twitter
    X
    Home ಚಲನಚಿತ್ರಗಳ ಒಳನೋಟ

    ಬರ್ತ್​ಡೇ ಸ್ಪೆಷಲ್: ಶ್ರೇಯಾ ಘೋಷಾಲ್ ಬ್ಲಾಕ್ ಬಸ್ಟರ್ ಕನ್ನಡ ಹಾಡುಗಳ ಪಟ್ಟಿ ಇಲ್ಲಿದೆ.

    Author Administrator | Updated: Sunday, March 12, 2023, 12:35 PM [IST]

    ತಮ್ಮ ಮಧುರ ಕಂಠದಿಂದ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಶ್ರೇಯಾ ಘೋಷಾಲ್ ತಮ್ಮ ಗಾಯನಕ್ಕಾಗಿ ನಾಲ್ಕು ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಿಂದಿಯ ಸರಿಗಮಪ ಕಾರ್ಯಕ್ರಮದ ಮುಖಾಂತರ ಬೆಳಕಿಗೆ ಬಂದ ಶ್ರೇಯಾ ಪ್ರಸ್ತುತ ಸುಮಾರು 14 ಭಾಷೆಯಲ್ಲಿ ನೂರಾರು ಗೀತೆಗಳಿಗೆ ಧ್ವನಿಯಾಗಿದ್ದಾರೆ.2003 ರಿಂದ ಕನ್ನಡದ ಗೀತೆಗಳಿಗೆ ಧ್ವನಿಯಾಗಲು ಆರಂಭಿಸಿದರು. ಇಲ್ಲಿ ಶ್ರೇಯಾ ಘೋಷಾಲ್ ಕನ್ನಡದಲ್ಲಿ ಹಾಡಿದ ಪ್ರಸಿದ್ಧ ಗೀತೆಗಳನ್ನು ನೀಡಿದೆ.

    cover image

    ಆಕಾಶ್ - ಆಹಾ ಎಂಥಾ ಈ ಕ್ಷಣ

    ಆರ್.ಪಿ.ಪಟ್ನಾಯಿಕ್ ಸಂಗೀತ ನೀಡಿದ್ದ ಆಕಾಶ್ ಚಿತ್ರದ `ಆಹಾ ಎಂಥಾ ಆ ಕ್ಷಣ' ಗೀತೆಯನ್ನು ಹಾಡಿದ್ದರು. ಕೆ ಕಲ್ಯಾಣ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಹಾಡು ಶ್ರೇಯಾ ಘೋಷಾಲ್ ಗೆ ಕನ್ನಡದಲ್ಲಿ ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿತು.

    ಮುಂಗಾರು ಮಳೆ - ಅರಳುತಿರೋ ಜೀವದ ಗೆಳೆಯ/ಇವನು ಗೆಳೆಯನಲ್ಲ

    ಮನೋಮೂರ್ತಿ ಸಂಗೀತ ನೀಡಿದ್ದ ಮುಂಗಾರು ಮಳೆ ಚಿತ್ರದಲ್ಲಿ ಶ್ರೇಯಾ ಘೋಷಾಲ್ ಹಾಡಿದ್ದ ಅರಳುತಿರೋ ಜೀವದ ಗೆಳೆಯ ಮತ್ತು ಇವನು ಗೆಳೆಯನಲ್ಲ ಗೀತೆಗೆಳು ಉತ್ತಮ ಪ್ರತಿಕ್ರಿಯೆ ಪಡೆದವು. ಈ ಹಾಡುಗಳು ಜಯಂತ್ ಕಾಯ್ಕಿಣಿ ಮತ್ತು ಹೃದಯಶಿವ ಸಾಹಿತ್ಯದಲ್ಲಿ ಮೂಡಿ ಬಂದಿದ್ದವು.

    ಚೆಲುವಿನ ಚಿತ್ತಾರ - ಉಲ್ಲಾಸದ ಹೂಮಳೆ

    ಚೆಲುವಿನ ಚಿತ್ತಾರ ಚಿತ್ರದ ಉಲ್ಲಾಸದ ಹೂಮಳೆ ಮತ್ತು ಇರಲಾರೆ ಚೆಲಲುವೆ ಗೀತೆಗಳನ್ನು ಹಾಡಿದರು. ಇವರೆಡು ಗೀತೆಗಳು ಎಸ್ ನಾರಾಯಣ್ ಸಾಹಿತ್ಯದಲ್ಲಿ ಮೂಡಿ ಬಂದಿದ್ದವು.

