twitter
    X
    Home ಚಲನಚಿತ್ರಗಳ ಒಳನೋಟ

    ಹ್ಯಾಪಿ ಬರ್ತಡೇ: ಪುರಿ ಜಗನ್ನಾಥ್ ನಿರ್ದೇಶನದ ಕನ್ನಡ ಸಿನಿಮಾಗಳಿವು!

    Author Sowmya Bairappa | Updated: Thursday, September 28, 2023, 09:55 AM [IST]

    ಪುರಿ ಜಗನ್ನಾಥ್ ಒಂದು ಕಾಲದಲ್ಲಿ ಸೌತ್ ಸಿನಿರಂಗದಲ್ಲಿ ಸ್ಟಾರ್ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಮೂಲಕ ಸ್ಟಾರ್ ಮೇಕರ್ ಆಗಿದ್ದವರು. ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ ಇವರು, ಕನ್ನಡದಲ್ಲೂ ಕೆಲ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾಗಳ ಮಾಹಿತಿ ಇಲ್ಲಿದೆ.

    cover image
    ಅಪ್ಪು

    ಅಪ್ಪು

    1

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ 'ಅಪ್ಪು'. ಈ ಸಿನಿಮಾಕ್ಕೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದರು. ಲವ್‌ಸ್ಟೋರಿ, ಆಕ್ಷನ್, ಕಾಮಿಡಿ ಎಲ್ಲಾ ಎಲಿಮೆಂಟ್ಸ್‌ ಈ ಸಿನಿಮಾದಲ್ಲಿ ಇತ್ತು.  ಹೀಗಾಗಿ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ಈ ಸಿನಿಮಾ 2002, ಏಪ್ರಿಲ್ 26 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಅಪ್ಪು ನಾಯಕನಾದ ಮೊದಲ ಸಿನಿಮಾ ಥಿಯೇಟರ್‌ಗಳಲ್ಲಿ 100 ದಿನ ಅಲ್ಲ, 200 ದಿನ ಓಡಿತ್ತು. 

     

    ಯುವರಾಜ

    ಯುವರಾಜ

    2

    2001ರಲ್ಲಿ ಪುರಿ ಜಗನ್ನಾಥ್ 'ಯುವರಾಜ' ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಭಾವನಾ ಬಾನಿ, ಲಿಸಾ ರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಮೆಗಾ ಹಿಟ್ ಆಗಿತ್ತು. 

     

    ರೋಗ್

    ರೋಗ್

    3

    ಸ್ಯಾಂಡಲ್​ವುಡ್​ಗೆ ಪುನೀತ್ ರಾಜ್‌ಕುಮಾರ್ ಅವರನ್ನು 'ಅಪ್ಪು' ಚಿತ್ರದ ಮೂಲಕ ಪರಿಚಯಿಸಿದ್ದ ಪುರಿ ಜಗನ್ನಾಥ್, 'ರೋಗ್' ಚಿತ್ರದ ಮೂಲಕ ಇಶಾನ್ ಎಂಬ ಯುವ ಪ್ರತಿಭೆಯನ್ನ ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್ ನಲ್ಲಿ ಒಮ್ಮೆಯೇ ಪರಿಚಯಿಸಿದ್ದರು. ರೋಗ್ ಸಿನಿಮಾ  ಕನ್ನಡ ಮತ್ತು ತೆಲುಗು ವರ್ಸನ್ ಗಳೆರಡರಲ್ಲೂ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಇಶಾನ್ ಗೆ ಮನ್ನಾರ ಚೋಪ್ರಾ ಮತ್ತು ಏಂಜೆಲಾ ನಾಯಕಿಯರಾಗಿ ಅಭಿನಯಿಸಿದ್ದರು. ಇದೊಂದು ಖಡಕ್ ಹುಡುಗನ ಖಾದಲ್ ಚಿತ್ರಕಥೆಯ ಸಿನಿಮಾವಾಗಿತ್ತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X