twitter
    X
    Home ಚಲನಚಿತ್ರಗಳ ಒಳನೋಟ

    ಹ್ಯಾಪಿ ಬರ್ತಡೇ: ಗೋಲ್ಡನ್ ಕ್ವೀನ್ ಅಮೂಲ್ಯ ನಟನೆಯ ಸೂಪರ್ ಹಿಟ್ ಸಿನಿಮಾಗಳಿವು!

    Author Sowmya Bairappa | Updated: Wednesday, September 13, 2023, 06:26 PM [IST]

    ಕಾಲೇಜು ದಿನಗಳಲ್ಲಿ ಕ್ರಿಯಾಶೀಲರಾಗಿದ್ದ ಸ್ಯಾಂಡಲ್‌ವುಡ್ ಮುದ್ದು ಮುಖದ ಚೆಲುವೆ ಅಮೂಲ್ಯ ಚಿಕ್ಕ ವಯಸ್ಸಿನಲ್ಲಿಯೇ ನಟನೆಗೆ ಎಂಟ್ರಿ ಕೊಟ್ಟವರು. 2001ರಲ್ಲಿ ಪರ್ವ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಇವರು, ನಂತರ ಲಾಲಿಹಾಡು, ಮಂಡ್ಯ, ಸಜಿನಿ, ಸುಂಟರಗಾಳಿ, ಮಹಾರಾಜ, ನಮ್ಮ ಬಸವ, ಚಂದು ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿ ಪ್ರಸಿದ್ಧಿ ಪಡೆದಿದ್ದ ಅಮೂಲ್ಯ 2007ರಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಮದುವೆ ಬಳಿಕ ನಟನೆಯಿಂದ ದೂರ ಉಳಿದಿರುವ ಅಮೂಲ್ಯ ನಟನೆಯ ಟಾಪ್ 5 ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

    cover image
    ಚೆಲುವಿನ ಚಿತ್ತಾರ

    ಚೆಲುವಿನ ಚಿತ್ತಾರ

    1

    2007ರಲ್ಲಿ ತೆರೆಕಂಡ ಎಸ್ ನಾರಾಯಣ್ ಅವರ ನಿರ್ದೇಶನದ 'ಚೆಲುವಿನ ಚಿತ್ತಾರ' ಸಿನಿಮಾ ಮೂಲಕ ಅಮೂಲ್ಯ ನಾಯಕಿಯಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಇದು ತಮಿಳಿನ 'ಕಾದಲ್' ರೀಮೆಕ್. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಅಭಿನಯಿಸಿದ್ದರು.  ಒಬ್ಬ ಶಾಲಾ ವಿಧ್ಯಾರ್ಥಿನಿ ಮತ್ತು ಮೆಕಾನಿಕ್ ನಡುವಿನ್ ಲವ್ ಸ್ಟೋರಿ ಹೊಂದಿದ್ದ ಈ ಸಿನಿಮಾ ಓರಿಜಿನಲ್ ಸಿನಿಮಾವನ್ನು ಮೀರಿಸಿ ಸೂಪರ್ ಸಕ್ಸಸ್ ಕಂಡಿತ್ತು. ಈ ಸಿನಿಮಾ ನಟಿ ಅಮೂಲ್ಯ ಅವರಿಗೂ ದೊಡ್ಡ ಬ್ರೇಕ್ ಕೊಟ್ಟಿತ್ತು. ಹೊಸ ಟ್ಯೂನ್‌ಗಳನ್ನು ಹಾಕಿ ಸಂಗೀತ ನಿರ್ದೇಶಕ ಮನೋಮೂರ್ತಿ ಸಕ್ಸಸ್ ಕಂಡಿದ್ದರು. 'ಚೆಲುವಿನ ಚಿತ್ತಾರ' ಕನ್ನಡದ ಎವರ್‌ಗ್ರೀನ್ ಸಿನಿಮಾಗಳ ಲಿಸ್ಟ್ ಸೇರಿದೆ.

