twitter
    X
    Home ಚಲನಚಿತ್ರಗಳ ಒಳನೋಟ

    ಅಂಬರೀಶ್ ಟು ಸುದೀಪ್: ರಾಜಕೀಯಕ್ಕೆ ಎಂಟ್ರಿಕೊಟ್ಟ ಕನ್ನಡದ 15 ಸಿನಿತಾರೆಯರ ಪಟ್ಟಿ ಇಲ್ಲಿದೆ.

    Author Administrator | Updated: Wednesday, April 5, 2023, 01:41 PM [IST]

    ಸಾಮಾನ್ಯ ಜನರ ಮೇಲೆ ಸಿನಿತಾರೆಯರ ಪ್ರಭಾವ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಚಿತ್ರ ನಟ-ನಟಿಯರನ್ನು ದೇವರೆಂದೇ ಆರಾಧಿಸುವ ಅಭಿಮಾನಿಗಳು ಅವರ ಎಲ್ಲಾ ಕಾರ್ಯಗಳಿಗೂ ಬಹುತೇಕ ಬೆಂಬಲ ನೀಡುತ್ತಾರೆ. ಕೆಲ ನಟ-ನಟಿಯರು ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಲು ರಾಜಕಾರಣಕ್ಕೆ ಬರುತ್ತಾರೆ. ಆದರೆ ರಾಜಕಾರಣದಲ್ಲಿ ಸಫಲತೆ ಪಡೆದಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿತಾರೆಯರು ಮಾತ್ರ. ಇನ್ನೂ ಕೆಲವರು ರಾಜಕೀಯಕ್ಕೂ ಬಂದು ಕೆಲಕಾಲ ಉಳಿದು ಮತ್ತೆ ಸಿನಿರಂಗಕ್ಕೆ ಮರಳಿದ್ದುಂಟು. ಇಲ್ಲಿ ರಾಜಕೀಯಕ್ಕೆ ಬಂದ ಕನ್ನಡ ಸಿನಿತಾರೆಯರ ವಿವಿರಗಳಿವೆ.

    cover image
    ಅಂಬರೀಶ್

    ಅಂಬರೀಶ್

    1

    ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಚಿತ್ರರಂಗ ಮಾತ್ರವಲ್ಲದೆ ರಾಜಕೀಯದಲ್ಲೂ ಯಶಸ್ಸು ಸಾಧಿಸಿದರು.  ಜೆಡಿಎಸ್ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದ ಅಂಬಿ ನಂತರ ಮೂರು ಬಾರಿ ಲೋಕಸಭೆಗೆ ಮತ್ತು ಒಂದು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದರು.  2008 ರಲ್ಲಿ  ಕಾವೇರಿ ಹೋರಾಟದಲ್ಲಿ  ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2013 ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ವಸತಿ ಸಚಿವರಾಗಿದ್ದರು.

    ಜಗ್ಗೇಶ್

    ಜಗ್ಗೇಶ್

    2

    ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡಿದ್ದ ಜಗ್ಗೇಶ್ ೨೦೦೮ ರಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಜಯ ಗಳಿಸಿ ಶಾಸಕರಾಗಿದ್ದರು.  ನಂತರ ೨೦೦೯ ರಲ್ಲಿ ಆಪರೇಷನ್ ಕಮಲದ ಸಂದರ್ಭದಲ್ಲಿ ಬಿಜೆಪಿ ಸೇರಿದರು. ನಂತರ ವಿಧಾನ ಪರಿಷತ್ ಸದಸ್ಯರಾಗಿ ಸಚಿವರು ಆಗಿದ್ದರು. ೨೦೧೮ ರ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 

