twitter
    X
    Home ಚಲನಚಿತ್ರಗಳ ಒಳನೋಟ

    ಹ್ಯಾಪಿ ಬರ್ತಡೇ: ಸಂಚಾರಿ ವಿಜಯ್ ಸಿನಿ ಜೀವನದ ಅತ್ಯುತ್ತಮ ಪಾತ್ರಗಳಿವು!

    Author Administrator | Updated: Monday, July 17, 2023, 12:10 PM [IST]

    ಸಂಚಾರಿ ತಂಡದ ಮೂಲಕ ಹಲವು ನಾಟಕಗಳಲ್ಲಿ ಅಭಿನಯಿಸಿ, ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ, ತಮ್ಮ ಅದ್ಭುತ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭೆ ವಿಜಯ್. ಇವರ ನಟಿಸಿದ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನ. ಚಿತ್ರರಂಗದಲ್ಲಿ ಮಾತ್ರವಲ್ಲದೆ, ಹಲವು ಸಾಮಾಜಿಕ ಕಾರ್ಯಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು. ದುರದೃಷ್ಟವಶಾತ್, ಜೂನ್ 2021ರ 14ರಂದು ಬೈಕ್ ಅಪಘಾತದಿಂದ ಕೊನೆಯುಸಿರೆಳೆದರು. ಇಲ್ಲಿ ವಿಜಯ್ ಸಿನಿ ಜೀವನದ ಅತ್ಯುತ್ತಮ ಪಾತ್ರಗಳ ಪಟ್ಟಿಯನ್ನು ನೀಡಲಾಗಿದೆ.

    cover image
    ಹರಿವು

    ಹರಿವು

    1

    ಮಂಸೋರೆ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ರೈತನ ಪಾತ್ರದಲ್ಲಿ ನಟಿಸಿದ್ದರು. ತನ್ನ ಮಗುವಿನ ಉಳಿವಿಗಾಗಿ ರೈತನೊಬ್ಬ ತನ್ನ ಮಗನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುತ್ತಾನೆ. ಬೆಂಗಳೂರು ಆಸ್ಪತ್ರೆಯಲ್ಲಿ ನಿಧನವಾದ ಮಗನನ್ನು ಮತ್ತೆ ಊರಿಗೆ ಕರೆದೊಯ್ಯಲು ಕಷ್ಟ ಪಡುವ ತಂದೆಯ ಪಾತ್ರದಲ್ಲಿ ವಿಜಯ್ ಅದ್ಭುತ ಅಭಿನಯ ನೀಡಿದ್ದರು.    

    ಒಗ್ಗರಣೆ

    ಒಗ್ಗರಣೆ

    2

    ಪ್ರಕಾಶ್ ರಾಜ್ ನಿರ್ದೇಶನದ ಒಗ್ಗರಣೆ ಚಿತ್ರದಲ್ಲಿ ಸಂಚಾರಿ ವಿಜಯ್ 'ರಾಮ್' ಎಂಬ ಪಾತ್ರದಲ್ಲಿ ನಟಿಸಿದ್ದರು. ಮಧ್ಯಮ ವಯಸ್ಕರಲ್ಲಿ ಮೂಡುವ ಪ್ರೀತಿಯನ್ನು ಅದ್ಭುತವಾಗಿ ಬಿಂಬಿಸಿದ ಚಿತ್ರ ಇದಾಗಿತ್ತು. ಈ ಚಿತ್ರದಲ್ಲಿ ತಮಿಳು ನಟಿ ಸ್ನೇಹಾ, ತೇಜು, ಸಂಯುಕ್ತ ಹೊರನಾಡು, ಅಚ್ಯುತ್ ಕುಮಾರ್, ಮಂಡ್ಯ ರಮೇಶ್ ಮುಂತಾದವರು ಅಭಿನಯಿಸಿದ್ದರು.   

    ನಾನು ಅವನಲ್ಲ ಅವಳು

    ನಾನು ಅವನಲ್ಲ ಅವಳು

    3

    ಈ ಚಿತ್ರದಲ್ಲಿ ಸಂಚಾರಿ ವಿಜಯ್ ತೃತೀಯ ಲಿಂಗಿ ಪಾತ್ರದಲ್ಲಿ ನಟಿಸಿದ್ದರು. ಮಾದೇಶ್ ಬೆಳೆಯುತ್ತಾ ತನ್ನಲ್ಲಿನ ಸ್ತ್ರೀ ತನವನ್ನು ಅರಿಯುತ್ತಾನೆ. ಪದೇ ಪದೇ ಸಮಾಜದ ಮೂದಲಿಕೆಗೆ ಒಳಗಾಗುವ ಮಾದೇಶ್, ಮುಂದೆ ತಾನು ಹೆಣ್ಣಾಗಿಯೇ ಬದುಕಲು ನಿರ್ಧರಿಸುತ್ತಾನೆ. ಈ ಚಿತ್ರದ ನಟನೆಗಾಗಿ ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು.  