    ಶ್ರಾವಣಿ ಸುಬ್ರಮಣ್ಯ

    ಶ್ರಾವಣಿ ಸುಬ್ರಮಣ್ಯ

    2

    ಶ್ರಾವಣಿ ಸುಬ್ರಮಣ್ಯ ಸಿನಿಮಾವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡಿದ್ದು, ಇದೊಂದು ಹ್ಯುಮರಸ್ ಲವ್ ಸ್ಟೋರಿ. ಈ ಸಿನಿಮಾದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಸುಬ್ರಮಣ್ಯನಾಗಿ ಹಾಗೂ ನಟಿ ಅಮೂಲ್ಯ ಶ್ರಾವಣಿಯಾಗಿ ನಟಿಸಿದ್ದು, ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶ್ರಾವಣಿ ಸುಬ್ರಹ್ಮಣ್ಯ ಸಾದಾಸೀದಾ ಲವ್ ಸ್ಟೋರಿಯಾದರೂ ಡಿಫರೆಂಟ್ ಆಗಿ ಹೇಳುವ ಪ್ರಯತ್ನ ಮಾಡಲಾಗಿತ್ತು. ನಂತರ ತೆಲುಗಿಗೆ ರಿಮೇಕ್ ಆಗಿತ್ತು. 

    ಗಜಕೇಸರಿ

    ಗಜಕೇಸರಿ

    3

    ಗಜಕೇಸರಿ ಚಿತ್ರದಲ್ಲಿ ಅಮೂಲ್ಯ ರಾಕಿಂಗ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ಅಭಿನಯಿಸಿದ್ದರು. ಯಶ್​ ಸಿನಿ ಜೀವನದ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ಇದೂ ಒಂದು. ಚಿತ್ರದಲ್ಲಿ ಯಶ್ ಎರಡು ಭಿನ್ನ ಶೇಡ್‌ಗಳಲ್ಲಿ ಕಾಣಿಸುತ್ತಾರೆ. ಮೊದಲು ಕೃಷ್ಣನಾಗಿ, ಆ ಬಳಿಕ ಬಾಹುಬಲಿಯಾಗಿ ಅದ್ಭುತವಾಗಿ ನಟಿಸಿದ್ದರು. ಅಮೂಲ್ಯ ಕಾಡನ್ನು ಅಭ್ಯಸಿಸಲು ಬಂದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೀರಾಳಾಗಿ ಅವರು ಈ ಚಿತ್ರದಲ್ಲಿ ಸ್ವಲ್ಪ ಮೆಚ್ಯೂರ್ಡ್ ಆಗಿ ಕಾಣಿಸಿಕೊಂಡಿದ್ದರು. ಪವರ್‌ಫುಲ್ ಪಂಚಿಂಗ್ ಡೈಲಾಗ್‌ ಹೊಂದಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. 

    ಮಾಸ್ತಿ ಗುಡಿ

    ಮಾಸ್ತಿ ಗುಡಿ

    4

    ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಸಿನಿಮಾದಲ್ಲಿ ನಟಿ ಅಮೂಲ್ಯ ನಾಯಕಿಯಾಗಿ ನಟಿಸಿದ್ದರು. ಕಾಡಿನ ರಕ್ಷಣೆ ಕುರಿತಾದ ಈ ಚಿತ್ರದಲ್ಲಿ ವಿಜಯ್ ಎರಡು ಶೇಡ್ ಪಾತ್ರದಲ್ಲಿ ನಟಿಸಿದ್ದರು. 'ಮಾಸ್ತಿ ಗುಡಿ' ನೈಜ ಘಟನೆ ಆಧಾರಿತ ಸಿನಿಮಾ. ಬಿಳಿಗಿರಿರಂಗನ ಬೆಟ್ಟದ ಕಾಡಿನಲ್ಲಿ ಹುಲಿಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದರ ಹಿಂದಿರಬಹುದಾದ ರಹಸ್ಯಗಳನ್ನೊಳಗೊಂಡಿರುವ ಸಿನಿಮಾ. ಈ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಚಿತ್ರದ ಖಳ ನಟರಾದ ಅನಿಲ್ ಹಾಗೂ ಉದಯ್ ದುರಂತ ಸಾವಿಗೀಡಾಗಿದ್ದರು. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X