    ಉಪೇಂದ್ರ

    ಉಪೇಂದ್ರ

    3

    ತಮ್ಮ ವಿಭಿನ್ನ ಆಲೋಚನೆಗಳಿಗೆ ಹೆಸರುವಾಸಿಯಾಗಿರುವ ಉಪೇಂದ್ರ ರಾಜಕೀಯಕ್ಕೆ ಇನ್ನೊಂದು ಆಯಾಮ ನೀಡಲು ಪ್ರಜಾಕೀಯ ಪಕ್ಷ ಸ್ಥಾಪಿಸಿ ಸಕ್ರಿಯ ರಾಜಕಾರಣಕ್ಕೆ ಇಳಿದರು. ಯಾವುದೇ ಪ್ರಲೋಭೆಗಳಿಲ್ಲದೆ, ಸಮಾಜಮುಖಿಯಾಗಿ ಕೆಲಸ ಮಾಡುವ ಉದ್ದೇಶದಿಂದ ಉಪ್ಪಿ ಪ್ರಯತ್ನಿಸುತ್ತಿದ್ದಾರೆ.

    ಕುಮಾರ್ ಬಂಗಾರಪ್ಪ

    ಕುಮಾರ್ ಬಂಗಾರಪ್ಪ

    4

    1996 ರಲ್ಲಿ ಬಂಗಾರೆಪ್ಪ ಲೋಕಸಭೆಗೆ ಆಯ್ಕೆಯಾಗಿದ್ದರಿಂದ, ನಟನಾಗಿ ಚಿತ್ರರಂಗದಲ್ಲಿ ಆಗಷ್ಟೇ ಬೆಳೆಯುತ್ತಿದ್ದ ಕುಮಾರ್ ಬಂಗಾರೆಪ್ಪ ಸೊರಬ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ನಂತರ 1999, 2004 ರಲ್ಲಿ ಮತ್ತೆ ಸೊರಬ ಕ್ಷೇತ್ರದಿಂದ ಆಯ್ಕೆಯಾದರು. ಪೌರಾಡಳಿತ ಸಚಿವರು ಕೂಡ ಆಗಿದ್ದರು. 2008 ರಲ್ಲಿ ಕುಟಂಬ ಕಲಹದಿಂದ ಮಧು ಬಂಗಾರೆಪ್ಪ ಕೂಡ ಸೊರಬ ಕ್ಷೇತ್ರದಿಂದ ಎಲೆಕ್ಷನ್ ಸ್ಪರ್ಧಿಸಿದ್ದರಿಂದ, ಇಬ್ಬರು ಸಹೋದರರು ಬಿಜೆಪಿಯ ಹರತಾಳು ಹಾಲಪ್ಪ ವಿರುದ್ಧ ಸೋತರು. 2013 ರಲ್ಲಿ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ ಸಹೋದರ ಮಧು ಬಂಗಾರೆಪ್ಪ ವಿರುದ್ಧ ಸೋತರು. ನಂತರ 2018 ರಲ್ಲಿ ಬಿಜೆಪಿ ಟಿಕೆಟ್ ನಿಂದ ಗೆದ್ದರು.

    ರಮ್ಯಾ

    ರಮ್ಯಾ

    5

    2012 ರಲ್ಲಿ ರಾಷ್ಟೀಯ ಕಾಂಗ್ರೆಸ್ ಪಕ್ಷ ಸೇರಿದ ರಮ್ಯಾ 2013 ರಲ್ಲಿ ಮಂಡ್ಯ ಲೋಕಸಭೆಯ ಬೈ-ಎಲೆಕ್ಷನ್ ನಲ್ಲಿ ಜಯ ಗಳಿಸಿದರು. 2014 ರಲ್ಲಿ ಮರಳಿ ಮಂಡ್ಯ ಲೋಕಸಬೆಗೆ ಸ್ಪರ್ಧಿಸಿದ ರಮ್ಯಾ ಸಿ.ಎಸ್.ಪುಟ್ಟರಾಜು ವಿರುದ್ಧ ಸೋತರು. 2017 ರಲ್ಲಿ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥಾರಗಿದ್ದರು. 2019 ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಪಕ್ಷದಿಂದ ಬಹಿರಂಗವಾಗಿ ನಿಷ್ಕ್ರಿಯವಾದರು. 

