twitter
    X
    Home ಚಲನಚಿತ್ರಗಳ ಒಳನೋಟ

    ಯಾವುದೇ ಸಿನಿಮಾ ಹಿನ್ನಲೆಯಿಲ್ಲದ ಬಂದು ಸ್ಟಾರ್ ಆದ ಕನ್ನಡದ 9 ನಟರಿವರರು!

    Author Sowmya Bairappa | Updated: Wednesday, December 21, 2022, 12:23 PM [IST]

    ಇತ್ತೀಚೆಗೆ ತೆರೆ ಕಾಣುತ್ತಿರುವ ಕನ್ನಡದ ಸಿನಿಮಾಗಳು ಬಾಲಿವುಡ್ ಚಿತ್ರರಂಗ ಮಾತ್ರವಲ್ಲದೇ ವಿಶ್ವಾದ್ಯಂತ ಹವಾ ಕ್ರಿಯೇಟ್ ಮಾಡುವ ಮಟ್ಟಿಗೆ ನಿರ್ಮಾಣ ಆಗುತ್ತಿವೆ. ಸದ್ಯ ಕನ್ನಡದಲ್ಲಿ ಬಿಗ್ ಬಜೆಟ್ ಚಿತ್ರಗಳ ಜೊತೆಗೆ ಒಳ್ಳೆ ಕಂಟೆಂಟ್ ಸಿನಿಮಾಗಳು, ಅದ್ಧೂರಿ ಮೇಕಿಂಗ್​​​​ನೊಂದಿಗೆ 100 ಕ್ಲಬ್ ಸೇರುವಲ್ಲಿ ಇತಿಹಾಸ ಬರೆದಿಡುತ್ತಿವೆ. ಯಾವುದೇ ಸಿನಿಮಾ ಹಿನ್ನಲೆಯಿಲ್ಲದೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅನೇಕ ಪ್ರತಿಭಾನ್ವಿತ ನಟರು ಇಂದು ಸೂಪರ್ ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಆರಂಭದಲ್ಲಿ ಚಿಕ್ಕ-ಪುಟ್ಟ ಪಾತ್ರಗಳಿಂದ ನಟನೆಗೆ ಇಳಿದ ಕನ್ನಡದ ಅನೇಕ ನಟರು, ಇಂದು ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ನಟನೆ, ಶ್ರಮ, ಶ್ರದ್ದೆ ಹಾಗೂ ಅವರಿಗೆ ಸಿನಿಮಾದ ಮೇಲಿರುವ ಆಸಕ್ತಿ. ಹೀಗೆ ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಂಡ ಕನ್ನಡ ಚಿತ್ರರಂಗದ ನಟರ ಪಟ್ಟಿ ಇಲ್ಲಿದೆ.

    cover image
    ರಿ‍ಷಭ್ ಶೆಟ್ಟಿ

    ರಿ‍ಷಭ್ ಶೆಟ್ಟಿ

    1

    ವಾಟರ್ ಬಿಸಿನೆಸ್, ನಿರ್ಮಾಪಕರ ಬಳಿ ಡ್ರೈವರ್ ಆಗಿ, ಹೋಟಲ್ ಕೆಲಸ, ಹೋಟೆಲ್ ಮಾಲೀಕ, ಸೇಲ್ಸ್‌ಮನ್ ಕೆಲಸವನ್ನೂ ಮಾಡಿದ್ದ ರಿಷಬ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಮತ್ತು ನಟ. ತಮ್ಮ ವಿಭಿನ್ನ ಚಿತ್ರಗಳು ಮತ್ತು ಭಿನ್ನ ಚಿತ್ರ ನಿರ್ಮಾಣ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ. ಸದ್ಯ ರಿಷಬ್‌ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸುಗಳಿಸಿರುವ 'ಕಾಂತಾರ' ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಸಖತ್ ಸದ್ದು ಮಾಡುತ್ತಿದೆ. ಅಂದು  ನೀರಿನ ಕ್ಯಾನ್ ಹೊರುತ್ತಿದ್ದ ರಿಷಬ್ ಶೆಟ್ಟಿ, ಇಂದು ತಮ್ಮ ಪ್ರತಿಭೆಯಿಂದಲೇ ಸ್ಟಾರ್ ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.  

