twitter
    X
    Home ಚಲನಚಿತ್ರಗಳ ಒಳನೋಟ

    ಮಹಾಶಿವರಾತ್ರಿ 2024: ಕನ್ನಡದ ಅತ್ಯುತ್ತಮ ಶಿವ ಭಕ್ತಿ ಪ್ರಧಾನ ಸಿನಿಮಾಗಳ ಪಟ್ಟಿ ಇಲ್ಲಿದೆ.

    Author Administrator | Updated: Thursday, March 7, 2024, 05:38 PM [IST]

    ತ್ರಿಮೂರ್ತಿಗಳಲ್ಲಿ ಶಿವ ಲಯಕಾರಕ. ಶಿವನು ಕರುಣಾಸಾಗರನಷ್ಟೇ ಅಲ್ಲದೇ ಪ್ರಳಯ ಭಯಂಕರನೂ ಹೌದು. ಕನ್ನಡ ಚಿತ್ರಗಳಲ್ಲಿ ಶಿವನ ಭಕ್ತಿ ಪ್ರಧಾನ ಚಿತ್ರಗಳು ಸಾಕಷ್ಟು ಬಂದಿವೆ. ಮುಖ್ಯವಾಗಿ ಡಾ.ರಾಜ್‌ಕುಮಾರ್ ಸತ್ಯ ಹರಿಶ್ಚಂದ್ರ, ಬೇಡರ ಕಣ್ಣಪ್ಪ, ಭೂ ಕೈಲಾಸ ಮುಂತಾದ ಶಿವ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾರೆ. ಇಲ್ಲಿ ಕನ್ನಡದ ಅತ್ಯುತ್ತಮ ಶಿವ ಭಕ್ತಿ ಪ್ರಧಾನ ಚಿತ್ರಗಳನ್ನು ನೀಡಲಾಗಿದೆ.

    cover image
    ಬೇಡರ ಕಣ್ಣಪ್ಪ

    ಬೇಡರ ಕಣ್ಣಪ್ಪ

    1

    ಡಾ ರಾಜಕುಮಾರ್ ಅಭಿನಯಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪ. ಹೆಚ್.ಎಲ್.ಎನ್.ಸಿಂಹ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಶಿವನ ವಿಶೇಷ ಭಕ್ತ ಕಣ್ಣಪ್ಪನ ಕಥೆಯಿತ್ತು. ಬೇಡರ ವೃತ್ತಿಯಲ್ಲಿದ್ದ ಬೇಟೆಗಾರನೊಬ್ಬ ಶಿವನ ಪರಮ ಭಕ್ತನಾದ ಈ ಚಿತ್ರ ಜನಮನ ಸೆಳೆಯಿತು. ಈ ಚಿತ್ರದ ಮೂಲಕ ಡಾ.ರಾಜ್ ಜೊತೆ ನರಸಿಂಹರಾಜು ಕೂಡ ಚಿತ್ರರಂಗ ಪ್ರವೇಶಿಸಿದರು.

    ಭಕ್ತ ಸಿರಿಯಾಳ

    ಭಕ್ತ ಸಿರಿಯಾಳ

    2

    ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿಬಂದ ಭಕ್ತ ಸಿರಿಯಾಳ ಚಿತ್ರದಲ್ಲಿ ಲೋಕೇಶ್ ಮತ್ತು ಆರತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸಾಮಾನ್ಯ ಜೀವನವನ್ನು ನೆಡೆಸುತ್ತಿದ್ದ ಶಿವನ ಭಕ್ತನೊಬ್ಬ ಆಕಸ್ಮಿಕವಾಗಿ ತಾಯಿಯಿಲ್ಲದ ಕನ್ಯೆಯನ್ನು ಕೈ ಹಿಡಿಯುತ್ತಾನೆ. ನಂತರ ಅವನು ಕುತಂತ್ರಿಗಳ ಕಾರಣದಿಂದ ಸಿಲುಕುವ ತೊಂದರೆಗಳು ಮತ್ತು ಅವುಗಳನ್ನು ತನ್ನ ಭಕ್ತಿಯ ಮಹಿಮೆಯಿಂದ ಪಾರಾಗುವ ಕಥೆಯನ್ನು ಹೊಂದಿರುವ ಈ ಚಿತ್ರ ಕನ್ನಡದ ಅಪೂರ್ವ ಭಕ್ತಿ ಪ್ರಧಾನ ಚಿತ್ರಗಳಲ್ಲೊಂದು.

    ಸತ್ಯ ಹರಿಶ್ಚಂದ್ರ

    ಸತ್ಯ ಹರಿಶ್ಚಂದ್ರ

    3

    ಸತ್ಯವೇ ಶಿವನೆಂದು ಮತ್ತು ಶಿವನೇ ಸತ್ಯವೆಂದು ಬದುಕಿದ ಸತ್ಯ ಹರಿಶ್ಚಂದ್ರ ಮಹಾರಾಜನ ಕಥೆಯನ್ನು ಅದ್ಭುತವಾಗಿ ತೆರೆಗೆ ತಂದಿದ್ದು ಈ ಚಿತ್ರ, ಕನ್ನಡಿಗರಿಗೆ ಸತ್ಯ ಹರಿಶ್ಚಂದ್ರನೆಂದರೆ ಡಾ. ರಾಜಕುಮಾರ್ ರವರೇ ಮನಸ್ಸಿಗೆ ಮೂಡುವಂತೆ ಪಾತ್ರದ ಪರಕಾಯ ಪ್ರವೇಶ ಮಾಡಿದ್ದರು ಡಾ. ರಾಜ್. ವಿಶ್ವಾಮಿತ್ರನ ಕಠಿಣ ಪರೀಕ್ಷೆಗಳಿಂದ ಹಲವು ಸಂಕಷ್ಟಗಳಿಗೆ ಸಿಲುಕಿ ಹರಿಶ್ಚಂದ್ರ ರಾಜ್ಯ ಕೋಶಗಳನ್ನು ಕಳೆದುಕೊಂಡು, ಹೆಂಡತಿ-ಮಕ್ಕಳನ್ನು ಮಾರಿ ಕೊನೆಗೆ ಸ್ಮಶಾನ ಕಾಯುತ್ತಾನೆ. ಧೃಡ ನಿಶ್ಚಯ ಮತ್ತ ಶಿವನ ಭಕ್ತಿಯಿಂದ ಹರಿಶ್ಚಂದ್ರ ಕೊನೆಗೆ ಹೇಗೆ ವಿಶ್ವಾಮಿತ್ರವನ್ನು ಪರೀಕ್ಷೆಯನ್ನು ಗೆಲ್ಲುತ್ತಾನೆ ಎಂಬುದು ಚಿತ್ರದ ಕಥೆ.

