twitter
    X
    Home ಚಲನಚಿತ್ರಗಳ ಒಳನೋಟ

    ಈ ಸಿನಿಮಾಗಳ ಹಾಡುಗಳು ಸೂಪರ್ ಹಿಟ್ ಆದರೂ ಚಿತ್ರಗಳು ಮಾತ್ರ ಗೆಲ್ಲಲಿಲ್ಲ!

    Author Sowmya Bairappa | Published: Friday, December 2, 2022, 05:12 PM [IST]

    ಸಿನಿಮಾ ಜನರ ಮನಸ್ಸಿನಲ್ಲಿ ಅಚ್ಚುಳಿಯುವಂತೆ ಮಾಡುವುದರಲ್ಲಿ ಹಾಡುಗಳ ಪಾತ್ರ ಬಹಳ ಮುಖ್ಯ. ಹಾಡುಗಳು ಚೆನ್ನಾಗಿದ್ದರೆ ಸಿನಿಮಾ ಕೂಡ ಚೆನ್ನಾಗಿರುತ್ತದೆ ಎಂಬುದು ಹಲವು ಸಿನಿರಸಿಕರ ಕಲ್ಪನೆ. ಆದರೆ, ಅನೇಕ ಬಾರಿ ಜನರ ಊಹೆಗಳು ತಲೆಕೆಳಗಾಗಿವೆ. ಕನ್ನಡದ ಹಲವು ಸಿನಿಮಾಗಳ ಹಾಡುಗಳು ಸೂಪರ್ ಹಿಟ್ ಆಗಿದ್ದರೂ ಕೂಡ ಥಿಯೇಟರ್‌ಗಳಲ್ಲಿ ಅಷ್ಟು ಸದ್ದು ಮಾಡಿಲ್ಲ. ಅಂತಹ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image
    ಪರಮಾತ್ಮ

    ಪರಮಾತ್ಮ

    1

    ಯೋಗರಾಜ್ ಭಟ್ ಅವರ ನಿರ್ದೇಶನದ ಪರಮಾತ್ಮ ಸಿನಿಮಾದ ಒಂದೊಂದು ಹಾಡುಗಳು ಕೂಡ ಅದ್ಭುತವಾಗಿವೆ. ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಾಯಕರಾಗಿ ಹಾಗೂ ದೀಪಾ ಸನ್ನಿಧಿ, ಐಂದ್ರಿತಾ ರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ರಂಗಾಯಣ ರಘು, ರಾಜು ತಾಳಿಕೋಟೆ, ಅವಿನಾಶ್, ಅನಂತ್ ನಾಗ್, ದತ್ತಣ್ಣ ಮೊದಲಾದವರ ತಾರಾ ಬಳಗವೇ ಚಿತ್ರದಲ್ಲಿತ್ತು. ಆದರೆ, ಈ ಸಿನಿಮಾ ಥಿಯೇಟರ್‌ಗಳಲ್ಲಿ ಓಡಲಿಲ್ಲ. ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದ ಪ್ರತಿಯೊಂದು ಹಾಡುಗಳು ಕೂಡ ಸಖತ್ ಹಿಟ್ ಆಗಿವೆ. 

     

    ಜಸ್ಟ್ ಮಾತ್ ಮಾತಲ್ಲಿ

    ಜಸ್ಟ್ ಮಾತ್ ಮಾತಲ್ಲಿ

    2

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರ್ದೇಶಿಸಿ, ನಟಿಸಿರುವ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಕೂಡ ಪರಮಾತ್ಮ ಚಿತ್ರದಂತೆ ಸೊಗಸಾದ ಹಾಡುಗಳನ್ನು ಹೊಂದಿತ್ತು. ವಿಶೇಷವಾಗಿ ರಘು ದೀಕ್ಷಿತ್ ಅವರ ಧ್ವನಿಯಲ್ಲಿ ಮೂಡಿಬಂದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಮುಖ್ಯಪಾತ್ರ ನಿರ್ವಹಿಸಿದ್ದರು. ಆದರೆ, ಪ್ರೇಮ ಕಥೆಯುಳ್ಳ ಈ ಸಿನಿಮಾ ಕೂಡ ಥಿಯೇಟರ್‌ಗಳಲ್ಲಿ ಸದ್ದು ಮಾಡಲಿಲ್ಲ. 

     

    ಮುಂಗಾರು ಮಳೆ 2

    ಮುಂಗಾರು ಮಳೆ 2

    3

    2006ರಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾ ಗಾಂಧಿ ಅಭಿನಯದ ಮುಂಗಾರುಮಳೆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, 2016ರಲ್ಲಿ ತೆರೆಕಂಡ ಮುಂಗಾರು ಮಳೆ ೨ ಸಿನಿಮಾ ಸಿನಿರಸಿಕರ ಮನಗೆಲ್ಲುವಲ್ಲಿ ವಿಫಲವಾಯಿತು. ಈ ಸಿನಿಮಾದ ಹಾಡುಗಳು ಹಿಟ್ ಆದವು. ಆದರೆ, ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಲಿಲ್ಲ. ಶಶಾಂಕ್ ನಿರ್ದೇಶನದ ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನೇಹಾ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿದ್ದರು.  