    ಗೆಳೆಯ - ಕನಸಲ್ಲೇ ಮಾತಾಡುವೇ

    ಮನೋಮೂರ್ತಿ ಸಂಗೀತ ನೀಡಿದ್ದ ಗೆಳೆಯ ಚಿತ್ರದಲ್ಲಿ ಕನಸಲ್ಲೇ ಮಾತಾಡುವೇ ಗೀತೆಗೆ ಧ್ವನಿಯಾದರು. ಈ ಹಾಡು ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಮೂಡಿ ಬಂದಿತ್ತು.

    ಈ ಬಂಧನ - ಅದೇ ಭೂಮಿ ಅದೇ ಭಾನು

    ವಿಷ್ಣುವರ್ಧನ್ ಮತ್ತು ಜಯಪ್ರದಾ ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಬಂಧನ ಚಿತ್ರದ ಅದೇ ಭೂಮಿ ಅದೇ ಭಾನು ಗೀತೆಯನ್ನು ಹಾಡಿದರು. ಜಯಂತ್ ಕಾಯ್ಕಿಣಿ ಸಾಹಿತ್ಯದ ಈ ಹಾಡಿಗೆ ಮನೋಮೂರ್ತಿ ಸಂಗೀತ ನೀಡಿದರು.

    ಹುಡುಗಾಟ - ಏನೋ ಓಂಥರಾ

    ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದ ಗಣೇಶ್ ನಾಯಕನಾಗಿ ನಟಿಸಿದ್ದ ಹುಡುಗಾಟ ಚಿತ್ರದಲ್ಲಿ ಶಾನ್ ಜೊತೆಗೆ ಏನೋ ಓಂಥರಾ ಗೀತೆಗೆ ಧ್ವನಿಯಾದರು. ಈ ಹಾಡು ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಮೂಡಿಬಂದಿತ್ತು.

    ತಾಜ್ ಮಹಲ್ - ನೀನೆಂದು ನನ್ನವನು

    ಅಜೇಯ ರಾವ್ ಕೃಷ್ಣ ಅಭಿನಯದ ತಾಜಮಹಲ್ ಚಿತ್ರದ `ನೀನೆಂದು ನನ್ನವನು' ಚಿತ್ರದ ಗೀತೆಯನ್ನು ಹಾಡಿದರು. ಆರ್ ಚಂದ್ರು ಸಾಹಿತ್ಯದ ಈ ಹಾಡು ಅಭಿಮಾನ್ ರಾಯ್ ಸಂಗೀತದಲ್ಲಿ ಮೂಡಿಬಂದಿತ್ತು.

    ಮುಸ್ಸಂಜೆ ಮಾತು - ನಿನ್ನ ನೋಡಲೆಂತೋ

    ಕಿಚ್ಚ ಸುದೀಪ್ ರ ಮುಸ್ಸಂಜೆ ಮಾತು ಚಿತ್ರದ ನಿನ್ನ ನೋಡಲೆಂತೋ ಗೀತೆಯನ್ನು ಸೋನು ನಿಗಮ್ ಜೊತೆ ಸೇರಿ ಹಾಡಿದ್ದರು. ಈ ಗೀತೆ ವಿ ಸಂಭ್ರಮ ಶ್ರೀಧರ್ ಸಂಗೀತದಲ್ಲಿ ಮೂಡಿಬಂದಿತ್ತು. ಈ ಗೀತೆಗಾಗಿ ಶ್ರೇಯಾ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.

    ಮೊಗ್ಗಿನ ಮನಸು - ಮೊಗ್ಗಿನ ಮನಸಲಿ/ಮಳೆ ಬರುವ ಹಾಗಿದೆ

    ರಾಧಿಕಾ ಪಂಡಿತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಮೊಗ್ಗಿನ ಮನಸ್ಸು ಚಿತ್ರದ ಮೊಗ್ಗಿನ ಮನಸಲಿ ಮತ್ತು ಮಳೆ ಬರುವ ಹಾಗಿದೆ ಗೀತೆಗಳು ಹಾಡಿದರು.ಈ ಗೀತೆಗಳು ಮನೋ ಮೂರ್ತಿ ಸಂಗೀತದಲ್ಲಿ ಮೂಡಿ ಬಂದಿದ್ದವು.

