twitter
    X
    Home ಚಲನಚಿತ್ರಗಳ ಒಳನೋಟ

    ನೀವು ಮಿಸ್ ಮಾಡದೇ ನೋಡಲೇಬೇಕಾದ ಡಾ.ರಾಜ್‌ಕುಮಾರ್ ಸಿನಿಜೀವನದ ಮರೆಯಲಾಗದ ಪಾತ್ರಗಳು!

    Author Administrator | Updated: Wednesday, April 24, 2024, 09:57 AM [IST]

    ವರನಟ ಡಾ. ರಾಜಕುಮಾರ್ ಕನ್ನಡಿಗರ ಅಸ್ಮಿತೆಯ ಸಂಕೇತ. ಕನ್ನಡ ಚಿತ್ರರಂಗಕ್ಕೆ ಭದ್ರವಾದ ಬುನಾದಿ ಹಾಕಿ ಸಾಮಾಜಿಕ ಚಿತ್ರಗಳ ಮೂಲಕ ಚಿತ್ರಪ್ರೇಮಿಗಳಿಗೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ರಾಜ್ ಚಿತ್ರಗಳ ಸಕ್ಸಸ್ ರೇಟ್ ಭಾರತದಲ್ಲಿಯೇ ಅತಿ ಹೆಚ್ಚು. ಬೇಡರ ಕಣ್ಣಪ್ಪನಿಂದ ಆರಂಭವಾದ ಇವರ ಸಿನಿ ಜರ್ನಿ ಐದು ದಶಕಗಳ ಕಾಲ ಅವ್ಯಾಹತವಾಗಿ ಮುಂದುವರೆದು ಶಬ್ಧವೇಧಿವರೆಗೆ ಬಂದು ನಿಂತಿತು. ರಾಜಕುಮಾರ್ ನಟಿಸಿದ ಎಲ್ಲ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಕನ್ನಡಿಗರ ಮನದಲ್ಲಿ ಅಜರಾಮರವಾಗಿ ಉಳಿದಿವೆ. ಇಲ್ಲಿ ಡಾ. ರಾಜಕುಮಾರ್ ಸಿನಿಜೀವನದ ಮರೆಲಾಗದ ಪಾತ್ರಗಳನ್ನು ನೀಡಲಾಗಿದೆ.

    cover image
    ಭೂಕೈಲಾಸ

    ಭೂಕೈಲಾಸ

    1

    ಕೆ ಶಂಕರ್ ನಿರ್ದೇಶನದಲ್ಲಿ ಮೂಡಿಬಂದ ಭೂಕೈಲಾಸ ಚಿತ್ರದಲ್ಲಿ ರಾಜ್ ರಾವಣನ ಪಾತ್ರದಲ್ಲಿ ಘರ್ಜಿಸಿ ಮನ ಸೆಳೆದಿದ್ದರು. ಕಲ್ಯಾಣ್ ಕುಮಾರ್ ನಾರದನ ಪಾತ್ರದಲ್ಲಿ ನಟಿಸಿದ್ದರೆ, ಜಮುನಾ ಮಂಡೋದರಿ ಪಾತ್ರದಲ್ಲಿ ನಟಿಸಿದರು.

    ರಣಧೀರ ಕಂಠೀರವ

    ರಣಧೀರ ಕಂಠೀರವ

    2

    ಈ ಚಿತ್ರದಲ್ಲಿ ರಾಜ್ ರಣಧೀರ ಕಂಠೀರವ ಎಂದೇ ಕರೆಯುತಿದ್ದ ಮೈಸೂರಿನ ಕಂಠೀರವ ನರಸರಾಜ್ ಒಡೆಯರ್ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರವನ್ನು ಕನ್ನಡ ಚಲನಚಿತ್ರ ಕಲಾವಿದರ ಸಂಘದ ಹೆಸರಿನಲ್ಲಿ ಡಾ.ರಾಜ್, ಜಿ.ವಿ.ಅಯ್ಯರ್, ನರಸಿಂಹರಾಜು ಮತ್ತು ಬಾಲಕೃಷ್ಣ ನಿರ್ಮಿಸಿದ್ದರು.

