twitter
    X
    Home ಚಲನಚಿತ್ರಗಳ ಒಳನೋಟ

    ಖಳನಾಯಕರಾಗಿ ಚಿತ್ರರಂಗ ಪ್ರವೇಶಿಸಿ, ನಾಯಕನಟರಾಗಿರುವ ಕನ್ನಡ ಸಿನಿತಾರೆಯರು

    Author | Updated: Friday, February 3, 2023, 12:13 PM [IST]

    ಕನ್ನಡ ಚಿತ್ರರಂಗ ಅನೇಕ ಬಹುಮುಖ ಪ್ರತಿಭೆಗಳ ತಾಣ. ನಟನಾಗಿ, ಖಳನಾಯಕನಾಗಿ,ಹಾಸ್ಯನಟನಾಗಿ ಹೀಗೆ ಬಹುತೇಕ ಪಾತ್ರಗಳ ಮೂಲಕ ಅನೇಕ ಕಲಾವಿದರು ಅವಿಸ್ಮರಣೀಯರಾಗಿದ್ದಾರೆ.ಆರಂಭದಲ್ಲಿ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿ,ತಮ್ಮ ಘರ್ಜನೆ ಮೂಲಕ ಅಭಿಮಾನಿಗಳನ್ನು ರಂಜಿಸಿ ನಂತರ ಯಶಸ್ವಿ ನಾಯಕರಾಗಿ ಮಿಂಚಿರುವ ಕೆಲವು ನಟರನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಜಲೀಲ್ ಅಂಬಿಯಿಂದ ಹಿಡಿದು ಈಗಿನ ಲೂಸ ಮಾದ ಯೋಗೇಶ್ ವರೆಗೆ ಈ ಲಿಸ್ಟನಲ್ಲಿದ್ದಾರೆ.

    cover image
    Naagarahaavu

    Naagarahaavu

    1

    ಪುಟ್ಟಣ್ಣ ಕಣಗಾಲ್ ರ `ನಾಗರಹಾವು' ಚಿತ್ರದ ಜಲೀಲ ಪಾತ್ರದ ಮೂಲಕ ರೆಬೆಲ್ ಸ್ಟಾರ್ ಅಂಬಿ ಸಿನಿರಂಗ ಪ್ರವೇಶಿಸಿದರು. ಈ ಚಿತ್ರದ ಮೂಲಕ ಅಂಬಿ-ವಿಷ್ಣು ಸ್ನೇಹ ಆರಂಭವಾಯಿತು.

    ಟೈಗರ್ ಪ್ರಭಾಕರ್

    ಟೈಗರ್ ಪ್ರಭಾಕರ್

    2

    ಟೈಗರ್ ಪ್ರಭಾಕರ್ `ಕಾಡಿನ ರಹಸ್ಯ' ಚಿತ್ರದಲ್ಲಿ ಖಳನಾಯಕನ ಪಾತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು.

    ದೇವರಾಜ್

    ದೇವರಾಜ್

    3

    ಡೈನಾಮಿಕ್ ಸ್ಟಾರ್ ದೇವರಾಜ್ `27 ಮಾವಳ್ಳಿ ಸರ್ಕಲ್' ಚಿತ್ರದಲ್ಲಿ ಖಳನಾಯಕನ ಪಾತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು.

    ಶಶಿಕುಮಾರ್

    ಶಶಿಕುಮಾರ್

    4

    ಶಶಿಕುಮಾರ್ `ಚಿರಂಜೀವಿ ಸುಧಾಕರ್' ಚಿತ್ರದಲ್ಲಿ ಖಳನಾಯಕನ ಪಾತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು. 1990 ರಲ್ಲಿ ತೆರೆಕಂಡ `ಬಾರೇ ನನ್ನ ಮುದ್ದಿನ ರಾಣಿ' ಚಿತ್ರದಿಂದ ನಾಯಕನಾಗಿ ನಟಿಸಲು ಆರಂಭಿಸಿದರು.

    ಜಗ್ಗೇಶ್

    ಜಗ್ಗೇಶ್

    5

    ಇಬ್ಬನಿ ಕರಗಿತು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನವರಸ ನಾಯಕ ಜಗ್ಗೇಶ್ ತಮ್ಮ ಸಿನಿ ಕರಿಯರ್ ಆರಂಭದಲ್ಲಿ ಕೆಲವು ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ.

    ಶ್ರೀ ನಗರ ಕಿಟ್ಟಿ

    ಶ್ರೀ ನಗರ ಕಿಟ್ಟಿ

    6

    ಕಿರುತೆರೆಯಲ್ಲಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ಶ್ರೀನಗರ ಕಿಟ್ಟಿ `ಚಂದ್ರ ಚಕೋರಿ' ಚಿತ್ರದಲ್ಲಿ ಖಳನಾಯಕನ ಪಾತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಇವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ಗಿರಿ.

    Ranga (S.S.L.C)

    Ranga (S.S.L.C)

    7

    ದುನಿಯಾ ವಿಜಯ್ `ರಂಗ ಎಸ್.ಎಸ್.ಎಲ್.ಸಿ' ಚಿತ್ರದ ಮೂಲಕ ಖಳನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ನಂತರ ಸೂರಿ ನಿರ್ದೇಶನದ `ದುನಿಯಾ' ಚಿತ್ರದ ಮೂಲಕ ನಾಯಕನಾಗಿ ಸಿನಿ ಜರ್ನಿ ಅಭಿನಯಿಸಿದರು.

    ಗಣೇಶ್

    ಗಣೇಶ್

    8

    ಗೋಲ್ಡನ್ ಸ್ಟಾರ್ ಗಣೇಶ್ `ಟಪೋರಿ' ಎಂಬ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದರು. ನಂತರ ಎಂ.ಡಿ.ಶ್ರೀಧರ್ ನಿರ್ದೇಶನದ `ಚೆಲ್ಲಾಟ' ಚಿತ್ರದ ಮೂಲಕ ನಾಯಕನಾಗಿ ಸಿನಿ ಜರ್ನಿ ಅಭಿನಯಿಸಿದರು.

    Duniya

    Duniya

    9

    ಸೂರಿ ನಿರ್ದೇಶನದ ದುನಿಯಾ ಚಿತ್ರದಲ್ಲಿ ಲೂಸ ಮಾದ ಪಾತ್ರ ಮಾಡುವ ಮೂಲಕ ಯೋಗೇಶ್ ಸಿನಿಪಯಣ ಆರಂಭಿಸಿದರು. `ನಂದ ಲವ್ಸ್ ನಂದಿತ' ಚಿತ್ರದಿಂದ ನಾಯಕನಾಗಿ ಸಿನಿ ಜರ್ನಿ ಆರಂಭಿಸಿದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X