    ರಾಜ್ ದಿ ಶೋ ಮ್ಯಾನ್ - ಪೋಲಿ ಇವನು/ರಾಜಾ ಹೇಳುವಾಗಿಲ್ಲ

    ಪುನೀತ್ ನಾಯಕನಾಗಿ ನಟಿಸಿದ್ದ ರಾಜ್ ಚಿತ್ರದ ಪೋಲಿ ಇವನು ಮತ್ತು ರಾಜಾ ಹೇಳುವಾಗಿಲ್ಲ ಗೀತೆಗಳು ಚೆನ್ನಾಗಿ ಮೂಡಿಬಂದವು. ಪ್ರೇಮ್ ಸಾಹಿತ್ಯದ ಈ ಗೀತೆಗಳಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು.

    ಮನಸಾರೆ - ನಾ ನಗುವ ಮೊದಲೇನೆ

    ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಚಿತ್ರದಲ್ಲಿ ಕಣ್ಣ ಹನಿಯೊಂದಿಗೆ ಮತ್ತು ನಾ ನಗುವ ಮೊದಲೇನೆ ಗೀತೆಗಳಿಗೆ ಧ್ವನಿಯಾದರು. ಯೊಗರಾಜ್ ಭಟ್ ಸಾಹಿತ್ಯದ ಈ ಗೀತೆಗಳಿಗೆ ಮನೋ ಮೂರ್ತಿ ಸಂಗೀತ ನೀಡಿದರು.ನಾ ನಗುವ ಮೊದಲೇನೆ ಗೀತೆಗೆ ಮಿರ್ಚಿ ಮ್ಯೂಸಿಕ್ ಪ್ರಶಸ್ತಿ ಪಡೆದರು.

    ಚಿರು - ಇಲ್ಲೆ ಇಲ್ಲೆ ಎಲ್ಲೋ

    ಚಿರಂಜೀವಿ ಸರ್ಜಾ ಅಭಿನಯದ ಇಲ್ಲೆ ಇಲ್ಲೆ ಎಲ್ಲೋ ಗೀತೆಗೆ ಸೋನು ನಿಗಮ್ ಜೊತೆ ಧ್ವನಿಯಾದರು. ಗೌಸ್ ಪೀರ್ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಗೆ ಗಿರಿಧರ್ ದಿವಾನ್ ಸಂಗೀತ ನೀಡಿದರು.

    ಸಂಜು ವೆಡ್ಸ್ ಗೀತಾ - ಗಗನವೇ ಬಾಗಿ/ಸಂಜು ಮತ್ತು ಗೀತಾ

    ಸಂಜು ಮತ್ತು ಗೀತಾ ಚಿತ್ರದಲ್ಲಿ ಗಗನವೇ ಬಾಗಿ ಮತ್ತು ಟೈಟಲ್ ಗೀತೆಗೆ ಧ್ವನಿಯಾದರು. ಕವಿರಾಜ್ ಸಾಹಿತ್ಯವಿದ್ದ ಈ ಚಿತ್ರದ ಗೀತೆಗಳು ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಮೂಡಿಬಂದವು. ಗಗನವೇ ಬಾಗಿ ಗೀತೆಗೆ ಮ್ಯೂಸಿಕ್ ಮಿರ್ಚಿ ಪ್ರಶಸ್ತಿ ಪಡೆದರು.

    ಪರಮಾತ್ಮ - ತನ್ಮಯಳಾದೆನು

    ಯೋಗರಾಜ್ ಭಟ್ ನಿರ್ದೇಶನ ಮತ್ತು ಪುನೀತ್ ರಾಜಕುಮಾರ್ ನಾಯಕನಾಗಿ ನಟಿಸಿದ್ದ ಪರಮಾತ್ಮ ಚಿತ್ರದ ತನ್ಮಯಳಾದೆನು ಚಿತ್ರದ ಗೀತೆಯನ್ನು ಹಾಡಿದರು. ಜಯಂತ್ ಕಾಯ್ಕಿಣಿ ಸಾಹಿತ್ಯ ಹೊಂದಿದ್ದ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದರು.

    ಮೈನಾ - ಮೊದಲ ಮಳೆಯಂತೆ

    ನಾಗಶೇಖರ್ ನಿರ್ದೇಶನದ ಮೈನಾ ಚಿತ್ರದಲ್ಲಿ ಮೊದಲ ಸೋನು ನಿಗಮ್ ಜೊತೆ ಮೊದಲ ಮಳೆಯಂತೆ ಗೀತೆಗೆ ಧ್ವನಿಯಾದರು. ಕವಿರಾಜ್ ಸಾಹಿತ್ಯದ ಈ ಹಾಡಿಗೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದರು. ಈ ಹಾಡಿಗೆ ಮಿರ್ಚಿ ಮ್ಯೂಸಿಕ್ ಪ್ರಶಸ್ತಿ ಪಡೆದರು.

