twitter
    X
    Home ಚಲನಚಿತ್ರಗಳ ಒಳನೋಟ

    ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿರುವ 13 ಸ್ಯಾಂಡಲ್‌ವುಡ್ ಸ್ಟಾರ್ ನಟರ ಪಟ್ಟಿ ಇಲ್ಲಿದೆ.

    Author Administrator | Updated: Wednesday, May 3, 2023, 05:13 PM [IST]

    ಕನ್ನಡ ಚಿತ್ರರಂಗದಲ್ಲಿ ನಾಯಕನಟರು ತಮ್ಮ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದು ಈಗ ಇತಿಹಾಸ. ಹೀಗೆ ತಮ್ಮ ಅಭಿರುಚಿ ಮತ್ತು ಇಮೇಜಿಗೆ ತಕ್ಕಂತೆ ಮತ್ತೊಬ್ಬರ ಮೇಲೆ ಅವಲಂಬನೆ ಇಲ್ಲದೇ ತಮ್ಮ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡುವುದು ಸುಲಭ.. ಹೀಗೆ ಕನ್ನಡದಲ್ಲಿ ತಮ್ಮ ಸ್ವಂತ ಬ್ಯಾನರ್ ಹೊಂದಿರುವ ಪ್ರಮುಖ ನಟರನ್ನು ಈ ಕೆಳಗೆ ನೀಡಲಾಗಿದೆ.

    cover image
    ದ್ವಾರಕೀಶ್ ಚಿತ್ರ

    ದ್ವಾರಕೀಶ್ ಚಿತ್ರ

    1

    ಮಮತೆಯ ಬಂಧನ ಎಂಬ ಚಿತ್ರವನ್ನು ಸಹ ನಿರ್ಮಾಣ ಮಾಡಿದ್ದ ದ್ವಾರಕೀಶ್ ಅವರು ನಂತರ 1969ರಲ್ಲಿ ದ್ವಾರಕೀಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೇಯರ್ ಮುತ್ತಣ್ಣ ಚಿತ್ರವನ್ನು ನಿರ್ಮಿಸಿದರು. ಪ್ರಸ್ತುತ `ದ್ವಾರಕೀಶ್ ಚಿತ್ರ' ಬ್ಯಾನರ್ ಅಡಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳು ನಿರ್ಮಾಣವಾಗಿವೆ.

    ವಜ್ರೇಶ್ವರಿ ಕಂಬೈನ್ಸ್ & ಪೂರ್ಣಿಮಾ ಎಂಟರ್‍ಪ್ರೈಸಸ್

    ವಜ್ರೇಶ್ವರಿ ಕಂಬೈನ್ಸ್ & ಪೂರ್ಣಿಮಾ ಎಂಟರ್‍ಪ್ರೈಸಸ್

    2

    ಕೆಲ ನಿರ್ಮಾಪಕರು ರಾಜ್ ಚಿತ್ರಗಳು ಹಿಟ್ ಆದರೂ ಚಿತ್ರ ನಷ್ಟಕ್ಕೊಳಗಾಗಿವೆ ಎಂದಾಗ ರಾಜ್ ದಂಪತಿ ತಮ್ಮದೇ ಪ್ರೊಡಕ್ಸನ್ ಹೌಸ್ ಆರಂಭಿಸಲು ತೀರ್ಮಾನ ಮಾಡಿದರು.ಇದರ ಪರಿಣಾಮವೇ ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್‍ಪ್ರೈಸಸ್. 1975 ರಿಂದ ಡಾ.ರಾಜ್‌ಕುಮಾರ್ ತಮ್ಮದೇ ಬ್ಯಾನರ್ ಅಡಿಯಲ್ಲಿ ಸುಮಾರು 35 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. 

    ಈಶ್ವರಿ ಪ್ರೊಡಕ್ಷನ್ಸ್

    ಈಶ್ವರಿ ಪ್ರೊಡಕ್ಷನ್ಸ್

    3

    ತಮ್ಮ ತಂದೆ ಎನ್ ವೀರಾಸ್ವಾಮಿಯಿಂದ ಸ್ಥಾಪಿಸಲ್ಪಟ್ಟ ಈಶ್ವರಿ ಪ್ರೊಡಕ್ಷನ್ಸ್‌ನಲ್ಲಿ ರವಿಚಂದ್ರನ್ ಅವರು ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ ಖದೀಮ ಕಳ್ಳರು, ಚಕ್ರವ್ಯೂಹ, ಪ್ರೇಮಲೋಕ, ರಣಧೀರ ಮುಂತಾದ ಹಿಟ್ ಚಿತ್ರಗಳನ್ನು ಕ್ರೇಜಿಸ್ಟಾರ್ ನಿರ್ಮಿಸಿದ್ದಾರೆ.