    ಕಿಲ್ಲಿಂಗ್ ವೀರಪ್ಪನ್

    ಕಿಲ್ಲಿಂಗ್ ವೀರಪ್ಪನ್

    4

    ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಸಂಚಾರಿ ವಿಜಯ್, STF ಆಫೀಸರ್ ಗೋಪಾಲ್ ಪಾತ್ರದಲ್ಲಿ ನಟಿಸಿದ್ದರು. ರಾಮ್ ಗೋಪಾಲ್ ನಿರ್ದೇಶನದ ಈ ಚಿತ್ರ ಆಪರೇಷನ್ ಕೋಕೂನ್ ಮೇಲೆ ಆಧಾರಿತವಾಗಿದೆ.  

    ರಿಕ್ತ

    ರಿಕ್ತ

    5

    ಅಮೃತ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಹಲವು ಪಾತ್ರಗಳಲ್ಲಿ ನಟಿಸಿದ್ದರು. ಒಬ್ಬ ಕುಡುಕನಾಗಿ, ಒಬ್ಬ ಪ್ರೇಮಿಯಾಗಿ, ಒಬ್ಬ ಕಾಮಿಡಿಯನ್ ಅಗಿ ಹಲವು ಪಾತ್ರಗಳನ್ನು ನಿಭಾಯಿಸಿದ್ದರು.   

    ಅಲ್ಲಮ

    ಅಲ್ಲಮ

    6

    ಟಿ. ಎಸ್. ನಾಗಾಭರಣ ನಿರ್ದೇಶನದ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಭಕ್ತಿ ಬಂಡಾರಿ ಬಸವಣ್ಣನ ಪಾತ್ರದಲ್ಲಿ ನಟಿಸಿದ್ದರು. ಇವರ ಜೊತೆಗೆ ಡಾಲಿ ಧನಂಜಯ್ ಅಲ್ಲಮ ಪ್ರಭುವಾಗಿ ಅಭಿನಯಿಸಿದ್ದರು. ಮದ್ದಳೆ ಬಾರಿಸುವ ಬಾಲಕನಿಂದ ಹಿಡಿದು ಬಸವ ಕಲ್ಯಾಣದ ಅನುಭವ ಮಂಟಪದ ಶೂನ್ಯ ಸಿಂಹಾಸನ ಏರುವವರೆಗೂ 'ಅಲ್ಲಮ'ನ ಜೀವನವನ್ನ ಈ ಚಿತ್ರದಲ್ಲಿ ಕಲಾತ್ಮಕವಾಗಿ ಕಟ್ಟಿಕೊಡಲಾಗಿತ್ತು.    

    ಕೃಷ್ಣ ತುಳಸಿ

    ಕೃಷ್ಣ ತುಳಸಿ

    7

    ಸುಖೇಶ್ ನಾಯಕ್ ನಿರ್ದೇಶನದ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಅಂಧನ ಪಾತ್ರದಲ್ಲಿ ನಟಿಸಿದ್ದರು. ಮೇಘಶ್ರೀ ನಾಯಕಿಯ ಪಾತ್ರದಲ್ಲಿ ನಟಿಸಿದ್ದರು. ಇಬ್ಬರು ಅಂಧರು ಪ್ರೀತಿಯಲ್ಲಿ ಬಿದ್ದಾಗ ನಡೆಯುವ ಘಟನೆಗಳನ್ನು ಚಿತ್ರ ಚೆನ್ನಾಗಿ ಬಿಂಬಿಸಿತು.

