twitter
    X
    Home ಚಲನಚಿತ್ರಗಳ ಒಳನೋಟ

    ರಿಯಲ್ ಸ್ಟಾರ್ ಉಪೇಂದ್ರ ಅವರ ಸೂಪರ್‌ ಹಿಟ್‌ ಡೈಲಾಗ್‌ಗಳಿವು!

    Author Administrator | Updated: Monday, September 18, 2023, 08:09 AM [IST]

    ರಿಯಲ್ ಸ್ಟಾರ್ ಉಪೇಂದ್ರ ರಿಯಾಲಿಸ್ಟಿಕ್ ಡೈಲಾಗ್ ಗಳಿಗೆ ಪ್ರಸಿದ್ಧರು. ತಮ್ಮ ಚಿತ್ರಗಳಿಗೆ ಬಹುತೇಕ ಸಂಭಾಷಣೆಯನ್ನು ಬರೆಯುವ ಉಪ್ಪಿ ತಮ್ಮ ಚಿತ್ರಗಳಲ್ಲಿನ ಡೈಲಾಗ್ ಗಳಿಗೆ ವಿಶೇಷ ಒತ್ತನ್ನು ನೀಡುತ್ತಾರೆ. ಉಪ್ಪಿ ಚಿತ್ರಗಳ ಡೈಲಾಗ್ ಗಳು ಪ್ರೇಕ್ಷಕರನ್ನು ರಂಜಿಸುವುದು ಮಾತ್ರವಲ್ಲದೇ ಒಂದು ವಿಶೇಷವಾದ ಕಲ್ಟ್ ಸ್ಟೇಟಸ್ ಪಡೆದಿವೆ. ಇಲ್ಲಿ ಉಪೇಂದ್ರ ರವರ ಚಿತ್ರಗಳ ಕೆಲವು ಪ್ರಸಿದ್ಢ ಡೈಲಾಗ್ ಗಳಿವೆ.

    cover image
    ಬುದ್ಧಿವಂತ

    ಬುದ್ಧಿವಂತ

    1

    ಬುದ್ದಿವಂತ - ದೇಶದಲ್ಲಿ ಯಾವುದೂ ಫಾಸ್ಟ್ ಇಲ್ಲ, ಟ್ರಾಫಿಕ್ ಅಲ್ಲಿ ಫಾಸ್ಟ್ ಇಲ್ಲ, ಎಲ್ಲಿ ನೋಡಿದರೂ ಜಾಮ್ ಜಾಮ್, ಟೆಕ್ನಾಲಜಿ ಅಲ್ಲಿ ಫಾಸ್ಟ್ ಇಲ್ಲ, ಮಂಡೆ ಒಡಿಸೋದರಲ್ಲಿ ಫಾಸ್ಟ್ ಇಲ್ಲ, ಬರೀ ಪಾಪುಲೇಶನ್ ಅಲ್ಲಿ ಫಾಸ್ಟು.

    ಗೋಕರ್ಣ

    ಗೋಕರ್ಣ

    2

    ಮಗಾ, ಈ ಪ್ರಪಂಚದಲ್ಲಿ 2 ಕ್ಲಾಸ್ ಜನಗಳು, ಬಾಕಿ ಇಡೋರು, ಬಾಕಿ ಇಡ್ದಿರೋರು, ಕೆಲವರು ಪ್ರೀತಿಲಿ ಬಾಕಿ ಇಡ್ತಾರೆ, ಕೆಲವರು ದ್ವೇಷದಲ್ಲಿ ಬಾಕಿ ಇಡ್ತಾರೆ, ಕೆಲವರು ದುಡ್ಡಲ್ಲಿ ಬಾಕಿ ಇಡ್ತಾರೆ, ಕೆಲವರು ಆಸ್ತಿಯಲ್ಲಿ ಬಾಕಿ ಇಡ್ತಾರೆ, ಬೇರ್ ಬೇರೆತ್ ಬಾಕಿ ಇಡ್ತಾರೆ, ಆದ್ರೆ ನಾನು ಮಾತ್ರ ಯಾವದೂ ಬಾಕಿ ಇಡೋಲ್ಲ, ಎಲ್ಲಾ ವಾಪಸ್ ಕೋಡ್ತೀನಿ.