    ಬಾಲಶಿವ

    ಬಾಲಶಿವ

    4

    ಎಂ ರಾಘವೇಂದ್ರ ರಾಜಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಬಾಲಶಿವ ಚಿತ್ರದಲ್ಲಿ ನವೀನ್ ಕೃಷ್ಣ ಮತ್ತು ರಶ್ಮಿ ಕುಲಕರ್ಣಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಶ್ರೀಧರ್ ಶಿವನ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಭಕ್ತಳೊಬ್ಬನ ಭಕ್ತಿಗೆ ಮೆಚ್ಚಿ ಶಿವನೇ ಬಾಲ ರೂಪ ತಾಳುತ್ತಾನೆ.

    ಶ್ರೀ ಮಂಜುನಾಥ

    ಶ್ರೀ ಮಂಜುನಾಥ

    5

    ರಾಘವೇಂದ್ರ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಶ್ರೀ ಮಂಜುನಾಥ ಚಿತ್ರದಲ್ಲಿ ಅರ್ಜುನ್ ಸರ್ಜಾ, ಅಂಬರೀಶ್, ಚಿರಂಜೀವಿ, ಸೌಂದರ್ಯ, ಮೀನಾ ಮತ್ತು ಸುಮಲತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ನಾಸ್ತಿಕನೊಬ್ಬ ಶಿವಭಕ್ತೆಯ ಕೈ ಹಿಡಿದಾಗ ಅವನಲ್ಲಾಗುವ ಬದಲಾವಣೆಗಳು ಮತ್ತು ಮುಂದೆ ಅವನೇ ಶಿವನ ಪರಮ ಭಕ್ತನಾಗುವದು ಚಿತ್ರದ ಕಥೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಮೂಡಿಬಂದ ಈ ಚಿತ್ರ ಅಭೂತಪೂರ್ವ ಯಶಸ್ಸು ಕಂಡಿತು. ಚಿತ್ರದ ಹಾಡುಗಳು ಕೂಡ ಸೂಪರ್ ಹಿಟ್ ಆದವು.

    ಶಿವ ಮೆಚ್ಚಿದ ಕಣ್ಣಪ್ಪ

    ಶಿವ ಮೆಚ್ಚಿದ ಕಣ್ಣಪ್ಪ

    6

    ಡಾ. ರಾಜಕುಮಾರ್ ಅಭಿನಯಿಸಿದ ಬೇಡರ ಕಣ್ಣಪ್ಪ ಚಿತ್ರವನ್ನೇ ಶಿವರಾಜಕುಮಾರ್ ಮತ್ತೊಮ್ಮೆ ನಾಯಕನಾಗಿ ನಟಿಸಿದರು. ವಿಜಯ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರಾಜ್ ಮತ್ತು ಪುನೀತ್ ರಾಜಕುಮಾರ್ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಶಿವರಾತ್ರಿ ಮಹಾತ್ಮೆ

    ಶಿವರಾತ್ರಿ ಮಹಾತ್ಮೆ

    7

    ಪಿ.ಆರ್.ಕೌಂಡಿನ್ಯ ನಿರ್ದೇಶನದ `ಶಿವರಾತ್ರಿ ಮಹಾತ್ಮೆ' ಚಿತ್ರದಲ್ಲಿ ಡಾ. ರಾಜಕುಮಾರ್, ಲೀಲಾವತಿ ಮತ್ತು ಕೆ.ಎಸ್.ಅಶ್ವಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸಿಂಹಪುರದ ರಾಜನಿಗೆ ಅಯೋಗ್ಯ ಮಗನೊಬ್ಬ ಜನಿಸಿದಾಗ ಅವನನ್ನು ಹೇಗೆ ಶಿವರಾತ್ರಿ ಮಹಾತ್ಮೆ ಕಥೆಯಿಂದ ಉದ್ಧರಿಸಿಲಾಗಿತು ಎಂಬುದು ಚಿತ್ರದ ಕಥೆ.

    ಭೂಕೈಲಾಸ

    ಭೂಕೈಲಾಸ

    8

    ಕೆ ಶಂಕರ್ ನಿರ್ದೇಶನ `ಭೂ ಕೈಲಾಸ' ಚಿತ್ರದಲ್ಲಿ ಡಾ. ರಾಜಕುಮಾರ್ ರಾವಣನ ಪಾತ್ರದಲ್ಲಿ ಘರ್ಜಿಸಿದರು. ಮೂರು ಲೋಕಗಳನ್ನು ಗೆಲ್ಲಲು ಹೊರಡುವ ರಾವಣನ ಪ್ರಚಂಡ ಶಿವ ಭಕ್ತಿಯನ್ನು ಈ ಚಿತ್ರದಲ್ಲಿ ನೋಡಬಹುದು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X