ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೆ ರೆಡಿಯಾಗಿರುವ ಟಾಪ್ 10 ಚಿತ್ರಗಳು

  ದೀಪಾವಳಿ ಹಬ್ಬ ಮುಗಿಸಿ ಬಂದ ಕನ್ನಡ ಪ್ರೇಕ್ಷಕರಿಗೆ ನವಂಬರ್ ತಿಂಗಳಿನಲ್ಲಿ ಸಾಲು ಸಾಲು ಚಿತ್ರಗಳ ಸರಮಾಲೆ ಕಾಯುತ್ತಿದೆ. ಶಿವಣ್ಣನವರ ಬಹುನೀರೀಕ್ಷೀತ ಆಯುಷ್ಮಾನ್ ಭವ ,ರವಿಚಂದ್ರನ್ ರವರ ಆ ದೃಶ್ಯ ಚಿತ್ರದಿಂದ ಹಿಡಿದು ಯಶ್-ರಾಧಿಕಾ ದಂಪತಿಗಳು ಧ್ವನಿ ನೀಡಿದ ಮಕ್ಕಳ ಚಿತ್ರ ಗಿರ್ಮಿಟ್ ವರೆಗೆ ತರೇಹವಾರಿ ಚಿತ್ರಗಳು ಬಿಡುಗಡೆಗೆ ಕಾದಿವೆ..ಇವುಗಳ ಮಧ್ಯದಲ್ಲಿ ಕನ್ನಡ ಪ್ರೇಮವನ್ನು ಭೋದಿಸಲು ನವರಸ ನಾಯಕ ಜಗ್ಗೇಶ್ ಕಾಳಿದಾಸ ಮೇಷ್ಟ್ರಾಗಿ ಬರಲಿದ್ದಾರೆ..ಇವುಗಳಲ್ಲಿ ಕೆಲ ಚಿತ್ರಗಳ ರೀಲೀಸ್ ಡೇಟ್ ನಲ್ಲಿ ವ್ಯತ್ಯಾಸವಾದರೂ ಬಹುತೇಕ ಚಿತ್ರಗಳು ನವೆಂಬರ್ ತಿಂಗಳಿನಲ್ಲಿ ತೆರೆಕಾಣಲು ರೆಡಿಯಾಗಿವೆ.2019 ನವೆಂಬರ್ ತಿಂಗಳಲ್ಲಿ ಬಿಡುಗಡೆಗೆ ಕಾದಿರುವ ಟಾಪ್ ಕನ್ನಡ ಚಿತ್ರಗಳು ಇಲ್ಲಿವೆ.

  1. ದಂಡುಪಾಳ್ಯ 4

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Crime

  ಬಿಡುಗಡೆ ದಿನಾಂಕ

  01 Nov 2019

  ಮೊದಲ ಮೂರು ಚಿತ್ರಗಳ ಯಶಸ್ಸು ಕಂಡ ಬೆನ್ನಲ್ಲೇ ನಾಲ್ಕನೇ ಬಾರಿಗೆ ದಂಡುಪಾಳ್ಯ ಗ್ಯಾಂಗ್ ಬರಲಿದೆ. ಈ ಚಿತ್ರದಲ್ಲಿ ಸುಮನ್ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಹಿಂದೆ ತೆರೆಕಂಡ ಎಲ್ಲ ಕನ್ನಡ ಚಿತ್ರಗಳಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

  2. ರಂಗನಾಯಕಿ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Romance

  ಬಿಡುಗಡೆ ದಿನಾಂಕ

  01 Nov 2019

  ತ್ರಯಂಬಕಂ ಚಿತ್ರದ ನಂತರ ದಯಾಳ್ ಪದ್ಮನಾಭನ್ ಮತ್ತೊಂದು ಥ್ರಿಲ್ಲರ್ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡಲಿದ್ದಾರೆ. ಆದಿತಿ ಪ್ರಭುದೇವ, ಎಂ.ಜಿ.ಶ್ರೀನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಒಂದು ಹೆಣ್ಣು ಅತ್ಯಾಚಾರವನ್ನು ಎದುರಿಸುವ ಬಗೆಯನ್ನು ತೋರಿಸುತ್ತದೆ.

  3. ಆ ದೃಶ್ಯ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Crime

  ಬಿಡುಗಡೆ ದಿನಾಂಕ

  08 Nov 2019

  ಕೆ.ಮಂಜು ನಿರ್ಮಾಣದಲ್ಲಿ ಮೂಡಿಬಂದಿರುವ ಆ ದೃಶ್ಯ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಕೊಲೆಯ ಜಾಡನ್ನು ಬೆನ್ನತ್ತಿ ಹೋಗುವ ಪೋಲಿಸ್ ಆಫೀಸರ್ ಪಾತ್ರದಲ್ಲಿ ರವಿಚಂದ್ರನ್ ನಟಿಸಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X