ಕನ್ನಡ ಸ್ಟಾರ್ ನಟರ ಲೈಫ್‌ಟೈಮ್ ಬೆಸ್ಟ್ ಪಾತ್ರಗಳು

  ಕಲಾವಿದರು ನೂರಾರೂ ವಿಭಿನ್ನ ಪಾತ್ರಗಳಲ್ಲಿ ನಟಿಸಿ ನಮ್ಮನ್ನು ರಂಜಿಸಿದರೂ, ಕೆಲವು ಪಾತ್ರಗಳು ಮಾತ್ರ ಅವರ ಸಂಪೂರ್ಣ ಸಿನಿ ಜೀವನದ ವ್ಯಾಖ್ಯಾನದಂತಿರುತ್ತವೆ. ಇಲ್ಲಿ ಕನ್ನಡ ಪ್ರಮುಖ ನಟರ ಸಿನಿಜೀವನ ಲೈಫಟೈಮ್ ಬೆಸ್ಟ್ ಪಾತ್ರಗಳನ್ನು ನೀಡಲಾಗಿದೆ.
  1. ಡಾ.ರಾಜಕುಮಾರ್ - ಬಂಗಾರದ ಮನು‍ಷ್ಯ & ಕಸ್ತೂರಿ ನಿವಾಸ

  ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಸೇರಿದಂತೆ ಆಧುನಿಕ ಬಾಂಡ್ ಶೈಲಿಯ ಚಿತ್ರಗಳು ಸೇರಿದಂತೆ ಎಲ್ಲಾ ತರಹದ ಪಾತ್ರಗಳಲ್ಲಿಯೂ ಮಿಂಚಿರುವ ಡಾ.ರಾಜ್ ಎಲ್ಲ ಪಾತ್ರಗಳಲ್ಲಿಯೂ ಪರಕಾಯ ಪ್ರವೇಶ ಮಾಡುತ್ತಿದ್ದರು. ಬಂಗಾರದ ಮನು‍ಷ್ಯ ಮತ್ತು ಕಸ್ತೂರಿ ನಿವಾಸ ಚಿತ್ರಗಳಲ್ಲಿನ ರಾಜ್ ಪಾತ್ರಗಳು ಇಂದಿಗೂ ಅಮರ.

  2. ವಿಷ್ಣುವರ್ಧನ್ - ರಾಮಾಚಾರಿ & ಯಜಮಾನ
  ನಾಯಕನಾಗಿ ನಟಿಸಿದ ಮೊದಲ ಚಿತ್ರದಲ್ಲಿನ ರಾಮಾಚಾರಿ ಪಾತ್ರ ವಿಷ್ಣುವರ್ಧನ್ ರಿಗೆ ಆ್ಯಂಗ್ರಿ ಯಂಗ್ ಮ್ಯಾನ್ ಇಮೇಜ್ ನೀಡಿತು. ಚಿತ್ರದುರ್ಗದ ಐತಿಹಾಸಿಕ ಕೋಟೆಯಲ್ಲಿ ರಾಮಚಾರಿ ಸೃಷ್ಟಿಸಿದ ಮೋಡಿ ಇಂದಿಗೂ ಜೀವಂತ. ಸಹೋದರ ಬಾಂಧವ್ಯದ ಮೇಲೆ ಬೆಳಕು ಚೆಲ್ಲಿದ ಯಜಮಾನದಲ್ಲಿನ ವಿಷ್ಣು ಪಾತ್ರಗಳು ಕೂಡ ಗಮನಾರ್ಹ ಪ್ರಭಾವ ಬೀರಿವೆ. 
  3. ಶಂಕರ್ ನಾಗ್ - ಒಂದಾನೊಂದು ಕಾಲದಲ್ಲಿ & ಸಾಂಗ್ಲಿಯಾನ

  ಚಿತ್ರರಂಗದಲ್ಲಿ ಕೇವಲ 12 ವರ್ಷ ಸಕ್ರಿಯವಾಗಿದ್ದರೂ, ಕನ್ನಡ ಸಿನಿರಂಗದಲ್ಲಿ ಶಂಕರನಾಗ್ ಅಚ್ಚಳಿಯದ ಮುದ್ರೆಯನ್ನೊತ್ತಿ ಹೋಗಿದ್ದಾರೆ. ಒಂದಾನೊಂದು ಕಾಲದಲ್ಲಿ ಮತ್ತು ಸಾಂಗ್ಲಿಯಾನ ಚಿತ್ರಗಳು ಶಂಕರ್ ನಾಗ್ ರ ಅದ್ಭುತ ಅಭಿನಯಕ್ಕೆ ಹಿಡಿದ ಕನ್ನಡಿ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X