    ಬಿ.ಸಿ.ಪಾಟೀಲ್

    ಬಿ.ಸಿ.ಪಾಟೀಲ್

    6

    ವಿಷ್ಣುವರ್ಧನ್ ನಿಷ್ಕರ್ಷ ಚಿತ್ರದಿಂದ ಸಿನಿರಂಗ ಪ್ರವೇಶಿಸಿದ ಬಿ.ಸಿ.ಪಾಟೀಲ್ ವೃತ್ತಿಯಲ್ಲಿ ಪೋಲಿಸ್. ಹಿರೇಕೆರೂರ್ ಕ್ಷೇತ್ರದಿಂದ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದ ಬಿ,ಸಿ.ಪಾಟೀಲ್ 2019 ರಲ್ಲಿ ಬಂಡಾಯ ಅಭ್ಯರ್ಥಿಗಳೊಂದಿಗೆ ಬಿಜೆಪಿ ಸೇರಿದರು. ನಂತರ ಉಪ ಚುಣಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರೂ ಆದರು.

    ಉಮಾಶ್ರಿ

    ಉಮಾಶ್ರಿ

    7

    ಚಿತ್ರರಂಗದಲ್ಲಿ ತಮ್ಮ ಹಾಸ್ಯ ಮತ್ತು ಪ್ರಬುದ್ಧ ನಟನೆಯಿಂದ ಪ್ರಸಿದ್ಧಿ ಪಡೆದಿರುವ ಉಮಾಶ್ರೀ 2013 ರಲ್ಲಿ ತೇರದಾಳ್ ಮತಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಸಿದ್ಧರಾಮಯ್ಯ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವರು ಆಗಿದ್ದರು,

    ತಾರಾ

    ತಾರಾ

    8

    ಬಿಜೆಪಿ ಕಾರ್ಯಕರ್ತೆಯಾಗಿ ಸಕ್ರಿಯವಾಗಿರುವ ತಾರಾ ಪ್ರಸ್ತುತ ಯಡ್ಯೂರಪ್ಪ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಇಲಾಖೆ ಅಧ್ಯಕ್ಷರಾಗಿದ್ದಾರೆ. 2012 ರಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿ ಅದೇ ವರ್ಷ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾದರು.

    ಸುಮಲತಾ

    ಸುಮಲತಾ

    9

    ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಸುಮಲತಾರವರು, ಅಂಬಿ ನಿಧನದ ನಂತರ 2019 ರಲ್ಲಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಜಯಭೇರಿ ಗಳಿಸಿದರು.

    ನಿಖಿಲ್ ಗೌಡ

    ನಿಖಿಲ್ ಗೌಡ

    10

    ಕರ್ನಾಟಕ ಅತಿ ದೊಡ್ಡ ರಾಜಕೀಯ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ. ಚಿತ್ರರಂಗದ ಜೊತೆಗೆ ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ನಿಖಿಲ್ ಜೆಡಿಎಸ್ ರಾಜ್ಯ ಯುವ ಘಟಕ ಮುಖ್ಯಸ್ಥರು ಕೂಡ, ಜಿದ್ದಾಜಿದ್ದಿನ ಕಣ ಮಂಡ್ಯ ಲೋಕಸಭೆಯಲ್ಲಿ ಸುಮಲತಾ ವಿರುದ್ಧ ಸೋಲು ಅನುಭವಿಸಿದರು. ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷದ ಆಧಾರ ಸ್ತಂಭವಾಗುವ ನಿರೀಕ್ಷೆ ಮೂಡಿಸಿದ್ದಾರೆ.

    ಮಾಳವಿಕಾ ಅವಿನಾಶ್

    ಮಾಳವಿಕಾ ಅವಿನಾಶ್

    11

    ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಾಳವಿಕಾ ಅವಿನಾಶ್ 2013 ರಿಂದ ಬಿಜೆಪಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಬಿಜೆಪಿ ವಕ್ತಾರರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

    ಕೆ ಶಿವರಾಮ್

    ಕೆ ಶಿವರಾಮ್

    12

    ಬಾ ನಲ್ಲೆ ಮಧುಚಂದ್ರಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಕೆ ಶಿವರಾಮ್ ವೃತ್ತಿಯಲ್ಲಿ ಐಎಎಸ್ ಅಧಿಕಾರಿಯಾಗಿದ್ದರು. 2013 ರಲ್ಲಿ ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದರು. ಛಲವಾದಿ ಮಹಸಭಾ ಅಧ್ಯಕ್ಷರಾಗಿದ್ದರು. ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ.