    ಕಿಚ್ಚ ಕ್ರಿಯೇಷನ್ಸ್

    ಕಿಚ್ಚ ಕ್ರಿಯೇಷನ್ಸ್

    4

    2006ರಲ್ಲಿ ತೆರೆಕಂಡ ಮೈ ಆಟೋಗ್ರಾಪ್ ಚಿತ್ರದ ಮೂಲಕ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಆರಂಭವಾಯಿತು. ನಂತರ ಈ ಬ್ಯಾನರ್ ಅಡಿಯಲ್ಲಿ 73 ಶಾಂತಿ ನಿವಾಸ, ಮಾಣಿಕ್ಯ, ಜಿಗರಥಂಡ, ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಗಳ ಜೊತೆಗೆ ವಾರಸ್ದಾರ ಎಂಬ ಸೀರಿಯಲ್ ಅನ್ನು ನಿರ್ಮಿಸಿದ್ದಾರೆ.

    ಗೋಲ್ಡನ್ ಮೂವೀಸ್

    ಗೋಲ್ಡನ್ ಮೂವೀಸ್

    5

    2009ರಲ್ಲಿ ತೆರೆಕಂಡ ಮಳೆಯಲಿ ಜೊತೆಯಲಿ ಚಿತ್ರದ ಮೂಲಕ ಗಣೇಶ್ ಅವರ ಗೋಲ್ಡನ್ ಮೂವೀಸ್ ಸಂಸ್ಥೆ ಆರಂಭವಾಯಿತು. ಗಣೇಶ್ ಪತ್ನಿ ಶಿಲ್ಪಾ ಅವರು ಮುನ್ನೆಡುಸುವ ಈ ಬ್ಯಾನರ್ ಅಡಿಯಲ್ಲಿ ಕೂಲ್ ಸಖತ್ ಹಾಟ್ ಮಗ, ಮುಗುಳು ನಗೆ, ಗೀತಾ ಚಿತ್ರಗಳು ಮೂಡಿಬಂದಿವೆ.

    ತೂಗುದೀಪ ಪ್ರೊಡಕ್ಷನ್ಸ್

    ತೂಗುದೀಪ ಪ್ರೊಡಕ್ಷನ್ಸ್

    6

    ದರ್ಶನ್ 2006ರಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಸಂಸ್ಥೆ ಆರಂಭಿಸಿ, ಜೊತೆ ಜೊತೆಯಲ್ಲಿ ಚಿತ್ರ ನಿರ್ಮಿಸಿದರು. ನಂತರ ಈ ಬ್ಯಾನರ್ ಅಡಿಯಲ್ಲಿ ಬುಲ್ ಬುಲ್ ಚಿತ್ರ ಕೂಡ ನಿರ್ಮಾಣವಾಯಿತು. ಇದೇ ಹೆಸರಿನಲ್ಲಿರುವ ಚಿತ್ರ ವಿತರಣೆ ಸಂಸ್ಥೆ ಬೃಂದಾವನ, ಒಗ್ಗರಣೆ, ಜೈಲಲಿತಾ, ಉಗ್ರಂ, ಪರಮಶಿವ ಮುಂತಾದ ಚಿತ್ರಗಳನ್ನು ವಿತರಿಸಿದೆ.

    ಉಪೇಂದ್ರ ಪ್ರೊಡಕ್ಷನ್ಸ್

    ಉಪೇಂದ್ರ ಪ್ರೊಡಕ್ಷನ್ಸ್

    7

    ಉಪೇಂದ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು 2014ರಲ್ಲಿ ತೆರೆಕಂಡ ಉಪ್ಪಿ 2 ಚಿತ್ರವನ್ನು ನಿರ್ಮಿಸಿದರು. ಈ ಚಿತ್ರ 2001ರಲ್ಲಿ ತೆರೆಕಂಡ ಉಪೇಂದ್ರ ಚಿತ್ರದ ಮುಂದುವರೆದ ಭಾಗವಾಗಿತ್ತು.

    ಪಿ.ಆರ್.ಕೆ ಪ್ರೊಡಕ್ಷನ್ಸ್

    ಪಿ.ಆರ್.ಕೆ ಪ್ರೊಡಕ್ಷನ್ಸ್

    8

    ತಮ್ಮ ತಾಯಿ ಪಾರ್ವತಮ್ಮ ರಾಜಕುಮಾರ್ ಹೆಸರಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪಿ.ಆರ್.ಕೆ ಪ್ರೊಡಕ್ಷನ್ಸ್ ಹೌಸ್ ಮತ್ತು ಆಡಿಯೋ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ ಈಗಾಗಲೇ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಸದ್ಯ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 

    ಸತೀಶ್ ಪಿಕ್ಚರ್ಸ್

    ಸತೀಶ್ ಪಿಕ್ಚರ್ಸ್

    9

    ನಟ ಸತೀಶ್ ನೀನಾಸಂ 2014ರಲ್ಲಿ ಸತೀಶ್ ಪಿಕ್ಚರ್ಸ್ ಅಡಿಯಲ್ಲಿ 'ರಾಕೆಟ್' ಚಿತ್ರವನ್ನು ನಿರ್ಮಿಸಿದರು. ನಂತರ ರಾಜ್ಯ ಪ್ರಶಸ್ತಿ ವಿಜೇತ `ಚೌಕಾಬಾರ' ಎಂಬ ಕಿರುಚಿತ್ರ ಕೂಡ ನಿರ್ಮಿಸಿದರು. ಇದರ ಜೊತೆಗೆ ಕಾಜಿ, ವಡ್ಡಾರಾಧಕ ಎಂಬ ಕಿರುಚಿತ್ರಗಳು ಈ ಬ್ಯಾನರ್ ಅಡಿಯಲ್ಲಿ ಮೂಡಿಬಂದಿವೆ.

