ನಾದಬ್ರಹ್ಮ ಹಂಸಲೇಖರ ಟಾಪ್ 20 ಮ್ಯೂಸಿಕಲ್ ಹಿಟ್ಸ್
  Published: Wednesday, March 4, 2020, 09:47 AM [IST]
  ಮಂಡ್ಯದಲ್ಲಿ ಜನಿಸಿದ ಗೋವಿಂದರಾಜು ಗಂಗರಾಜು ಇಂದು ಕನ್ನಡ ಚಿತ್ರರಂಗದಲ್ಲಿ ನಾದ ಬ್ರಹ್ಮ ಎಂದೇ ಗುರುತಿಸಿಕೊಂಡಿದ್ದಾರೆ. ಗುರುಗಳಾದ ಲಾವಣಿ ನೀಲಕಂಠಪ್ಪ ಇವರಿಗೆ ಹಂಸ ಗುರುತಿನ ಲೇಖನಿ (ಪೆನ್)ಯನ್ನು ಬಳುವಳಿಯಾಗಿ ನೀಡಿದಾಗ, ತಮ್ಮ ಕವಿತೆಗಳನ್ನು ಅದೇ ಪೆನ್ನಿನಿಂದ ಸದಾ ಬರೆಯುತ್ತಿದ್ದರಿಂದ ತಮ್ಮ ಹೆಸರನ್ನು `ಹಂಸಲೇಖನಿ' ಎಂದು ಬದಲಾಯಿಸಿಕೊಂಡರು. ಮುಂದೆ ಅದೇ ಗುರುಗಳು `ಹಂಸಲೇಖ' ಎಂದು ಬದಲಾವಣೆ ಮಾಡಿದರು. ಗೀತೆ ಮತ್ತು ಸಂಭಾಷಣೆ ಬರಹಗಾರರಾಗಿ ಸಿನಿ ಜರ್ನಿ ಆರಂಭಿಸಿದ ಇವರು ನಂತರ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕರಾದರು. 90 ರ ದಶಕದಲ್ಲಿ ಹಂಸಲೇಖ ಮತ್ತು ರವಿಚಂದ್ರನ್ ಕಾಂಬೋ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿತು. ಇಲ್ಲಿ ಹಂಸಲೇಖ ಸಿನಿಜೀವನದ ಟಾಪ್ ಸಿನಿ ಅಲ್ಬಮ್ ಗಳನ್ನು ನೀಡಲಾಗಿದೆ.

  ವಿ ರವಿಚಂದ್ರನ್ ನಿರ್ದೇಶಿಸಿ ನಿರ್ಮಿಸಿದ ಪ್ರೇಮಲೋಕ ಚಿತ್ರ ಹಂಸಲೇಖರಿಗೆ ಮೊತ್ತ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿ ಮನ್ನಣೆ ನೀಡಿರು. ಚಿತ್ರದಲ್ಲಿ ಒಟ್ಟು ಹನ್ನೊಂದು ಗೀತೆಗಳಿದ್ದವು. ನೂರು ಸಾವಿರ ರೂಪಾಯಿಗಳಿಗೆ ಚಿತ್ರದ ಅಡಿಯೋ ಹಕ್ಕುಗಳು ಸೇಲ್ ಆಗುತ್ತಿದ್ದ ಕಾಲದಲ್ಲಿ ಪ್ರೇಮಲೋಕದ ಅಡಿಯೋ ಹಕ್ಕುಗಳು 1.5 ಲಕ್ಷ ರೂಪಾಯಿಗೆ ಖರೀದಿಯಾಗಿ ದಾಖಲೆ ನಿರ್ಮಿಸಿದವು.

  ರವಿಚಂದ್ರನ್ ಮತ್ತು ಹಂಸಲೇಖ ಕಾಂಬಿನೇಶನ್ ಲ್ಲಿ ಮೂಡಿಬಂದ ಮತ್ತೊಂದು ಸೂಪರ್ ಹಿಟ್ ಚಿತ್ರ ರಣಧೀರ. ಚಿತ್ರದಲ್ಲಿ ಒಂದು ವಾದ್ಯ ಗೀತೆ ಸೇರಿ ಚಿತ್ರದಲ್ಲಿ ಹತ್ತು ಹಾಡುಗಳಿದ್ದವು.

  ಶಂಕರನಾಗ್, ಭವ್ಯ ಮತ್ತು ಅಂಬರೀಶ್ ಪಾತ್ರದಲ್ಲಿ ನಟಿಸಿದ್ದ ಸಾಂಗ್ಲಿಯಾನ ಚಿತ್ರದಲ್ಲಿ ನಾಲ್ಕು ಗೀತೆಗಳಿದ್ದವು. ವಿ ಮನೋಹರ್, ದೊಡ್ಡರಂಗೇಗೌಡ ಮತ್ತು ತಾವು ಬರೆದ ಎರಡು ಹಾಡುಗಳಿಗೆ ಹಂಸಲೇಖ ಸಂಗೀತ ನೀಡಿದರು. ಚಿತ್ರದ `ಕಾಂಚನಾ', `ದೂರದ ಊರಿಂದ' ಗೀತೆಗಳು ತುಂಬಾ ಪ್ರಸಿದ್ಧಿಯಾದವು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X