    ಅನಂತ್ ನಾಗ್

    ಅನಂತ್ ನಾಗ್

    13

    ಅನಂತನಾಗ್ ವಿಧಾನ ಪರಿಷತ್ ಮತ್ತು ವಿಧಾನ ಸಭೆಗೆ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಜೆ.ಹೆಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. 2004 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆಗಿನ ಮುಖ್ಯಮಂತ್ರಿ ಎಸ್,ಎ,ಕೃಷ್ಣ ಮತ್ತು ಬಿಜೆಪಿಯ ಮುಖ್ಯಮಂತ್ರಿ ಚಂದ್ರು ವಿರುದ್ಧ ಸ್ಪರ್ಧಿಸಿದ್ದರು.ನಂತರ ರಾಜಕೀಯದಿಂದ ದೂರ ಸರಿದು ಪೂರ್ಣವಾಗಿ ಸಿನಿಮಾಗಳಲ್ಲಿ ಸಕ್ರಿಯರಾದರು.

    ಶಶಿಕುಮಾರ್

    ಶಶಿಕುಮಾರ್

    14

    ಅನಂತನಾಗ್ ವಿಧಾನ ಪರಿಷತ್ ಮತ್ತು ವಿಧಾನ ಸಭೆಗೆ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಜೆ.ಹೆಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. 2004 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆಗಿನ ಮುಖ್ಯಮಂತ್ರಿ ಎಸ್,ಎ,ಕೃಷ್ಣ ಮತ್ತು ಬಿಜೆಪಿಯ ಮುಖ್ಯಮಂತ್ರಿ ಚಂದ್ರು ವಿರುದ್ಧ ಸ್ಪರ್ಧಿಸಿದ್ದರು.ನಂತರ ರಾಜಕೀಯದಿಂದ ದೂರ ಸರಿದು ಪೂರ್ಣವಾಗಿ ಸಿನಿಮಾಗಳಲ್ಲಿ ಸಕ್ರಿಯರಾದರು.

    ಸುದೀಪ್

    ಸುದೀಪ್

    15

    ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿಯಾಗುತ್ತಾರೆಎಂಬ ಸುದ್ದಿ ಪ್ರತಿಬಾರಿ ಎಲೆಕ್ಷನ್ ಬಂದಾಗಲೂ ಕೇಳಿಬರುತ್ತಲೇ ಇರುತ್ತದೆ. ಆದರೆ, ಅಭಿನಯ ಚಕ್ರವರ್ತಿ ಯಾವ ಪಕ್ಷವನ್ನು ಸೇರಿರಲಿಲ್ಲ. ಆದರೆ, ಈ ಬಾರಿ ಅಂದರೆ, 2023ರಲ್ಲಿ ನಡೆಯಲಿರುವ 16ನೇ ವಿಧಾನಸಭೆ ಚುನಾವಣೆಗೂ ಮುನ್ನ ಸುದೀಪ್ ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ಖಚಿತ ಮಾಹಿತಿಯಿದೆ. ಅದರಂತೆ ಏಪ್ರಿಲ್‌ 5ರ ಹಿರಿಯ ಮುಖಂಡರ ಸಮ್ಮುಖದಲ್ಲಿ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆದರೆ, ಈ ಬಾರಿಯ ವಿಧಾನಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಮಾಡಿರುವ ಮನವಿಗೆ ಸ್ಪಂದಿಸಿರುವ ಸುದೀಪ್, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಬದಲಾಗಿ 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ ಎಂದಿದ್ದಾರಂತೆ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X