    ದುನಿಯಾ ಟಾಕೀಸ್

    ದುನಿಯಾ ಟಾಕೀಸ್

    10

    2013ರಲ್ಲಿ ತೆರೆಕಂಡ ಜಯಮ್ಮನ ಮಗ ಚಿತ್ರದ ಮೂಲಕ ದುನಿಯಾ ವಿಜಯ್ ಅವರು `ದುನಿಯಾ ಟಾಕೀಸ್' ಬ್ಯಾನರ್ ಸ್ಥಾಪಿಸಿ, ಮೊದಲ ಬಾರಿಗೆ ನಿರ್ಮಾಪಕರಾದರು.

    ಪರಂವಃ ಸ್ಟುಡಿಯೋಸ್

    ಪರಂವಃ ಸ್ಟುಡಿಯೋಸ್

    11

    2015ರಲ್ಲಿ ರಕ್ಷಿತ್ ಶೆಟ್ಟಿಯವರಿಂದ ಆರಂಭವಾದ ಪರಂವಃ ಸ್ಟುಡಿಯೋಸ್, 2016ರಲ್ಲಿ ಪುಷ್ಕರ ಫಿಲ್ಮ್ಸ್ ಜೊತೆ ಸೇರಿ ಕಿರಿಕ್ ಪಾರ್ಟಿ ಚಿತ್ರ ನಿರ್ಮಿಸಿತು. ಇದೇ ಬ್ಯಾನರ್ ಅಡಿಯಲ್ಲಿ ಹಂಬಲ್ ಪೊಲಿಟಿಷಿಯನ್ ನೊಗರಾಜ್, ಭೀಮಸೇನ ನಳಮಹರಾಜ, 777 ಚಾರ್ಲಿ ಮುಂತಾದ ಚಿತ್ರಗಳು ಮೂಡಿಬಂದಿವೆ. ಅವನೇ ಶ್ರೀಮನ್ನಾರಾಯಣ ಚಿತ್ರವೂ ಈ ಬ್ಯಾನರ್ ಮತ್ತು ಪುಷ್ಕರ ಫಿಲ್ಮ್ಸ್ ಅಡಿಯಲ್ಲಿ ಮೂಡಿಬಂದಿವೆ.

    ಶ್ರೀಮುತ್ತು ಸಿನಿ ಸರ್ವೀಸ್

    ಶ್ರೀಮುತ್ತು ಸಿನಿ ಸರ್ವೀಸ್

    12

    2017ರ ನವೆಂಬರ್ 18ರಂದು ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಶ್ರೀಮುತ್ತು ಸಿನಿ ಸರ್ವೀಸ್ ಹೆಸರಿನ ಪ್ರೊಡಕ್ಷನ್ಸ್ ಬ್ಯಾನರ್ ಆರಂಭಿಸಿದರು. ಶಿವಣ್ಣ ಪುತ್ರಿ ನಿವೇದಿತಾ ಅವರು ಮುನ್ನಡೆಸುತ್ತಿರುವ ಈ ಬ್ಯಾನರ್ ಅಡಿಯಲ್ಲಿ ಹೇಟ್ ಯು ರೋಮಿಯೋ, ಹನಿಮೂನ್ ವೆಬ್ ಸೀರಿಸ್‌ಗಳು ನಿರ್ಮಾಣವಾಗಿವೆ.

    ಡಾಲಿ ಪಿಕ್ಚರ್ಸ್

    ಡಾಲಿ ಪಿಕ್ಚರ್ಸ್

    13

    ನಟ ಧನಂಜಯ್ ತಮ್ಮ ಹೋಮ್ ಬ್ಯಾನರ್ ಆರಂಭಿಸಿದ್ದು, ಅದಕ್ಕೆ ಡಾಲಿ ಪಿಚ್ಚರ್ ಎಂದು ಹೆಸರಿಟಿದ್ದಾರೆ. ಜೊತೆಗೆ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರತಿ ವರ್ಷ ಕನಿಷ್ಠ 2 ಸಿನಿಮಾ ನಿರ್ಮಿಸುವ ಭರವಸೆ ನೀಡಿದ್ದಾರೆ. ಪ್ರಮುಖವಾಗಿ 2 ಸಿನಿಮಾಗಳಲ್ಲಿ ಒಂದು ಸಿನಿಮಾ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಹೇಳಿದ್ದಾರೆ.     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X