    ಎ

    3

    ಎ ಚಿತ್ರದ ಹಲವ ಡೈಲಾಗ್ ಗಳು ಹಿಟ್ ಆಗಿವೆ. `ಪ್ರಪಂಚದಲ್ಲಿ ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ' ಈ ರೀತಿ ಸಾಕಷ್ಟು ಇಂಟರೆಸ್ಟಿಂಗ್ ಡೈಲಾಗ್ ಗಳಿವೆ. `ರೂಮಲ್ಲಿರೋ ಗೋಡೆಗಳಿಗೆ ಮಂಚಗಳಿಗೆ ನೋಡೋಕ್ ಕಣ್ಣಿದ್ದು ಮಾತಾಡೋಕ್ ಬಾಯಿ ಇದ್ಬಿಟ್ಟಿದ್ರೆ, ದಿನಕ್ ಒಂದ್ ವರ್ಲ್ಡ್ ವಾರ್ ಆಗ್ಬಿಡೋದು'.

    ಎ

    4

    ಏನ್ ತಮಾಷೆ ಮಾಡ್ತಾ ಇದ್ದೀರಾ...ಆಟಾ ಆಡ್ತಾ ಇದ್ದೀಯಾ... ದೇಶ ಬೆಂಕಿ ಹೊತ್ತಿ ಉರೀತಾ ಇದೆ...ಬಡವರು ಒಳ್ಳೆಯವರ ಹೊಟ್ಟೆ ಉರಿತಾ ಇದೆ..ಕೆಟ್ಟವರ ಹೊಟ್ಟೆ ಊದುತ್ತಾ ಇದೆ...ನೀನ್ ಮಜಾ ತಗೋತಾ ಇದ್ದೀಯಾ ಇಲ್ಲಿ...ಯಾಕ್ ಗಣೇಶ ನೀನು ಸರ್ವಶಕ್ತ ತಾನೆ...ಆಂ...ಯಾಕ್ ಈ ರೀತಿ ಜನಗಳ ಕೈಲಿ ಒಳ್ಳೇದು ಕೆಟ್ಟದು ಮಾಡ್ಸಿ ಪಾಪಿ ಪುಣ್ಯವಂತ ಅಂಥ ಹಿಂಗ್ ಮಾಡ್ತೀಯಾ...ಯಾಕ್ ಈ ರೀತಿ ತೊಂದರೆ ಕೊಡ್ತೀಯಾ ಕೆಟ್ಟವರನ್ನೆಲ್ಲಾ ಸಾಯಿಸಿ ಬಿಡು..ಒಳ್ಳೆಯವರನ್ನೆಲ್ಲ್ಲ ಚೆನ್ನಾಗಿಡು..ತಗೋ ತಗೋ ತಾಕತ್ ಇದ್ರೆ ಹೋಗಿ ಸಾಯಿಸಿ ಬಿಡೋಗು...ಆಗಲ್ಲ ನಿನ್ನ ಕೈಯಲ್ಲಿ ಆಗಲ್ಲ...

    ಉಪೇಂದ್ರ

    ಉಪೇಂದ್ರ

    5

    ಲವ್ವಾ.?..ಯೇ ತಗಡು...ನೀನ್ ಈ ತರ ಹವಾಯಿ ಚಪ್ಪಲಿ ಹಾಕೊಂಡು ಕಿತ್ತೋಗಿರೋ ಸೈಕಲ್ ಹಿಡ್ಕೊಂಡು ಅವಳಿಂದ ಒಂದು ವರ್ಷ ಅಲ್ಲ ನೂರು ವರ್ಷ ಬಿದ್ದರು ಅವಳು ನೂರು ವರ್ಷ ಬಿದ್ದರೂ ಅವಳು ನಿನ್ ಕಡೆ ಮೂಸು ನೋಡಲ್ಲ..ಜೀವನದಲ್ಲಿ ಮುಂದೆ ಬಾ...ಸಂಪಾದನೆ ಮಾಡು, ಇಂತ ನೂರು ಅಲ್ಲ ಸಾವಿರ ಹುಡ್ಗೀರು ನಿನ್ ಹಿಂದೆ ಬೀಳ್ತಾರೆ..ಲೈಫ್ ಅಲ್ಲಿ ಯಾವತ್ತು ಯವುದರ ಹಿಂದೇನು ನಾವು ಬೀಳಬಾರ್ದು ಪ್ರತಿ ಒಂದು ನಮ್ಮ ಹಿಂದೆ ಬೀಳಬೇಕು.