    ಅಂದರ್ ಬಾಹರ್ - ಮಳೆಯಲಿ ಮಿಂದ

    ಶಿವಣ್ಣ ನಾಯಕನಾಗಿ ನಟಿಸಿದ್ದ ಅಂದರ್ ಬಾಹರ್ ಚಿತ್ರದ ಮಳೆಯಲಿ ಮಿಂದ ಗೀತೆಗೆ ವಿಜಯ್ ಪ್ರಕಾಶ್ ಜೊತೆ ಧ್ವನಿಯಾದರು. ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಗೀತೆಗೆ ವಿಜಯ್ ಪ್ರಕಾಶ್ ಸಂಗೀತ ನೀಡಿದ್ದರು.

    ಉಳಿದವರು ಕಂಡಂತೆ - ಕಾಕಿಗ ಬಣ್ಣ ಕಾಂತ

    ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಚಿತ್ರದ ಕಾಕಿಗ ಬಣ್ಣ ಕಾಂತ ಗೀತೆಯನ್ನು ಹಾಡಿದ್ದರು. ರಕ್ಷಿತ್ ಶೆಟ್ಟಿ ಸಾಹಿತ್ಯದ ಈ ಗೀತೆಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ರೋಮ್ಯಾಂಟಿಕ್ ಹಾಡುಗಳಿಗೆ ಹೆಸರಾದ ಶ್ರೇಯಾ ಆಫ್ ಬೀಟ್ ಹಾಡಿನ ಮೂಲಕ ಗಮನ ಸೆಳೆದರು.

    ಅಂಬರೀಶ - ಕಣ್ಣಲೇ

    ದರ್ಶನ್ ರ ಅಂಬರೀಶ್ ಚಿತ್ರದ ಕಣ್ಣಲೇ ಬಚ್ಚಿಡಲೇ ಗೀತೆಯನ್ನು ಸೋನು ನಿಗಮ್ ಜೊತೆ ಹಾಡಿದರು. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದ ಈ ಗೀತೆಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು.

    ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ - ಉಪವಾಸ

    ಯಶ್-ರಾಧಿಕಾ ಅಭಿನಯದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದ ಉಪವಾಸ ಗೀತೆಗೆ ಸೋನು ನಿಗಮ್ ಜೊತೆ ಧ್ವನಿಯಾದರು. ಗೌಸ್ ಪೀರ್ ಸಾಹಿತ್ಯದ ಈ ಗೀತೆಗೆ ಹರಿಕೃಷ್ಣ ಸಂಗೀತವಿತ್ತು. ಈ ಗೀತೆಗೆ ಐಫಾ ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದರು.

    ಕೋಟಿಗೊಬ್ಬ-2 - ಸಾಲುತಿಲ್ಲವೇ

    ಸುದೀಪ್ ರ ಕೋಟಿಗೊಬ್ಬ 2 ಚಿತ್ರದ ಸಾಲುತಿಲ್ಲವೇ ಗೀತೆಗೆ ವಿಜಯ್ ಪ್ರಕಾಶ್ ಜೊತೆ ಧ್ವನಿಯಾದರು. ನಾಗೇಂದ್ರ ಪ್ರಸಾದ್ ಸಾಹಿತ್ಯದ ಈ ಹಾಡಿಗೆ ಡಿ ಇಮ್ಮಾನ್ ಸಂಗೀತ ನೀಡಿದ್ದರು.

    ಮುಂಗಾರು ಮಳೆ 2 - ಕನಸಲು ನೂರು ಬಾರಿ

    ಗಣೇಶ್ ರ ಮುಂಗಾರು ಮಳೆ 2 ಚಿತ್ರದಲ್ಲಿ ಕನಸಲು ನೂರು ಬಾರಿ ಗೀತೆ ಹಾಡಿದರು. ಶಶಾಂಕ್ ಸಾಹಿತ್ಯದ ಈ ಹಾಡಿಗೆ ಅರ್ಜುನ ಜನ್ಯ ಸಂಗೀತ ನೀಡಿದ್ದರು.

    ಚಕ್ರವರ್ತಿ - ಒಂದು ಮಳೆಬಿಲ್ಲು/ಮತ್ತೆ ಮಳೆಯಾಗಿದೆ

    ದರ್ಶನ್ ರ ಚಕ್ರವರ್ತಿ ಚಿತ್ರದಲ್ಲಿ ಒಂದು ಮಳೆಬಿಲ್ಲು ಮತ್ತು ಮತ್ತೆ ಮಳೆಯಾಗಿದೆ ಗೀತೆಗೆ ಧ್ವನಿಯಾದರು. ನಾಗೇಂದ್ರ ಪ್ರಸಾದ್ ಮತ್ತು ಡಾ. ಉಮೇಶ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು.

