ಕಿಚ್ಚ ಸುದೀಪ್ ನಿರ್ದೇಶನದ ಚಲನಚಿತ್ರಗಳು

  ಕಿಚ್ಚ ಸುದೀಪ್ ತಮ್ಮ ಪ್ರಬುದ್ಧ ನಟನೆಯಿಂದ ಜನಮಾನಸದಲ್ಲಿ ಅಭಿನಯ ಚಕ್ರವರ್ತಿ ಎಂದು ಬಿರುದು ಪಡೆದಿದ್ದಾರೆ. ಆದರೆ ಸುದೀಪ್ ಕೇವಲ ನಟನಾಗಿ ಮಾತ್ರವಲ್ಲ ನಿರ್ದೇಶಕನಾಗಿ ಕೂಡ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ. 2006 ರಲ್ಲಿ ತೆರೆಕಂಡ `ಮೈ ಅಟೋಗ್ರಾಫ್' ಚಿತ್ರದಿಂದ ನಿರ್ದೇಶನಕ್ಕಿಳಿದರು. ತಮ್ಮ ಸಿನಜೀವನದ 20 ನೇ ಚಿತ್ರ ನಿರ್ದೇಶನ ಮಾಡಿದ ಸುದೀಪ್ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಪಡೆದರು. ಹೀಗೆ ನಿರ್ದೇಶಕನಾಗಿ ಸುದೀಪ್ ಆರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವುಗಳಲ್ಲಿ ನಾಲ್ಕು ಚಿತ್ರಗಳು ಬಾಕ್ಸಾಫೀಸಿನಲ್ಲಿ ಅಭೂತಪೂರ್ವ ಯಶಸ್ಸು ಪಡೆದರೆ, ಎರಡು ಚಿತ್ರಗಳು ಅತ್ಯುತ್ತಮ ವಿಮರ್ಶೆ ಪಡೆದುಕೊಂಡಿವೆ.

  1. ಮೈ ಆಟೋಗ್ರಾಫ್

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Drama

  ಬಿಡುಗಡೆ ದಿನಾಂಕ

  17 Feb 2006

  ಪಾತ್ರವರ್ಗ

  ಸುದೀಪ್,ಮೀನಾ

  ಸುದೀಪ್ ಮೊದಲ ಬಾರಿಗೆ ನಿರ್ದೇಶನ ಮಾಡಿದ ಚಿತ್ರ ಮೈ ಅಟೋಗ್ರಾಫ್. ನಿರ್ದೇಶನ ಮಾತ್ರವಲ್ಲದೇ ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಕೂಡ ಮಾಡಿದ್ದರು. ಈ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದು 175 ದಿನಗಳ ಕಾಲ ಪ್ರದರ್ಶನ ಕಂಡಿತು.

  2. #73,ಶಾಂತಿನಿವಾಸ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Drama

  ಬಿಡುಗಡೆ ದಿನಾಂಕ

  15 Jun 2007

  ಹಿಂದಿಯ ಬೇವರ್ಚಿ ಚಿತ್ರದ ರಿಮೇಕ್ ಆದ ಈ ಚಿತ್ರ 1991 ರಲ್ಲಿ ಕನ್ನಡದಲ್ಲಿ ಸಕಲಕಲಾ ವಲ್ಲಭ ಹೆಸರಿನಿಂದ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಸುದೀಪ್ ನಟನೆ, ನಿರ್ದೇಶನದೊಂದಿಗೆ ನಿರ್ಮಾಣ ಕೂಡ ಮಾಡಿದರು. ಸಾಹಸಸಿಂಹ ವಿಷ್ಣುವರ್ಧನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರೆ, ಶಿವರಾಜಕುಮಾರ್ ನಿರೂಪಣೆ ಧ್ವನಿ ನೀಡಿದ್ದರು.

  3. ವೀರ ಮದಕರಿ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  20 Mar 2009

  ತೆಲುಗು ವಿಕ್ರಮಾರ್ಕುಡು ರಿಮೇಕ್ ಆದ ಈ ಚಿತ್ರದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದರು. ಸುದೀಪ್ ನಿರ್ದೇಶನ, ಸಾಧುಕೋಕಿಲಾ ಸಂಭಾಷಣೆಯಲ್ಲಿ ಮೂಡಿಬಂದ ಚಿತ್ರ ಅಭೂತಪೂರ್ವ ಯಶಸ್ಸು ಪಡೆಯಿತು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X