twitter
    X
    Home ಚಲನಚಿತ್ರಗಳ ಒಳನೋಟ

    ಕಾಂತಾರ 2 to ಪುಷ್ಪಾ 2: ಮುಂಬರುವ ಟಾಪ್ 10 ಸೀಕ್ವೆಲ್ ಸೌತ್ ಸಿನಿಮಾಗಳ ಪಟ್ಟಿ ಇಲ್ಲಿದೆ.

    Author Sowmya Bairappa | Updated: Wednesday, January 31, 2024, 11:08 AM [IST]

    ದಕ್ಷಿಣ ಭಾರತದ ಸಿನಿಮಾಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಸೌತ್ ಸಿನಿಮಾಗಳ ಮುಂದೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿವೆ. 2022ರಲ್ಲಿ ಬಿಡುಗಡೆಯಾದ ದಕ್ಷಿಣ ಭಾರತದ ಸಿನಿಮಾಗಳಲ್ಲಂತೂ ಊಹಿಸಲಾಗದಂತಹ ಯಶಸ್ಸು ಗಳಿಸಿವೆ. ಕೆಲ ಚಿತ್ರಗಳನ್ನು ಕಡಿಮೆ ವೆಚ್ಚದಲ್ಲಿ ಮಾಡಿದ್ದರೂ ಕೂಡ ಅವು ಬಾಕ್ಸಾಫೀಸ್‌ನಲ್ಲಿ ಕೋಟಿ-ಕೋಟಿ ಗಳಿಕೆ ಕಂಡಿವೆ. ಹೀಗಾಗಿ ಸೌತ್ ಸಿನಿಮಾಗಳ ಮೇಲೆ ನಿರೀಕ್ಷೆಗಳು ಹೆಚ್ಚುತ್ತಲೇ ಇವೆ. ಕನ್ನಡದ ಕಾಂತಾರ ಸೇರಿದಂತೆ ಇತ್ತೀಚಿನ ಅನೇಕ ಜನಪ್ರಿಯ ಸಿನಿಮಾಗಳು ಶೀಘ್ರದಲ್ಲಿಯೇ ಎರಡನೇ ಭಾಗಗಳನ್ನು ಎಂದರೆ ಸಿಕ್ವೆಲ್‌ಗಳನ್ನು ಹೊರತರಲು ಸಜ್ಜಾಗಿವೆ. ಹಾಗಾದರೆ, ಯಾವ ಸಿನಿಮಾಗಳ ಎರಡನೇ ಭಾಗಗಳು ಬರಲಿದೆ ಎಂಬ ಮಾಹಿತಿ ಇಲ್ಲಿದೆ.

    cover image
    ಪೊನ್ನಿಯಿನ್ ಸೆಲ್ವನ್ ಭಾಗ 2

    ಪೊನ್ನಿಯಿನ್ ಸೆಲ್ವನ್ ಭಾಗ 2

    1

    ಮಣಿರತ್ನಂ ನಿರ್ದೇಶನದ ಬಹುತಾರಾಗಣದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಹಿಟ್ ಆಗಿತ್ತು. ಈ ಚಿತ್ರ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಚಿತ್ರತಂಡ ಎರಡನೇ ಭಾಗ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಪೊನ್ನಿಯಿನ್ ಸೆಲ್ವನ್ ಭಾಗ 2ರ ಚಿತ್ರೀಕರಣ ಮುಗಿಯುವ ಹಂತದಲ್ಲಿದ್ದು, ಇತ್ತೀಚೆಗಷ್ಟೇ ಟೀಸರ್ ಬಿಡುಗಡೆ ಮಾಡಲಾಗಿದೆ. ಪೊನ್ನಿಯಿನ್ ಸೆಲ್ವನ್ ಸಿನಿಮಾ ಕಲ್ಕಿ ಕೃಷ್ಣಮೂರ್ತಿ ಅವರ ಮಹಾಕಾವ್ಯ ಕಾದಂಬರಿಯನ್ನು ಆಧರಿಸಿದೆ. ಚಿಯಾನ್ ವಿಕ್ರಂ,  ಐಶ್ವರ್ಯಾ ರೈ, ತ್ರಿಷಾ ಕೃಷ್ಣನ್, ಕಾರ್ತಿ ಸೇರಿದಂತೆ ಪೊನ್ನಿಯಿನ್ ಸೆಲ್ವನ್ ಭಾಗ ಒಂದರ ಬಹುತೇಕ ತಾರಾಗಣ ಭಾಗ 2ರಲ್ಲೂ ಇರಲಿದೆ.    