    ಯಶ್

    ಯಶ್

    2

    ಬಸ್ ಚಾಲಕನ ಮಗನಾಗಿರುವ ರಾಕಿಂಗ್ ಸ್ಟಾರ್ ಯಶ್, ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಎಲ್‌ಕೆಜಿಯಿಂದ ಕಾಲೇಜಿನವರೆಗೆ ಮೈಸೂರಿನ ಮಹಾವೀರ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸವನ್ನು ಮುಗಿಸಿದ ಯಶ್, ತಮ್ಮ ಹದಿನೇಳನೆ ವಯಸ್ಸಿನಲ್ಲಿಯೇ ಕುಟುಂಬಕ್ಕೆ ನೆರವಾಗಲು ಪಿಯುಸಿಗೆ ಗುಡ್‌ಬೈ ಹೇಳಿ   `ನವೀನ್ ಪ್ರಾವಿಜನ್ ಸ್ಟೋರ್' ಎಂಬ ತಮ್ಮದೇ ಸ್ಟೋರ್ ತೆಗೆದು ಕೆಲಸ ಮಾಡಲು ಆರಂಭಿಸಿದರು. ನಂತರ ಅಭಿನಯದಲ್ಲಿ ಆಸಕ್ತಿ ತೋರಿ ಬಿ.ವಿ.ಕಾರಂತರ 'ಬೆನಕ' ನಾಟಕ ಕಂಪನಿಗೆ ಸೇರಿದರು. ಹಲವು ನಾಟಕಗಳಲ್ಲಿ ಭಾಗವಹಿಸಿದ ಯಶ್ ಮುಂದೆ 'ನಂದಗೋಕುಲ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವನ್ನು ಪಡೆದರು. 2007ರಲ್ಲಿ ತೆರೆಗೆ ಬಂದ 'ಜಂಬದ ಹುಡುಗಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಯಶ್ 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಇಂದು ತಮ್ಮ ಕಠಿಣ ಪರಿಶ್ರಮ, ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. 

     

    ಅಚ್ಯುತ್ ಕುಮಾರ್

    ಅಚ್ಯುತ್ ಕುಮಾರ್

    3

    ನಟ ಅಚ್ಯುತ್ ಕುಮಾರ್ ಅವರಿಗೂ ಕೂಡ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ. ತಮ್ಮ ಕಲಾತ್ಮಕ ನಟನೆಯಿಂದ ಹತ್ತು ಹಲವು ಪಾತ್ರಗಳಿಗೆ ಜೀವ ತುಂಬಿರುವ ಇವರು,  ಕನ್ನಡ ಬಹುಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ರಂಗಭೂಮಿಯಿಂದ ಚಿತ್ರರಂಗ ಪ್ರವೇಶಿಸಿದ ಇವರು, ಕನ್ನಡವಲ್ಲದೇ ತಮಿಳು, ತೆಲುಗು ಚಿತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. ತಮ್ಮ ಅಭೂತಪೂರ್ವ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.  

    ರಕ್ಷಿತ್ ಶೆಟ್ಟಿ

    ರಕ್ಷಿತ್ ಶೆಟ್ಟಿ

    4

    ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದ ರಕ್ಷಿತ್ ಶೆಟ್ಟಿ, 2010ರಲ್ಲಿ ತೆರೆಕಂಡ `ನಮ್ ಏರಿಯಾದಲ್ಲೊಂದು ದಿನ' ಚಿತ್ರದ ಮೂಲಕ ಸಿನಿಪ್ರವೇಶ ಮಾಡಿದರು. ಬಳಿಕ  ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ಕನ್ನಡದ ಭರವಸೆಯ ನಟ ಮತ್ತು ನಿರ್ದೇಶಕರಾಗಿ ಹೊರಹೊಮ್ಮಿದರು.  

     

    ಧನಂಜಯ

    ಧನಂಜಯ

    5

    ನಟ ಡಾಲಿ ಧನಂಜಯ್ ಅವರು ಕೂಡ ಕಷ್ಟಪಟ್ಟು ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು. ಐಟಿ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದರು. ಹಲವು ವರ್ಷಗಳ ಕಾಲ ಯಶಸ್ಸಿಗಾಗಿ ಕಾದರು. ಹಲವು ಅವಮಾನಗಳನ್ನು ಎದುರಿಸಿದರು. 'ಜಯನಗರ 4th ಬ್ಲಾಕ್'​ ಎಂಬ ಕಿರುಚಿತ್ರದ ಮೂಲಕ ಚಿತ್ರರಂಗದಲ್ಲಿ ವಿಶಿಷ್ಟವಾಗಿ ಛಾಪು ಮೂಡಿಸಿದ ಇವರು ಇಂದು ಬಹುಭಾಷಾ ನಟರಾಗಿ ಹೊರಹೊಮ್ಮಿದ್ದಾರೆ. ಪ್ರತಿ ಸಿನಿಮಾಗೂ ವಿಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುವ ಧನಂಜಯ್, ಬೆಳ್ಳಿತೆರೆಗೆ ಕಾಲಿಡಲು ಸಾಕಷ್ಟು ಶ್ರಮಪಟ್ಟಿದ್ದಾರೆ. 