    ಉಪೇಂದ್ರ

    ಉಪೇಂದ್ರ

    6

    ನೋಡು ಪ್ರಪಂಚದಲ್ಲಿ ನೆಡಿತಿರೋ ಲವ್ವು, ಡವ್ವು ಬಗ್ಗೆ ಕರೆಕ್ಟ್ ಆಗಿ ಹೇಳ್ತೀನಿ ಕೇಳುಸ್ಕೋ, ಹದಿನಾರಿಂದ ಇಪ್ಪತ್ತು ವರ್ಷದ ಹುಡುಗಿ ಬರಿ ಡೈಲಾಗ್ ಹೊಡೆದರೆ ಸಾಕು ಬಿದ್ದೋಗ್ತಾಳೆ. ಇಪ್ಪತ್ತರಿಂದ ಇಪ್ಪತ್ತೈದು ವರ್ಷದ ಹುಡುಗಿ ಬರಿ ಹುಡುಗನ ಲೆವೆಲ್ ನೋಡಿ ಬೀಳತಾಳೆ. ಇಪ್ಪತ್ತೈದು ಮೇಲೆ ಒಂದು ಹುಡುಗೀಗೆ ವಯಸ್ಸಾಯಿತೋ ಅನ್ಕೋ ಆ ಹುಡುಗ ಹ್ಯಾಗೇ ಇದ್ದರೂ ಬಿದ್ದೋಗ್ತಾಳೆ.. ಆದ್ರೆ ನನ್ನ ಲವ್ ಗೆ ಮಾತ್ರ ಈ ಯಾವ ಪ್ರಾಬ್ಲಮ್ ಇಲ್ಲ.

    ಉಪೇಂದ್ರ

    ಉಪೇಂದ್ರ

    7

    ಯೇ ..ಪಕ್ಕದ ಮನೇಲಿ ಕೋಟಿ ರೂಪಾಯಿ ದರೋಡೆ ಆಗಲಿ ಕಳ್ತನ ಆಗಲಿ ನಿಂಗೆ ಬೇಜಾರ್ ಆಗಲ್ಲ. ಅದೇ ನಿಮ್ಮ ಮನೇಲಿ 500 ರೂಪಾಯಿ 1000 ರೂಪಾಯಿ ಕಳ್ತನ ಆಗಲಿ ನೀನು ವಿಲ ವಿಲ ಅಂತ ಒದ್ದಾಡ್ತೀಯ.. ಯಾಕ್ ಗೊತ್ತಾ..? ಯಾಕ್ ಗೊತ್ತಾ..? ಅದು ನಂದು..ಅದು ನಂದು ಅನ್ನೋ ಕಾರಣಕ್ಕೋಸ್ಕರ..ನೋಡು ಅದು ನಂದು ಅಂತ ಒದ್ದಾಡಬೇಡ, ಒಂದೇ ಒಂದು ಕ್ಷಣ ಅದು ನಂದಲ್ಲ ಅನ್ಕೋ ಆರಾಮಾಗಿ ಇರ್ತೀಯಾ. ನಾನು ನಂದು ಅಂತ ಮನುಷ್ಯ ಎಲ್ಲಾ ಬಿಟ್ಟು ಇರೋಕೆ ಆಗಲ್ಲ ನಿಜ. ಆದ್ರೆ 10 % ನಾನು ನಂದು ಅನ್ನೋದು ಬಿಟ್ಟರೆ 20 % ಮಾನಸಿಕವಾಗಿ ಖುಷಿಯಾಗಿ ಇರ್ತೀಯಾ, 20 % ಬಿಟ್ಟರೆ 50 % ಖುಷಿಯಾಗಿ ಇರ್ತೀಯಾ..

