X
ಹೋಮ್ ಚಲನಚಿತ್ರಗಳ ಒಳನೋಟ

ಬರ್ತಡೇ ಸ್ಪೆಷಲ್: ಮ್ಯೂಸಿಕ್ ಜೊತೆಗೆ ಗುರುಕಿರಣ್ ಬರೆದ ಹಾಡುಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Friday, October 28, 2022, 05:16 PM [IST]

ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಗುರುಕಿರಣ್, ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಗುರುಕಿರಣ್‌ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಜರ್ನಿಯಲ್ಲಿ ಹಲವಾರು ಸೂಪರ್‌ ಹಿಟ್‌ ಗೀತೆಗಳನ್ನು ನೀಡಿದ್ದು, ಮ್ಯೂಸಿಕ್ ಜೊತೆಗೆ ಹಾಡುಗಳನ್ನು ಕೂಡ ಬರೆದಿದ್ದಾರೆ. ಗುರುಕಿರಣ್ ಬರೆದ ಟಾಪ್ 5 ಹಾಡುಗಳ ಮಾಹಿತಿ ಇಲ್ಲಿದೆ.


cover image
Video Thumbnail

ಟು ಥೌಸೆಂಡ್ - ಟು ಥೌಸೆಂಡ್

'ಎ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದ ಗುರುಕಿರಣ್, ತಮ್ಮ ಎರಡನೇ ಸಿನಿಮಾ 'ಉಪೇಂದ್ರ' ಮೂಲಕ ಚಿತ್ರ ಸಾಹಿತಿ ಕೂಡ ಆದರು. ಈ ಚಿತ್ರದ 'ಟು ಥೌಸೆಂಡ್..' ಎಂಬ ಜನಪ್ರಿಯ ಹಾಡನ್ನು ಗುರುಕಿರಣ್ ಅವರೇ ಬರೆದಿದ್ದರು.

 

Video Thumbnail

ಬಂಡಲ್ ಬಡಾಯಿ ಮಾದೇವ - ಬಂಡಲ್ ಬಡಾಯಿ ಮಾದೇವ

'ವಿಷ್ಣುವರ್ಧನ್ ನಟನೆಯ 'ಏಕದಂತ' ಸಿನಿಮಾದ 'ಬಂಡಲ್ ಬಡಾಯಿ ಮಾದೇವ..' ಹಾಡನ್ನು ಕೂಡ ಗುರುಕಿರಣ್ ಬರೆದಿದ್ದಾರೆ. ವಿಶೇಷ ಅಂದರೆ ಈ ಹಾಡಿನಲ್ಲಿ ಅವರು ಕೂಡ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

 

Video Thumbnail

ಅಪ್ಪು ಪಪ್ಪು ಎನ್ನುತ್ತಾನೋ - ಅಪ್ಪು ಪಪ್ಪು ಎನ್ನುತ್ತಾನೋ

'ಶಿವಣ್ಣ ಮತ್ತು ರಾಗಿಣಿ ಜೋಡಿಯ 'ಶಿವ' ಸಿನಿಮಾದಲ್ಲಿ 'ಅಪ್ಪು ಪಪ್ಪು ಎನ್ನುತ್ತಾನೋ...' ಎಂಬ ಐಟಂ ಸಾಂಗ್ ಇದೆ. ಈ ಹಾಡನ್ನು ಸಹ ಗುರುಕಿರಣ್ ಬರೆದಿದ್ದಾರೆ.

Video Thumbnail

ಈ ಹುಡುಗಿರೆಲ್ಲ ಹಿಂಗೆ - ಈ ಹುಡುಗಿರೆಲ್ಲ ಹಿಂಗೆ

ಉಪೇಂದ್ರ ಅವರ 'ಓಂಕಾರ' ಸಿನಿಮಾದ ಫೇಮಸ್ ಹಾಡು 'ಈ ಹುಡುಗಿರೆಲ್ಲ ಹಿಂಗೆ..' ಹಾಡಿನಲ್ಲಿ ಗುರುಕಿರಣ್ ಸಾಹಿತ್ಯ ಇದೆ.

 

Video Thumbnail

ಸ್ಪೆಷಲ್ ಆಗಿ ಆರ್ಡರ್ ಕೊಟ್ಟೆ - ಸ್ಪೆಷಲ್ ಆಗಿ ಆರ್ಡರ್ ಕೊಟ್ಟೆ

'ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್ ನಲ್ಲಿ ಬಂದ 'ಬ್ರಹ್ಮ' ಸಿನಿಮಾದ 'ಸ್ಪೆಷಲ್ ಆಗಿ ಆರ್ಡರ್ ಕೊಟ್ಟೆ..' ಹಾಡನ್ನು ಬರೆದಿರುವುದು ಕೂಡ ಗುರುಕಿರಣ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+