twitter
    X
    Home ಚಲನಚಿತ್ರಗಳ ಒಳನೋಟ

    ಮೊಗ್ಗಿನ ಮನಸು ಟು ದೊಡ್ಮನೆ ಹುಡುಗ: ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ನಟನೆಯ ಸೂಪರ್ ಹಿಟ್ ಸಿನಿಮಾಗಳಿವು!

    Author Administrator | Updated: Wednesday, March 6, 2024, 06:00 PM [IST]

    ನಂದಗೋಕುಲದಿಂದ ನಟನೆ ಆರಂಭಿಸಿದ ರಾಧಿಕಾ ಪಂಡಿತ್ ಮೊಗ್ಗಿನ ಮನಸ್ಸು ಚಿತ್ರದಿಂದ ಚಂದನವನದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರ ತಮ್ಮ ಪ್ರಬುದ್ಧ ನಟನೆಯ ಮೂಲಕ ಕರ್ನಾಟಕ ರಾಜ್ಯ ಪ್ರಶಸ್ತಿ, ಸೈಮಾ, ಐಫಾ, ಫಿಲ್ಮ್ ಫೇರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಇಪ್ಪತ್ತೊಂದು ಚಿತ್ರಗಳಲ್ಲಿ ನಟಿಸಿರುವ ರಾಧಿಕಾ, ತಮ್ಮ ಪತಿ ರಾಕಿಂಗ್ ಸ್ಟಾರ್ ಯಶ್ ಗೆ ನಾಲ್ಕು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವುದು ವಿಶೇಷ. ಈ ಕೆಳಗೆ ರಾಧಿಕಾರ ಟಾಪ್ 10 ಚಿತ್ರಗಳನ್ನು ನೀಡಲಾಗಿದೆ.

    cover image
    ಮೊಗ್ಗಿನ ಮನಸು

    ಮೊಗ್ಗಿನ ಮನಸು

    1

    ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ರಾಧಿಕಾ ಸಿನಿಜೀವನ ಆರಂಭಿಸಿದರು. ಈ ಚಿತ್ರದ ನಟನೆಗಾಗಿ ಫಿಲ್ಮ್ ಫೇರ್ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು. ಚಂಚಲಾ ಎಂಬ ಕಾಲೇಜು ಯುವತಿಯ ಪಾತ್ರದಲ್ಲಿ ನಟಿಸಿದ್ದರು, ಈ ಚಿತ್ರದಲ್ಲಿ ಯಶ್ ಕೂಡ ನಾಯಕನಾಗಿ ಸಿನಿಜೀವನ ಆರಂಭಿಸಿದ್ದು ವಿಶೇಷ.

    ಒಲೆವೇ ಜೀವನ ಲೆಕ್ಕಾಚಾರ

    ಒಲೆವೇ ಜೀವನ ಲೆಕ್ಕಾಚಾರ

    2

    ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರದಲ್ಲಿ ರಾಧಿಕಾ ಪಂಡಿತ್ , ಶ್ರೀನಗರ ಕಿಟ್ಟಿಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರದ ನಟನೆಗಾಗಿ ಇನ್ನೋವೇಟಿವ್  ಫಿಲ್ಮ್ ಪ್ರಶಸ್ತಿ ಪಡೆದರು. ಚಿತ್ರದಲ್ಲಿನ ರಾಧಿಕಾ ಕ್ಲಾಸಿಕ್ ಪಾತ್ರ ಗಮನ ಸೆಳೆಯಿತು.

    ಲವ್ ಗುರು

    ಲವ್ ಗುರು

    3

    ಪ್ರಶಾಂತ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ ಜೊತೆ ತರುಣ್ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಉತ್ತಮ ಡೈಲಾಗ್ ಡೆಲಿವೆರಿ ಮತ್ತು ಅದ್ಭುತ ನಟನೆ ಮೂಲಕ ಪ್ರಿಯಾ ಪಾತ್ರಧಾರಿಯಾಗಿ ರಾಧಿಕಾ ಗಮನ ಸೆಳೆದರು.ಈ ಚಿತ್ರದ ನಟನೆಗಾಗಿ ಮತ್ತೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.

    ಕೃಷ್ಣನ್ ಲವ್ ಸ್ಟೋರಿ

    ಕೃಷ್ಣನ್ ಲವ್ ಸ್ಟೋರಿ

    4

    ಶಶಾಂಕ್ ನಿರ್ದೇಶನದ ಕೃಷ್ಣನ್ ಲವ್ ಸ್ಟೋರಿ ಚಿತ್ರದಲ್ಲಿ ಅಜೇಯ್ ರಾವ್ ಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರದಲ್ಲಿ ಉದಯ ಫಿಲ್ಮ್ ,ಸುವರ್ಣ, ಫಿಲ್ಮ್ ಫೇರ್ ಮುಂತಾದ ಪ್ರಶಸ್ತಿಗಳನ್ನು ಪಡೆದರು. ಈ ಚಿತ್ರದಲ್ಲಿ ಬಡತನ, ಬದುಕು ಮತ್ತು ಪ್ರೀತಿಗಳ  ಸುಳಿಯಲ್ಲಿ ಸಿಲುಕಿ ಕೊನೆಗೆ ದುರಂತ ಅಂತ್ಯಕಾಣುವ ಪಾತ್ರದಲ್ಲಿ ನಟಿಸಿದರು.

