೆಲುವು ಸಾಧಿಸಿದ್ದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧೆ ಮಾಡಿದರೂ ಗೆಲುವು ಅವರಿಗೆ ಒಲಿಯಲಿಲ್ಲ. 2017ರಲ್ಲಿ ಅವರಿಗೆ ಕಾಂಗ್ರೆಸ್​ ಸೋಶಿಯಲ್​ ಮೀಡಿಯಾ ರಾಷ್ಟ್ರೀಯ ಮುಖ್ಯಸ್ಥರನ್ನಾಗಿ ಮಾಡಲಾಯಿತು. 2018ರಲ್ಲಿ ಅವರು ತಮ್ಮ ಸ್ಥಾನದಿಂದ ಕೆಳಗೆ ಇಳಿದಿದ್ದರು. ನಂತರ ರಮ್ಯಾ ರಾಜಕೀಯದಿಂದ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಿಂದಲೂ ದೂರ ಉಳಿದಿದ್ದರು. ನಂತರ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಾಸಾಗಿದ್ದರು.

    ಶ್ವಾನ ಪ್ರಿಯೆ ರಮ್ಯಾ

    ಶ್ವಾನ ಪ್ರಿಯೆ ರಮ್ಯಾ

    6

    ಮೋಹಕತಾರೆ ರಮ್ಯಾ ಶ್ವಾನ ಪ್ರಿಯೆ ಅನ್ನೋದು ಗೊತ್ತಿರುವ ವಿಷಯವೇ. ಆಗಾಗ ಇನ್‌ಸ್ಟಾಗ್ರಾಂ ತಮ್ಮ ಪ್ರೀತಿಯ ನಾಯಿಯೊಂದಿಗೆ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಬೀದಿ ನಾಯಿಯನ್ನು ಕಾರಣವಿಲ್ಲದೇ ಹತ್ಯೆ ಮಾಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಮ್ಯಾ ಪ್ರತಿಭಟನೆಯಲ್ಲೂ ಭಾವಹಿಸಿದ್ದರು. ಈಗಲೂ ಕೂಡ ಇಂತಹ ಘಟನೆಗಳು ಬೆಳಕಿಗೆ ಬಂದಾಗ ಅದನ್ನು ವಿರೋಧಿಸಿ ಪೋಸ್ಟ್ ಹಾಕುತ್ತಿರುತ್ತಾರೆ.  

    ಮುಂಬರುವ ಸಿನಿಮಾಗಳು

    ಮುಂಬರುವ ಸಿನಿಮಾಗಳು

    7

    ಆರೇಳು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ರಮ್ಯಾ ಈ ವರ್ಷ ಕಂಬ್ಯಾಕ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಅಭಿನಯದ ಉತ್ತರಖಂಡ ಸಿನಿಮಾ ಮೂಲಕ ರಮ್ಯಾ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X