    ದಿ ವಿಲನ್

    ದಿ ವಿಲನ್

    4

    ವಿಲನ್ ಚಿತ್ರವು ಜೋಗಿ ಪ್ರೇಮ್ ನಿರ್ದೇಶನದ ಬಹತಾರಾಗಣದ ಸಾಹಸ ಪ್ರಧಾನ ಚಿತ್ರ. ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ಅಭಿನಯಿಸಿದ್ದಾರೆ. ಪ್ರೇಮ್ ಅವರ ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ದಿ ವಿಲನ್ ಸಿನಿಮಾದಲ್ಲಿ ತಾರಾ ಬಳಗದ ಜೊತೆಗೆ ಹಾಡುಗಳು ಬಹಳ ಆಕರ್ಷಣೆಯಾಗಿದ್ದವು. ಆದರೆ, ಈ ಸಿನಿಮಾ ಕೂಡ ಹಿಟ್ ಆಗಲಿಲ್ಲ. 

    ಅಮರ್

    ಅಮರ್

    5

    ನಾಗಶೇಖರ್ ನಿರ್ದೇಶನದ ಅಮರ್ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದರು. ಈ ಸಿನಿಮಾದ  ಕೆಲ ಸುಮಧುರ ಹಾಡುಗಳು ಹಿಟ್ ಆಗಿದ್ದವು. ಈ ಸಿನಿಮಾದ ಹಾಡುಗಳನ್ನು ಸಂಜಿತ್ ಹೆಗ್ಡೆ ಹಾಡಿದ್ದು, ಜನರ ಮನಸ್ಸಿಗೆ ಹತ್ತಿರವಾಗಿದ್ದವು. ಸಿನಿಮಾದ ಟ್ರೈಲರ್ ಕೂಡ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಕಥೆಯ ವೇಗ ಮತ್ತು ತಿರುವುಗಳು ಪ್ರೇಕ್ಷಕರನ್ನು ಅಷ್ಟು ಸೆಳೆಯಲಿಲ್ಲ. 

     

    ರಾಜ್ ದಿ ಶೋ ಮ್ಯಾನ್

    ರಾಜ್ ದಿ ಶೋ ಮ್ಯಾನ್

    6

    ಪ್ರೇಮ್ ಅವರ ನಿರ್ದೇಶನದ ರಾಜ್ ದಿ ಶೋ ಮ್ಯಾನ್ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಾಯಕನಾಗಿ ನಟಿಸಿದ್ದರು. ಈ ಸಿನಿಮಾದ ಕೆಲ ಹಾಡುಗಳು ಕೂಡ ಹಿಟ್ ಆಗಿದ್ದವು. ಆದರೆ, ಈ ಚಿತ್ರ ಥಿಯೇಟರ್‌ಗಳಲ್ಲಿ ಸದ್ದು ಮಾಡಲಿಲ್ಲ. 

     

    ಮಳೆಯಲಿ ಜೊತೆಯಲಿ

    ಮಳೆಯಲಿ ಜೊತೆಯಲಿ

    7

    ಪ್ರೀತಂ ಗುಬ್ಬಿ ನಿರ್ದೇಶನದ ಮಳೆಯಲಿ ಜೊತೆಯಲಿ ಸಿನಿಮಾದ ಹಾಡುಗಳು ಕೂಡ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದವು. ಚಿತ್ರದಲ್ಲಿ ಗಣೇಶ್ ನಾಯಕನಾಗಿ ಹಾಗೂ ಯುವಿಕಾ ಚೌದರಿ, ಅಂಜನಾ ಸುಖಾನಿ ನಾಯಕಿರಾಗಿ ನಟಿಸಿದ್ದಾರೆ. ಇಂದೊಂದು ಗುಡ್ಡಗಾಡು ಪ್ರದೇಶಗಳ ನಡುವೆ ನಡೆಯುವ ಪ್ರೇಮಕಥೆಯಾಗಿದೆ. ಈ ಸಿನಿಮಾದ ಮಧುರವಾದ ಹಾಡುಗಳು ಇನ್ನೂ ಜನಪ್ರಿಯವಾಗಿವೆ. ಆದರೆ, ಈ ಸಿನಿಮಾ ಓಡಲಿಲ್ಲ. 

     

    ದೊಡ್ಮನೆ ಹುಡುಗ

    ದೊಡ್ಮನೆ ಹುಡುಗ

    8

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ರಾಧಿಕಾ ಪಂಡಿತ್ ನಟನೆಯ ದೊಡ್ಮನೆ ಹುಡುಗ ಚಿತ್ರದ ಹಾಡುಗಳು ಮ್ಯಾಜಿಕ್ ಮಾಡಿದ್ದವು. ಈ ಸಿನಿಮಾದಲ್ಲಿ ಅಂಬರೀಷ್ ಹಾಗೂಸುಮಲತಾ ಅಭಿನಯಿಸಿದ್ದರು. ಆದರೆ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾಧಿಸಲಿಲ್ಲ.   

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X