    ಸತ್ಯ ಹರಿಶ್ಚಂದ್ರ

    ಸತ್ಯ ಹರಿಶ್ಚಂದ್ರ

    3

    ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಪೌರಾಣಿಕ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ರಾಜ್ ಸತ್ಯವೇ ಶಿವನೆಂದು ನಂಬಿದ ಹರಿಶ್ಚಂದ್ರನ ಪಾತ್ರದಲ್ಲಿ ನಟಿಸಿದರು. ಹರಿಶ್ಚಂದ್ರ ಇದ್ದರೇ ಹೀಗೆ ಇರುತ್ತಾನೆ ಎನ್ನುವಷ್ಟರ ಮಟ್ಟಿಗೆ ಪಾತ್ರ ಪರಕಾಯ ಪ್ರವೇಶ ಮಾಡಿದ್ದರು ರಾಜ್.

    ಶ್ರೀ ಕೃಷ್ಣದೇವರಾಯ

    ಶ್ರೀ ಕೃಷ್ಣದೇವರಾಯ

    4

    ಬಿ.ಆರ್.ಪಂತಲು ನಿರ್ದೇಶಿಸಿ ನಿರ್ಮಿಸಿದ್ದ ಈ ಚಿತ್ರದಲ್ಲಿ ರಾಜ್ ವಿಜಯನಗರದ ಶ್ರೇಷ್ಠ ಸಮ್ರಾಟ್ ಶ್ರೀ ಕೃಷ್ಣದೇವರಾಯನಾಗಿ ನಟಿಸಿದರು. ಪಂತಲು ತಿಮ್ಮರಸು ಪಾತ್ರದಲ್ಲಿ ಮಿಂಚಿದರು. ಭಾರತಿ ಮತ್ತು ಜಯಂತಿ ನಾಯಕಿಯರಾಗಿ ನಟಿಸಿದರು.

    ಕಸ್ತೂರಿ ನಿವಾಸ

    ಕಸ್ತೂರಿ ನಿವಾಸ

    5

    ದೊರೈ-ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ ಕಸ್ತೂರಿ ನಿವಾಸ ಚಿತ್ರದಲ್ಲಿ ರಾಜ್ ಕೊಡುಗೈ ದಾನಿ ರವಿವರ್ಮನ ಪಾತ್ರದಲ್ಲಿ ಮಿಂಚಿದರು. ಈ ಚಿತ್ರ ದಾಖಲೆ ಕಂಡು ರಾಜ್ ಸಿನಿಜೀವನದ ಮೈಲುಗಲ್ಲು ಚಿತ್ರವಾಯಿತು. ತನ್ನ ಸ್ಥಿತಿ ಎನೇ ಇರಲಿ ತನ್ನಲ್ಲಿ ಸಹಾಯ ಬೇಡಿ ಬಂದವರನ್ನು ಎಂದು ಬರಿಗೈಲಿ ಕಳಿಸದ ರಾಜ್ ಪಾತ್ರ ಸಿನಿ ಪ್ರೇಮಿಗಳ ಮನಸ್ಸನ್ನು ತಪ್ತವಾಗಿಸಿತು.

    ಬಂಗಾರದ ಮನುಷ್ಯ

    ಬಂಗಾರದ ಮನುಷ್ಯ

    6

    ಸಿದ್ದಲಿಂಗಯ್ಯ ನಿರ್ದೇಶನದಲ್ಲಿ ಮೂಡಿಬಂದ ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜೀವ್ ಪಾತ್ರದಲ್ಲಿ ನಟಿಸಿದರು. ಪಟ್ಟಣದಲ್ಲಿ ಕಲಿತು ಬಂದ ಯುವಕನೊಬ್ಬ ತನ್ನ ಅಕ್ಕನ ಸಹಾಯಕ್ಕಾಗಿ ಹಳ್ಳಿಯಲ್ಲಿಯೇ ಕೃಷಿಯನ್ನು ಕೈಗೊಳ್ಳುವ ರೀತಿ ಹಲವು ವಿಧ್ಯಾವಂತರನ್ನು ಕೃಷಿಯೆಡೆಗೆ ಪ್ರೇರೇಪಿಸಿತು. ಈ ಚಿತ್ರ ಪೋರ್ಬ್ಸ್ ನ ಭಾರತದ 25 ಅತ್ಯುತ್ತಮ ಅಭಿನಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