    ಮಾಸ್ತಿ ಗುಡಿ - ಚಿಪ್ಪಿನೊಳಗೆ

    ದುನಿಯಾ ವಿಜಯ್ ರ ಮಾಸ್ತಿಗುಡಿ ಚಿತ್ರದ ಚಿಪ್ಪಿನೊಳಗೆ ಗೀತೆಗೆ ಧ್ವನಿಯಾದರು. ಕವಿರಾಜ್ ಸಾಹಿತ್ಯದ ಈ ಹಾಡಿಗೆ ಸಾಧು ಕೋಕಿಲಾ ಸಂಗೀತ ನೀಡಿದ್ದರು.

    ಮುಗುಳುನಗೆ - ನಿನ್ನ ಸ್ನೇಹದಿಂದ

    ಗಣೇಶ್ ರ ಮುಗುಳುನಗೆ ಚಿತ್ರದ ನಿನ್ನ ಸ್ನೇಹದಿಂದ ಮತ್ತು ಕನ್ನಡಿ ಇಲ್ಲದ ಊರಿನಲ್ಲಿ ಗೀತೆಗಳಿಗೆ ಧ್ವನಿಯಾದರು. ಯೋಗರಾಜ್ ಭಟ್ ಸಾಹಿತ್ಯದ ನಿನ್ನ ಸ್ನೇಹದಿಂದ ಹಾಡು ಕೇಳುಗರ ಫೇವರೇಟ್ ಆಯಿತು. ಹರಿಕೃಷ್ಣ ಸಂಗೀತ ನೀಡಿದ್ದರು.

    ಕನ್ನಡಕ್ಕಾಗಿ ಒಂದನ್ನು ಒತ್ತಿ - ಒಮ್ಮೊಮ್ಮೆ ನನ್ನನ್ನು

    ಶತಮರ್ಷಣ್ ಅವಿನಾಶ್ಅಭಿನಯದ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಒಮ್ಮೊಮ್ಮೆ ನನ್ನನ್ನು ಗೀತೆಗೆ ಧ್ವನಿಯಾದರು. ಯೋಗರಾಜ್ ಭಟ್ ಸಾಹಿತ್ಯದ ಈ ಹಾಡಿಗೆ ಅರ್ಜುನ ಜನ್ಯ ಸಂಗೀತ ನೀಡಿದ್ದರು.

    ನಟಸಾರ್ವಭೌಮ - ಯಾರೋ ನಾನು

    ಪುನೀತ್ ರ ನಟಸಾರ್ವಭೌಮ ಚಿತ್ರದ ಯಾರೋ ನಾನು ಗೀತೆಗೆ ಧ್ವನಿಯಾದರು. ಕವಿರಾಜ್ ಸಾಹಿತ್ಯದ ಈ ಹಾಡಿಗೆ ಡಿ ಇಮ್ಮಾನ್ ಸಂಗೀತ ನೀಡಿದ್ದರು.

    ಯಜಮಾನ - ಒಂದು ಮುಂಜಾನೆ

    ದರ್ಶನ್ ರ ಯಜಮಾನ ಚಿತ್ರದ ಒಂದು ಮುಂಜಾನೆ ಗೀತೆಗೆ ಸೋನು ನಿಗಮ್ ಜೊತೆ ಧ್ವನಿಯಾದರು. ಕವಿರಾಜ್ ಸಾಹಿತ್ಯದ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು.

    ಕಿಸ್ - ನೀನೆ ಮೊದಲು ನೀನೆ ಕೊನೆ

    ಅಂಬಾರಿ ಅರ್ಜುನ್ ಅಭಿನಯದ ಕಿಸ್ ಚಿತ್ರದ ನೀನೆ ಮೊದಲು ನೀನೆ ಕೊನೆ ಗೀತೆಗೆ ಧ್ವನಿಯಾದರು. ಅರ್ಜುನ್ ಸಾಹಿತ್ಯದ ಈ ಗೀತೆಗೆ ಆದಿ ಹರಿ ಸಂಗೀತ ನೀಡಿದ್ದರು ಈ ಗೀತೆ 2019 ರ ಟಾಪ್ ಗೀತೆಗಳಲ್ಲಿ ಒಂದಾಯಿತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X