    6ನೇ ಮೈಲಿ

    6ನೇ ಮೈಲಿ

    8

    ಸೀನಿ ನಿರ್ದೇಶನದ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಅರ್ಜುನ್ ಪಾತ್ರದಲ್ಲಿ ನಟಿಸಿದ್ದರು. ಈ ಥ್ರಿಲ್ಲರ್ ಚಿತ್ರದಲ್ಲಿ ಅರ್.ಜೆ. ನೇತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ 'ಉಜಿರೆ'ಯಿಂದ 'ಉಪ್ಪಿನಂಗಡಿ'ಗೆ ಹೋಗುವ ದಾರಿ ಮಧ್ಯೆ ಸಿಗುವ '6ನೇ ಮೈಲಿ'ಯ ದಟ್ಟಾರಣ್ಯದಲ್ಲಿ ರಾತ್ರಿ ಹೊತ್ತು ಬೆಂಗಳೂರಿನಿಂದ ಬರುವ ಚಾರಣಿಗರು ನಿಗೂಢವಾಗಿ ಕಾಣೆಯಾಗುತ್ತಿರುತ್ತಾರೆ. ಇದೇ ಪ್ರದೇಶ ಸರಣಿ ಕೊಲೆಗಳಿಗೂ ಸಾಕ್ಷಿ ಆಗಿರುತ್ತೆ. ಉಪ್ಪಿನಂಗಡಿ ಬಳಿಯಿರುವ ಧವಳಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗುವುದು ಆರ್.ಜೆ ರಾಘವ್ (ಸುಧೇಶ್ ಭಟ್) ಪ್ಲಾನ್. ಜೊತೆಯಲ್ಲಿ ಇಬ್ಬರು ಹುಡುಗಿಯರು ಬೇರೆ. ಉಪ್ಪಿನಂಗಡಿಗೆ ಹೋಗುವಾಗ '6ನೇ ಮೈಲಿ'ಯಲ್ಲಿ ಇವರೆಲ್ಲ ಹತ್ಯೆ ಆಗುತ್ತಾರೆ. ಇದಕ್ಕೆ ಕಾರಣ ಏನು ಎಂಬುದೇ ಚಿತ್ರದ ಸಸ್ಪೆನ್ಸ್.  

    ನಾತಿಚರಾಮಿ

    ನಾತಿಚರಾಮಿ

    9

    ಮಂಸೋರೆ ನಿರ್ದೇಶನದ ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಮತ್ತು ನಾಯಕಿ ಶೃತಿ ಹರಿಹರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಶೀರ್ಷಿಕೆ ನಾತಿಚರಾಮಿಯ ಅರ್ಥ `ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ' ಎಂಬುದು. ದಾಂಪತ್ಯಕ್ಕೆ ಕಾಲಿಡುವ ಸಮಯದಲ್ಲಿ ಜೋಡಿಗಳು ಧರ್ಮ,ಅರ್ಥ,ಕಾಮದಲ್ಲೂ ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ ಎಂಬ ಕಂಕಣ ತೊಡುತ್ತಾರೆ. ಆದರೆ, ಆ ಪ್ರತಿಜ್ಞೆಗೆ ಎಷ್ಟು ಜನ ಬದ್ಧರಾಗಿರುತ್ತಾರೆ ಮತ್ತು ವಾಸ್ತವ ಜೀವನದಲ್ಲಿ ಅದರ ವ್ಯಾಪ್ತಿ ಎಷ್ಟು ಎಂಬುದನ್ನು ಮನಸೋರೆ ಸೂಕ್ಷವಾಗಿ ಚಿತ್ರಿಸಿದ್ದಾರೆ.  

    ಆ್ಯಕ್ಟ್ 1978

    ಆ್ಯಕ್ಟ್ 1978

    10

    ಮಂಸೋರೆ ನಿರ್ದೇಶನದ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಎನ್.ಎಸ್. ಜಿ ಕಮಾಂಡೋ ಭೀಮೇಶ್ವರ ಪಾಂಡೆ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಮರದಿಂದ ಬಿದ್ದು ಸತ್ತ ರೈತ ತಂದೆಗೆ ಬರಬೇಕಾದ ಪರಿಹಾರದ ಹಣ ಸಿಕ್ಕರೆ ತನ್ನ ಗಂಡನ ಚಿಕಿತ್ಸೆಗೆ ಸಹಾಯವಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಸರ್ಕಾರಿ ಕಚೇರಿ ಅಲೆದು ಹೈರಾಣಾದ ಗರ್ಭಿಣಿ, ಕೊನೆಗೆ ತನ್ನ ಗುರಿ ಈಡೇರಿಸಿಕೊಳ್ಳಲು ತೆಗೆದುಕೊಳ್ಳುವ ನಿರ್ಧಾರ ಪ್ರಶ್ನೆಗಳನ್ನು ಮೂಡಿಸದೆ ಇರದು. ಆದರೆ, ಅದು ಹಿಂಸಾತ್ಮಕ ಮಾರ್ಗ ಎಂಬ ಭಾವನೆ ಮೂಡದಂತೆ ಮತ್ತೊಂದು ಆಲೋಚನಾ ದಿಕ್ಕಿನೆಡೆಗೆ ಪ್ರೇಕ್ಷಕನ ಮನಸ್ಸನ್ನು ಹೊರಳಿಸುವಷ್ಟು ಸಶಕ್ತವಾಗಿದೆ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X