twitter
    X
    Home ಚಲನಚಿತ್ರಗಳ ಒಳನೋಟ

    Happy Birthday: ನಟಿ ಉಮಾಶ್ರೀಯವರ ಟಾಪ್ 5 ಪಾತ್ರಗಳು

    Author Administrator | Updated: Wednesday, May 10, 2023, 11:56 AM [IST]

    ಉಮಾಶ್ರೀ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿ ತಮ್ಮ ಅದ್ಬುತ ನಟನೆಯ ಮೂಲಕ ವಿಶೇಷ ಸ್ಥಾನ ಪಡೆದಿದ್ದಾರೆ. ಹಾಸ್ಯ ನಟನೆಯಿಂದ ಹಿಡಿದು ಆಳವಾಗಿ ಪ್ರಭಾವ ಬೀರುವ ಪಾತ್ರಗಳಲ್ಲಿ ಲೀಲಾ ಜಾಲವಾಗಿ ಅಭಿನಯಿಸಿದ್ದಾರೆ. ಇಲ್ಲಿ ಅವರ ಟಾಪ್ 5 ಪಾತ್ರಗಳ ಪರಿಚಯವಿದೆ.

    cover image
    ಪುಟ್ನಂಜ

    ಪುಟ್ನಂಜ

    1

    ರವಿಚಂದ್ರನ್ ನಿರ್ದೇಶಿಸಿ ನಿರ್ಮಿಸಿದ ಪುಟ್ನಂಜ ಚಿತ್ರದಲ್ಲಿ ಉಮಾಶ್ರೀ ಪುಟ್ಟಮಲ್ಲಿ ಪಾತ್ರದಲ್ಲಿ ನಟಿಸಿದರು. ರವಿಚಂದ್ರನ್ ಅಜ್ಜಿ ಪಾತ್ರದಲ್ಲಿ ಅಭೂತಪೂರ್ವವಾಗಿ ನಟಿಸಿದ್ದ ಉಮಾಶ್ರೀಯವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿತು.

    ಕನಸೆಂಬೋ ಕುದರೆಯನೇರಿ

    ಕನಸೆಂಬೋ ಕುದರೆಯನೇರಿ

    2

    ಗಿರೀಶ್ ಕಾಸರವಳ್ಳಿ ನಿರ್ದೇಶನದ `ಕನಸೆಂಬೋ ಕುದರೆಯನೇರಿ' ಚಿತ್ರದಲ್ಲಿ ಉಮಾಶ್ರೀಯವರು ರುದ್ರಿ ಪಾತ್ರದಲ್ಲಿ ನಟಿಸಿದ್ದರು. ತನ್ನ ವಿಚಿತ್ರ ನಂಬಿಕೆಯನ್ನು ಬಲವಾಗಿ ನಂಬುವ ಇರ್ಯಾ (ವೈಜನಾಥ್ ಬಿರಾದಾರ್) ಪಾತ್ರದಲ್ಲಿ ನಟಿಸಿದ್ದರು.

    ರತ್ನನ್ ಪ್ರಪಂಚ

    ರತ್ನನ್ ಪ್ರಪಂಚ

    3

    ರೋಹಿತ್ ಪಡಕಿ ನಿರ್ದೇಶನದಲ್ಲಿ ಮೂಡಿಬಂದಿರುವ ರತ್ನನ್ ಪ್ರಪಂಚ ಚಿತ್ರದಲ್ಲಿ ಉಮಾಶ್ರೀ, ಧನಂಜಯ್ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುವ ಸಾಕು ಮಗನು ಬೆಳೆದ ನಂತರ ತನ್ನ ಹಡೆದ ತಾಯಿಯಾಗಿ ಬೆಳೆಸಿದ ತಾಯಿಯನ್ನು ತಿರಸ್ಕರಿಸಿದಾಗ, ಅವಳು ಅನುಭವಿಸುವ ನೋವನ್ನು ಉಮಾಶ್ರೀ ಮನೋಘ್ನವಾಗಿ ಬಿಂಬಿಸಿದರು.

    ಗುಲಾಬಿ ಟಾಕೀಸ್

    ಗುಲಾಬಿ ಟಾಕೀಸ್

    4

    ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ `ಗುಲಾಬಿ ಟಾಕೀಸ್' ಚಿತ್ರದ ನಟನೆಗಾಗಿ ಉಮಾಶ್ರೀ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಓಸಿಯಾನ್ ಫಿಲ್ಮ್ಸ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಈ ಚಿತ್ರದಲ್ಲಿ `ಗುಲಾಬಿ' ಎಂಬ ಮುಸ್ಲಿಮ್ ಮಹಿಳೆಯ ಪಾತ್ರದಲ್ಲಿ ಉಮಾಶ್ರೀ ಮನೋಘ್ನವಾದ ಅಭಿನಯ ನೀಡಿದ್ದರು. ಚಿತ್ರದ ಕಥೆ ಕುಂದಾಪುರದ ಸುತ್ತವಿರುವ ಬೆಸ್ತರ ಸುತ್ತಮುತ್ತ ಹೆಣೆದಿತ್ತು.

    ಅನುಭವ

    ಅನುಭವ

    5

    ಕಾಶಿನಾಥ್ ನಿರ್ದೇಶಿಸಿ ನಿರ್ಮಿಸಿದ ಅನುಭವ ಚಿತ್ರದ ಮೂಲಕ ಉಮಾಶ್ರೀ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿ ಹಲವು ಬೋಲ್ಡ್ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಹುಬ್ಬೇರಿಸಿದರೂ, ಉಮಾಶ್ರೀಯವರಿಗೆ ಚಿತ್ರರಂಗದಲ್ಲಿ ನೆಲೆಯೂರಲು ಈ ಚಿತ್ರ ಅವಕಾಶ ನೀಡಿತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X