ಸ್ನೇಹದ ಮಹತ್ವ ಸಾರುವ ಕನ್ನಡದ ಅತ್ಯುತ್ತಮ ಚಿತ್ರಗಳು - ಟಾಪ್ 10
Updated: Monday, February 17, 2020, 09:48 AM [IST]
ಕನ್ನಡದಲ್ಲಿ ಸ್ನೇಹದ ಮೇಲೆ ಸಾಕಷ್ಟು ಚಲನಚಿತ್ರಗಳು ತೆರೆಗೆ ಬಂದಿವೆ. ಡಾ. ರಾಜಕುಮಾರ್ ರವರ ಸ್ನೇಹಿತನಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವ ಕಾಮನಬಿಲ್ಲು ಚಿತ್ರದಿಂದ ಹಿಡಿದು ವಿಷ್ಣುವರ್ಧನ್ ರವರ ಸ್ನೇಹಿತನಿಗಾಗಿ ಪ್ರಾಣ ನೀಡುವ ದಿಗ್ಗಜರು ಚಿತ್ರಗಳ ವರೆಗೆ ಹಲವಾರು ಚಿತ್ರಗಳು ಸ್ನೇಹದ ಮೇಲೆ ವಿಭಿನ್ನ ಬೆಳಕು ಚೆಲ್ಲಿವೆ. ಸ್ನೇಹಿತರ ಪ್ರೀತಿಗೆ ತಮ್ಮ ಪ್ರಾಣ ಒತ್ತೆ ಇಟ್ಟು ಸಾಥ್ ನೀಡುವ ಹುಡುಗರು, ಸ್ನೇಹದ ಹೆಸರಿನಿಲ್ಲಿ ಬೆನ್ನಿಗೆ ಇರಿಯುವ ಸ್ನೇಹಿತರ ಬಗ್ಗೆ ಹೇಳುವ ರಾಜಾಹುಲಿ ಹೀಗೆ ಹತ್ತು ಹಲವು ಚಿತ್ರಗಳು ಈ ಲಿಸ್ಟಿನಲ್ಲಿವೆ..
ಚಿ ದತ್ತರಾಜ್ ನಿರ್ದೇಶನದಲ್ಲಿ 1983 ರಲ್ಲಿ ತೆರಕಂಡ ಈ ಚಿತ್ರದಲ್ಲಿ ರಾಜಕುಮಾರ್ ಮತ್ತು ಅನಂತನಾಗ್ ಪ್ರಾಣ ಸ್ನೇಹಿತರಾಗಿ ನಟಿಸಿದರು. ತನ್ನ ಸ್ನೇಹಿತನಿಗಾಗಿ ತಾನು ಪ್ರೀತಿಸಿದ ಹುಡುಗಿಯನ್ನು ತ್ಯಾಗ ಮಾಡಿ ಅಂಗವಿಕಲೆಯನ್ನು ಮದುವೆಯಾಗುವ ನಾಯಕನಾಗಿ ರಾಜ್ ಮಿಂಚಿದ್ದರು.
Top 10 Kannada Movies Based On Friendship-Kaamana Billu/top-listing/top-10-kannada-movies-based-on-friendship-kaamana-billu-3-1652-144.html
ನಿಜಜೀವನದ ಪ್ರಾಣ ಸ್ನೇಹಿತರಾದ ವಿಷ್ಣು-ಅಂಬಿ ತೆರೆ ಮೇಲೆ ಕೂಡ ಸ್ನೇಹಿತರಾಗಿ ಮಿಂಚಿದ್ದರು. ಅಂತಸ್ತಿನ ಅಂತರವಿದ್ದರೂ ಬಾಲ್ಯದಿಂದಲೂ ಸ್ನೇಹಿತರಾಗಿ ಬೆಳೆದ ಇಬ್ಬರು ಸ್ನೇಹಿತರ ಸರ್ವ ಶ್ರೇಷ್ಠ ಸ್ನೇಹದ ಉದಾಹರಣೆಯಾಗಿ ಈ ಚಿತ್ರ ನಿಲ್ಲುತ್ತದೆ.
Top 10 Kannada Movies Based On Friendship-Diggajaru/top-listing/top-10-kannada-movies-based-on-friendship-diggajaru-3-1653-144.html