    ಉಪೇಂದ್ರ

    ಉಪೇಂದ್ರ

    8

    ಫಸ್ಟ್ ಆಫ್ ಆಲ್ ನನ್ನ ಮಗಂದು, ಅಪ್ಪನ ದುಡ್ಡು ಮಗ ತಿನ್ನೋದೆ ದೊಡ್ಡ ತಪ್ಪು..ನಾನ್ ಎನಾರ PM ಆದ್ರೆ, ಅಪ್ಪನ್ ಆಸ್ತಿ ಮಗನಿಗೆ ಹೋಗೊದನ್ನ ಬ್ಯಾನ್ ಮಾಡ್ಬಿಡ್ತೀನಿ.., ಅಪ್ಪನ್ ಆಸ್ತಿ ಮಗನಿಗೆ ಹೋಗಲೇ ಬಾರದು ಹಾಗ್ ಮಾಡ್ಬಿಡ್ತೀನಿ..ನನ್ ಮಗಂದ್ ಆ ತರ ಮಾಡುದ್ರೆ ನನ್ ಮಕ್ಳಾ ನಿಮ್ಮಂತವ್ರು ನಾಲ್ಕ ನಾಲ್ಕ ತೆಲೆಮಾರಿಗೆ ಆಗೋಷ್ಟು ಆಸ್ತಿ ಮಾಡಲ್ಲ ನನ್ ಮಕ್ಳಾ ಆಸ್ತಿ ಮಾಡಲ್ಲ..ಎಲ್ಲಾ ಈಕ್ವಲ್ ಆಗಿರ್ತಾರೆ.

    ರಕ್ತ ಕಣ್ಣೀರು

    ರಕ್ತ ಕಣ್ಣೀರು

    9

    ಪ್ಯೂಚರ್ ಇಲ್ದಿರೋ ದೇಶ, ನೇಚರ್ ಇಲ್ದಿರೋ ನಾಡು, ಟೀಚರ್ಸ್ ಇಲ್ದಿರೋ ಸ್ಕೂಲ್ಸು, ಲೀಡರ್ಸ್ ಇಲ್ದಿರೋ ಪಾರ್ಟೀಸ್, ಪ್ಲಾನಿಂಗ್ ಇಲ್ದಿರೋ ಫ್ಯಾಮಿಲೀಸು, ಒಬ್ಬೊಬ್ಬನಿಗೆ ಡಜನ್ ಡಜನ್ ಮಕ್ಳು, ಅದ್ರಲ್ಲಿ ಅರ್ಧ ಪುಕ್ಲು, ಇನ್ನರ್ಧ ತಿಕ್ಲು ತಿಕ್ಲು...

    ರಕ್ತ ಕಣ್ಣೀರು

    ರಕ್ತ ಕಣ್ಣೀರು

    10

    ನೀನು ಈಗ ತಿರುಪತಿಗೆ ಹೋಗಿ ಮುಡಿ ಕೊಡ್ತೀಯಲ್ಲಾ, ಮತ್ತೆ ಅದು ಬೆಳಿಯುತ್ತೆ, ವಾಪಸ್ ಬರುತ್ತೆ ಅಂತ ಕೊಡ್ತೀಯಾ. ಬೆಳೆಯದೇ ಇದಿದ್ರೆ ಕೊಡ್ತಿದ್ಯಾ? ದೇವರು ಮೇಲೆ ಭಕ್ತಿ ಇದ್ರೆ, ನಿನ್ನ ಕಣ್ಣು ಕಿತ್ತು ಕೊಡು. ಕೈ ಕತ್ತರಿಸಿ ಕೊಡು. ಕಾಲು ಕಟ್ ಮಾಡಿ ಕೊಡು. ದೇವರಿಗೆ ಮುಡಿ ಕೊಡ್ತಾನಂತೆ, ದೇವರನ್ನೇನೋ ಅಂದ್ಕೊಂಡ್ಬಿಟ್ಟಿದ್ದಾನೆ ಇವನು. ಈಡಿಯೆಟ್...ಗೆಟ್ ಔಟ್.