    ಗಣೇಶ್

    ಗಣೇಶ್

    6

    ನಟ ಗಣೇಶ್ ಅವರಿಗೂ ಕೂಡ ಯಾವುದೇ ಸಿನಿಮಾ ಹಿನ್ನೆಲೆ ಇರಲಿಲ್ಲ.  ಮೊದಲ ಬಾರಿ ಗುಟ್ಟು ಎಂಬ ಸಾಕ್ಷ್ಯ ಚಿತ್ರದಲ್ಲಿ ನಟಿಸಿದರು. ನಂತರ  ಸಾಕ್ಷ್ಯಚಿತ್ರದ ನಿರ್ದೇಶಕರಿಂದಲೇ ಗಣೇಶ್ ಅವರಿಗೆ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರೆಯಿತು. ನಂತರ ಉದಯ ಟಿವಿಯಲ್ಲಿ ಪ್ರಸಾರವಾದ ಕಾಮಿಡಿ ಟೈಮ್ ಎಂಬ ಕಾರ್ಯಕ್ರಮದ ನಿರೂಪಕರಾಗಿ ಕರ್ನಾಟಕದ ಮನೆ ಮಾತಾದರು. 2006ರಲ್ಲಿ ಬಿಡುಗಡೆಯಾದ "ಚೆಲ್ಲಾಟ" ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಾಗಿ ಮುಖ್ಯ ಪಾತ್ರದಲ್ಲಿ ನಟಿಸಿದರು. 

    ವಸಿಷ್ಠ ಸಿಂಹ

    ವಸಿಷ್ಠ ಸಿಂಹ

    7

    ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಕಡಕ್ ಅಭಿನಯದಿಂದ ಗುರುತಿಸಿಕೊಂಡಿರುವ ನಟ ವಶಿಷ್ಠ ಸಿಂಹ, ಕೆಲಕಾಲ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡಿ ನಂತರ ನಟನೆಯತ್ತ ಮುಖ ಮಾಡಿದರು. `ರಾಜಾಹುಲಿ' ಚಿತ್ರದ ಜಗ್ಗ ಪಾತ್ರದಿಂದ ಗಮನಸೆಳೆದ ವಶಿ‍ಷ್ಠ, ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಗಾಯಕರಾಗಬೇಕೆಂದು ಬೆಂಗಳೂರಿಗೆ ಬಂದ ಇವರು ಚಿತ್ರನಟರಾದರೂ `ಕಿರಿಕ್ ಪಾರ್ಟಿ',`ದಯವಿಟ್ಟು ಗಮನಿಸಿ',`6ನೇ ಮೈಲಿ' ಮುಂತಾದ ಚಿತ್ರಗಳ ಗೀತೆಗಳಿಗೆ ಧ್ವನಿಯಾಗಿದ್ದಾರೆ.

     

    ಡಾರ್ಲಿಂಗ್ ಕೃಷ್ಣ

    ಡಾರ್ಲಿಂಗ್ ಕೃಷ್ಣ

    8

    ನಟ ಡಾರ್ಲಿಂಗ್ ಕೃಷ್ಣ ಅವರಿಗೂ ಕೂಡ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ.ಜಾಕಿ ಮತ್ತು ಹುಡುಗರು ಚಿತ್ರದಲ್ಲಿ ದುನಿಯಾ ಸೂರಿಯವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅವರು, ಮದರಂಗಿ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಈ ಸಿನಿಮಾದಿಂದ ಗುರುತಿಸಿಕೊಂಡ ಅವರು, ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಇವರಿಗೆ ದೊಡ್ಡ ಹೆಸರು ತಂದು ಕೊಟ್ಟಿದ್ದು ಲವ್ ಮಾಕ್‌ಟೇಲ್ ಸಿನಿಮಾ. ಲವ್ ಮಾಕ್‌ಟೇಲ್ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಅವರೇ ನಿರ್ದೇಶಿಸಿ, ನಟಿಸಿದ್ದರು. 

    ಸಂಚಾರಿ ವಿಜಯ್

    ಸಂಚಾರಿ ವಿಜಯ್

    9

    ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದಿದ್ದರೂ ಸಂಚಾರಿ ವಿಜಯ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಾಗಿ ಗುರುಯುತಿಸಿಕೊಂಡಿದ್ದರು. ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ತಮ್ಮ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ನಂತರ ಚಿತ್ರರಂಗ ಪ್ರವೇಶಿಸಿದ ಇವರು, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾದಲ್ಲಿಯೂ ಕೆಲಸ ಮಾಡಿದ್ದಾರೆ. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X