    ಭಕ್ತ ಕುಂಬಾರ-1974

    ಭಕ್ತ ಕುಂಬಾರ-1974

    7

    ಹುಣಸೂರು ಕೃಷ್ಣಮೂರ್ತಿ ಅಭಿನಯದ ಭಕ್ತ ಕುಂಬಾರ ಚಿತ್ರದಲ್ಲಿ ಭಕ್ತ ಗೋರನ ಪಾತ್ರದಲ್ಲಿ ನಟಿಸಿದರು. ಡಾ. ರಾಜ್ ಪಂಡರಪುರದ ವಿಠ್ಠಲನ ದಿಟ ಭಕ್ತನಾಗಿ ಲೋಕದಲ್ಲಿ ಖ್ಯಾತಿ ಪಡೆದ ಗೋರ ಕುಂಬಾರನ ಪಾತ್ರದಲ್ಲಿ ತನ್ಮಯತೆ ಮರೆದರು.

    ಕವಿರತ್ನ ಕಾಳಿದಾಸ

    ಕವಿರತ್ನ ಕಾಳಿದಾಸ

    8

    ಈ ಚಿತ್ರದಲ್ಲಿ ಡಾ. ರಾಜಕುಮಾರ್ ನಾಲ್ಕನೇ ಶತಮಾನದ ಭೋಜರಾಜನ ಆಸ್ಥಾನ ಕವಿಯಾಗಿದ್ದ ಕವಿರತ್ನ ಕಾಳಿದಾಸನ ಪಾತ್ರದಲ್ಲಿ ಅಭಿನಯಿಸಿದರು. ಜ್ಞಾನೋದಯಕ್ಕೂ ಪೂರ್ವ ಕುರುಬನಾಗಿ, ನಂತರ ಕವಿಗಳಲ್ಲೇ ಶ್ರೇಷ್ಠ ಕಾಳಿದಾಸನಾಗಿ ರಾಜ್ ಅಪೂರ್ವ ಅಭಿನಯ ನೀಡಿದರು.

    ಭಕ್ತ ಪ್ರಹ್ಲಾದ

    ಭಕ್ತ ಪ್ರಹ್ಲಾದ

    9

    ಭೂಕೈಲಾಸದಲ್ಲಿ ರಾವಣನಾಗಿ ಆರ್ಭಟಿಸಿದ ನಂತರ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಮತ್ತೊಮ್ಮೆ ದಾನವನ ಅವತಾರ ಎತ್ತಿದರು. ರಾಜ್ ರಾಕ್ಷಸ ಹಿರಣ್ಯ ಕಶಿಪುವಿನ ಪಾತ್ರದಲ್ಲಿ ಘರ್ಜಿಸಿದರೆ, ಪುನೀತ್ ರಾಜಕುಮಾರ್ ಪ್ರಹ್ಲಾದನ ಪಾತ್ರದಲ್ಲಿ ನಟಿಸಿದರು.

    ಒಂದು ಮುತ್ತಿನ ಕಥೆ

    ಒಂದು ಮುತ್ತಿನ ಕಥೆ

    10

    ಶಂಕರನಾಗ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರಾಜಕುಮಾರ್ ಬೆಸ್ತನ ಪಾತ್ರದಲ್ಲಿ ನಟಿಸಿದರು. 58 ರ ವಯಸ್ಸಿನಲ್ಲಿ ಕೂಡ ಸಮುದ್ರಾಳದಲ್ಲಿ ಕೃತಕ ಆಕ್ಟೋಪಸ್ ಜೊತೆ ಫೈಟ್ ಸೀನಿನಲ್ಲಿ ಭಾಗವಹಿಸಿದ್ದು ರೋಮಾಂಚಕಾರಿಯಾಗಿತ್ತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X