    ರಕ್ತ ಕಣ್ಣೀರು

    ರಕ್ತ ಕಣ್ಣೀರು

    11

    ಯು ಸೀ ಮ್ಯಾನ್ ಈ ದೇಶದಲ್ಲಿ ಏನ್ ಕಲಿದೇ ಇದ್ರು ಇಂಗ್ಲಿಷ್ ಮಾತ್ರ ಕಲೀಲೇ ಬೇಕು ಮ್ಯಾನ್...ಈ ದೇಶದ ವೀಕ್ ನೆಸ್ಸೇ ಇಂಗ್ಲಿಷು...ಇಂಗ್ಲಿಷ್ ಒಂದು ಗೊತ್ತಿದ್ರೆ ಈರಭದ್ರನಿಗೂ ಸಾಲ ಕೊಡ್ತಾರೆ...ಕೋಡಂಗಿಗೆ ಹೆಣ್ ಕೊಡ್ತಾರೆ ಮಂಕು ದಿಣ್ಣೆಗಳಿಗೆ ಸ್ಕೂಲಲ್ಲಿ ಸೀಟ್ ಕೊಡ್ತಾರೆ...ಕಮಂಗಿಗೆ ಸಿನಿಮಾದಲ್ಲಿ ಪಾರ್ಟ್ ಕೊಡ್ತಾರೆ...ಕೋತಿಗಳಿಗೆ ಹೆಣ್ ಮಕ್ಕಳು ಹಾರ್ಟ್ ಕೊಡ್ತಾರೆ..ಜಸ್ಟ್ ಬಿಕಾಸ್ ಆಫ್ ಇಂಗ್ಲಿಷ್ ಮ್ಯಾನ್...

    ಸೂಪರ್

    ಸೂಪರ್

    12

    ಅಪ್ಪ....ಇನ್ನೊಂದೇ ಒಂದು ಡೈಲಾಗ್ ಈ ದೇಶದ ಬಗ್ಗೆ ಮಾತನಾಡಿದ್ರೆ, ಇಲ್ಲೇ ಇಲ್ಲೇ ನನ್ನ ಹೆಣ ನೋಡ್ಬೇಕಾಗುತ್ತೆ. ಏನಂದುಕೊಂಡಿದ್ದೀಯಾ ಈ ದೇಶನಾ? ಏನಂದುಕೊಂಡಿದ್ದೀಯಾ ಈ ಜನಗಳನ್ನ? ಇದುವರೆಗೂ ಈ ದೇಶನಾ, ಈ ಜನರನ್ನ ಪ್ರೀತಿಸ್ತಾ ಇದ್ದೆ ಅಷ್ಟೆ. ಈಗ ಈ ದೇಶ, ಜನರನ್ನ ಪೂಜಿಸುತ್ತೇನೆ. ಇವರು ನನ್ನ ಪ್ರಾಣಕ್ಕಿಂತ ಹೆಚ್ಚು ಇನ್ಮೇಲೆ. ಈ ದೇಶನಾ ಅದ್ಯಾವುದೋ ಸ್ಟುಪಿಡ್ ಇಂಗ್ಲೆಂಡ್ ಗೆ ಹೋಲಿಸ್ತಿಯಾ? ಇದೇ ತರಹ ರೌಡಿಗಳು ಇಂಗ್ಲೆಂಡ್ ನಲ್ಲಿ ಮನೆಗಳಿಗೆ ಹೋಗಿ ಗಲಾಟೆ ಮಾಡಿದಿದ್ರೆ, ಅಕ್ಕಪಕ್ಕದ ಮನೆಯವರು ರಾದ್ಧಾಂತ ಮಾಡಿರೋರು. ಅದೇ ನೋಡು ಈ ದೇಶದ ಸತ್‌ಪ್ರಜೆಗಳು ಹೇಗೆ ನಿಂತಿದ್ದಾರೆ ನೋಡು, ಇದು ಶಾಂತಿ-ಸೌಹಾರ್ದತೆ ಅಂದ್ರೆ. ಇಂತಹ ಜನಗಳು ನಿನಗೆ ಯಾವ ದೇಶದಲ್ಲಿ ಸಿಕ್ತಾರೆ?

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X