    ಆರ್.ಆರ್.ಆರ್ 2

    ಆರ್.ಆರ್.ಆರ್ 2

    2

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಡಿ.ವಿ.ವಿ ದಾನಯ್ಯ ಬಂಡವಾಳ ಹೂಡಿರುವ ಈ ಚಿತ್ರ ಸ್ವಾತಂತ್ಯ ಹೋರಾಟಗಾರರಾದ ಕೋಮರಾನ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ಜೀವನಾಧಾರಿತವಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹೀರೋಗಳಾಜಿ ನಟಿಸಿರುವ ಆರ್​ಆರ್​ಆರ್ ಸಿನಿಮಾ 1200  ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಇದೀಗ 2022ರಲ್ಲಿ  ಐಎಂಡಿಬಿ ಬಿಡುಗಡೆಗೊಳಿಸಿರುವ ಅತಿಹೆಚ್ಚು ಜನಪ್ರಿಯತೆ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ, ಆರ್.ಆರ್.ಆರ್ ಚಿತ್ರದ ಮುಂದುವರೆದ ಭಾಗ ಈ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಈ ಸಿನಿಮಾದ ನಿರ್ದೇಶಕರು ಕೆಲ ಸಂದರ್ಶನಗಳಲ್ಲಿ ಈ ಬಗ್ಗೆ ಮಾತಾನಾಡಿದ್ದಾರೆ.  

    ಕಾಂತಾರ 2

    ಕಾಂತಾರ 2

    3

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ 2022ರ ಸೆಪ್ಟೆಂಬರ್ 30ರಂದು ರಿಲೀಸ್ ಆಗಿ ಕನ್ನಡಿಗರ ಮನಗೆದ್ದಿತ್ತು. ಕನ್ನಡ ವರ್ಷನ್‌ನಿಂದಲೇ ವಿಶ್ವಾದ್ಯಂತ ಸಿನಿಪ್ರಿಯರ ಪ್ರೀತಿಯನ್ನು ಸಂಪಾದಿಸಿತ್ತು. ಈ ಮಧ್ಯೆ ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ 'ಕಾಂತಾರ' ಚಿತ್ರವನ್ನು ಡಬ್ ಮಾಡಲಾಗಿತ್ತು. ಕಾಂತಾರ ಸಿನಿಮಾ ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದು,  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿತ್ತು. ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲೇ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಮಾಡಲಿದ್ದು, ಇದನ್ನು ಕೂಡ ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸುತ್ತಿದೆ.  

     

    ಪುಷ್ಪಾ 2

    ಪುಷ್ಪಾ 2

    4

    ನಟ ಅಲ್ಲು ಅರ್ಜುನ್ ಹಾಗೂ ಸುಕುಮಾರನ್ ಕಾಂಬಿನೇಷನ್ ನಲ್ಲಿ ಮೂಡಿಬಂದ 'ಪುಷ್ಪ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಡಿಸೆಂಬರ್ 17, 2021ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ೨೦೨೩ರ ಜನವರಿ ಮೂರನೇ ವಾರದಲ್ಲಿ ಪುಷ್ಪಾ 2 ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಬ್ಯಾಂಕಾಕ್ ನ ದಟ್ಟ ಅರಣ್ಯದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇಲ್ಲಿಯೇ ಮೂವತ್ತು ದಿನ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆ.  

    ವಿಕ್ರಮ್ 2

    ವಿಕ್ರಮ್ 2

    5

    ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 420 ಕೋಟಿ ರೂಪಾಯಿ ಗಳಿಸಿದೆ. ಲೊಕೇಶ್ ಕನಕರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಕಮಲ್ ಹಾಸನ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು.  ಹಲವು ವರ್ಷಗಳ ಗ್ಯಾಪ್ ಬಳಿಕ ಕಮಲ್ ಹಾಸನ್ ಅಭಿಮಾನಿಗಳಿಗೆ ತಮ್ಮ ಪಾತ್ರದ ಮೂಲಕ ಕಿಕ್ ಕೊಟ್ಟಿದ್ದರು. ಈ ಸಿನಿಮಾದ 