    ಹುಡುಗರು

    ಹುಡುಗರು

    5

    ಕೆ ಮಾದೇಶ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಂಡರು. ಚಿತ್ರದ ಮೊದಲಾರ್ಧದಲ್ಲಿ ಬಜಾರಿ ಹುಡುಗಿ ಪಾತ್ರದಲ್ಲಿ ನಟಿಸಿದರೆ, ದ್ವೀತಿಯಾರ್ಧದಲ್ಲಿ ತಂದೆಯ ಮಾತಿಗೆ ಸಿಲುಕಿ ಪ್ರೀತಿ ತೊರೆದು ನೋವು ಅನುಭವಿಸುವ ಸೂಕ್ಷ್ಮ ಪಾತ್ರದಲ್ಲಿ ನಟಿಸಿದರು.

    ಅದ್ದೂರಿ

    ಅದ್ದೂರಿ

    6

    ಅಂಬಾರಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರಾಧಿಕಾ, ಧ್ರುವ ಸರ್ಜಾಗೆ ನಾಯಕಿಯಾಗಿ ನಟಿಸಿದರು. ಮುದ್ದಾದ ನಗರ ಪ್ರೇಮ ಕಥಾನಕವನ್ನು ಹೊಂದಿದ್ದ ಈ ಚಿತ್ರದಲ್ಲಿ ರಾಧಿಕಾ ನಟಿಸಿದ ಪೂರ್ಣಾ ಪಾತ್ರ ಗಮನ ಸೆಳೆಯಿತು.

    ಡ್ರಾಮಾ

    ಡ್ರಾಮಾ

    7

    ಯೋಗರಾಜ್ ಭಟ್ ರ ಡ್ರಾಮಾ ಚಿತ್ರದಲ್ಲಿ ಯಶ್ ಜೊತೆ ಎರಡನೇ ಬಾರಿ ನಾಯಕಿಯಾಗಿ ನಟಿಸಿದರು. ಯಶ್ ಮತ್ತು ರಾಧಿಕಾ ಕೆಮಿಸ್ಟ್ರಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ನಂದಿನಿ ಪಾತ್ರದಲ್ಲಿ ಅಭಿನಯಿಸಿದರು.

    ಕಡ್ಡಿ ಪುಡಿ

    ಕಡ್ಡಿ ಪುಡಿ

    8

    ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಅಭಿನಯಿಸಿದರು. ಚಿತ್ರದಲ್ಲಿ ಉಮಾ ಎಂಬ ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ನಟಿಸಿದರು. ಬಡತನದಲ್ಲಿ ಬೆಳೆಯುವ ಯುವತಿ ಪ್ರಸ್ತುತ ಒಳ್ಳೆಯ  ದಾರಿಯಲ್ಲಿ ಸಾಗುತ್ತಿರುವ, ಆದರೆ ರೌಡಿಸಂ ಹಿನ್ನಲೆಯಿರುವ ವ್ಯಕ್ತಿಯನ್ನು ವಿವಾಹವಾದಾಗ ಎದುರಾಗುವ ಸವಾಲುಗಳನ್ನು ಚಿತ್ರ ತೋರಿಸಿತು.

    ಬಹದ್ದೂರ್

    ಬಹದ್ದೂರ್

    9

    ಚೇತನ್ ಕುಮಾರ್ ನಿರ್ದೇಶನದ ಬಹದ್ದೂರ್ ಚಿತ್ರದಲ್ಲಿ ರಾಧಿಕಾ ಪಂಡಿತ್ ಮತ್ತು ಧ್ರುವ ಸರ್ಜಾ ಎರಡನೇ ಬಾರಿ ಜೊತೆಯಾಗಿ ನಟಿಸಿದರು. ಈ ರೋಮ್ಯಾಂಟಿಕ್ ಕಾಮಿಡಿ ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.

    ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ

    ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ

    10

    ಸಂತೋಷ್ ಆನಂದರಾಮ್ ನಿರ್ದೇಶನದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ ಚಿತ್ರದಲ್ಲಿ ಮೂರನೇ ಬಾರಿ ಯಶ್ ಗೆ ನಾಯಕಿಯಾಗಿ ನಟಿಸಿದರು.ಈ ಚಿತ್ರದ ನಟನೆಗಾಗಿ ಸೈಮಾ ಮತ್ತು ಐಫಾ ಪ್ರಶಸ್ತಿ ಪಡೆದರು.

    ದೊಡ್ಮನೆ ಹುಡುಗ

    ದೊಡ್ಮನೆ ಹುಡುಗ

    11

    ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಎರಡನೇ ಬಾರಿ ಪುನೀತ್ ಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರದಲ್ಲಿ ಪುನೀತ್ ಮತ್ತು ರಾಧಿಕಾರ  `ತ್ರಾಸ್ ಆಕ್ಕೈತಿ' ಗೀತೆ ತುಂಬಾ ಗಮನ ಸೆಳೆದಿತ್ತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X