    ಕೈಥಿ 2

    ಕೈಥಿ 2

    6

    ವಿಕ್ರಮ್ 2 ಸಿನಿಮಾ ಮಾಡುವುದಕ್ಕಿಂತ ಮೊದಲು ನಿರ್ದೇಶಕ ಲೋಕೇಶ್ ಕನಕರಾಜ್ ಪ್ರತಿಭಾವಂತ ನಟ ಕಾರ್ತಿ ಅವರೊಂದಿಗೆ ಬ್ಲಾಕ್ ಬಸ್ಟರ್ ಚಿತ್ರವಾದ ಕೈಥಿಯ ಮುಂದುವರೆದ ಭಾಗ ಮಾಡಲಿದ್ದಾರೆ.  

    ಎಲ್ 2: ಎಂಪೂರನ್

    ಎಲ್ 2: ಎಂಪೂರನ್

    7

    ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮೆಗಾ ಪ್ರಾಜೆಕ್ಟ್. ಇದು 2019ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಲೂಸಿಫರ್ ನ ಮುಂದುವರೆದ ಭಾಗವಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ಇದೊಂದು ಬಹುನಿರೀಕ್ಷಿತ ಸಿನಿಮಾ. ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರವೂ 2023ರ ಮಧ್ಯದ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ.

    ಮಿನ್ನಾಳ್ ಮುರುಳಿ 2

    ಮಿನ್ನಾಳ್ ಮುರುಳಿ 2

    8

    ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಬಾಸಿಲ್ ಜೋಸೆಫ್ ನಿರ್ದೇಶನದ ಮಿನ್ನಾಳ್ ಮುರುಳಿ ಸಿನಿಮಾದಲ್ಲಿ ಟೋವಿನೊ ಥಾಮಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅದರ ಮುಂದುವರೆದ ಭಾಗ ತೆರೆಗೆ ಬರುವುದು ಖಚಿತವಾಗಿದೆ. ನಿರ್ದೇಶಕ ಬಾಸಿಲ್ ಜೋಸೆಫ್ ಸಿನಿಮವೊಂದರಲ್ಲಿ ಬ್ಯುಸಿಯಾಗಿದ್ದು, ಅದಾದ ಬಳಿಕವಷ್ಟೇ ಮಿನ್ನಾಳ್ ಮುರುಳಿ 2 ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. 

    ಜನ ಗಣ ಮನ 2

    ಜನ ಗಣ ಮನ 2

    9

    ಡಿಜೋ ಜೋಸ್ ಆಂಟೋನಿ ನಿರ್ದೇಶನದ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಜನ ಗಣ ಮನ ಸಿನಿಮಾದ ಎರಡನೇ ಭಾಗ ತೆರೆಗೆ ಬರುವುದು ಬಹುತೇಕ ಖಚಿತವಾಗಿದೆ. ಈ ಸಿನಿಮಾದಲ್ಲಿ ಪೃಥ್ವಿರಾಜ್ ನಿರ್ವಹಿಸಿದ ಪಾತ್ರವಾದ ಅರವಿಂದ್ ಸ್ವಾಮಿನಾಥನ್ ಅವರ ಆರಂಭಿಕ ಜೀವನವನ್ನು ತೋರಿಸುತ್ತದೆ.  

     

    ಜೈ ಭೀಮ್ 2

    ಜೈ ಭೀಮ್ 2

    10

    ಜೈ ಭೀಮ್ ಸಿನಿಮಾ ನಿರ್ಮಾಪಕರು ಇತ್ತೀಚೆಗಷ್ಟೇ ತಮಿಳು ನಟ ಸೂರ್ಯ ಅಭಿನಯದ ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಮಾಹಿತಿಯನ್ನು ದೃಢಪಡಿಸಿದ್ದಾರೆ. ಈ ಸಿನಿಮಾ ರಾಷ್ಟ್ರ ಪ್ರಸ್ತಿಯನ್ನು ಪಡೆದುಕೊಂಡಿತ್ತು. ಇದೀಗ ಜೈ ಭೀಮ್ ಸಿನಿಮಾದ 2ನೇ ಭಾಗ ತೆರೆಮೇಲೆ ತರಲು ನಿರ್ಧರಿಸಲಾಗಿದೆ.  

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X