ಖಾಕಿ ಖದರ್ ತೋರಿದ ಚಿತ್ರಗಳು - ಕನ್ನಡದ ಅತ್ಯುತ್ತಮ ಪೋಲಿಸ್ ಚಿತ್ರಗಳು

  ಕನ್ನಡದಲ್ಲಿ ಹಲವಾರು ಪೋಲಿಸ್ ಚಿತ್ರಗಳು ತೆರೆಗೆ ಬಂದಿವೆ. ಭಾರತದ ಮೊದಲ ಬಾಂಡ್ ಚಿತ್ರ ಜೇಡರಬಲೆ ಕನ್ನಡದಲ್ಲಿ ತಯಾರಾಗಿದ್ದು ವಿಶೇಷ. ಡಾ.ರಾಜಕುಮಾರ್ ಹಲವು ಚಿತ್ರಗಳಲ್ಲಿ ಸಿ.ಐ.ಡಿ ಆಫೀಸರ್ ಆಗಿ ಬಾಂಡ್ ಶೈಲಿಯ ಚಿತ್ರಗಳನ್ನು ಪರಿಚಯಿಸಿದರು. ನಂತರ ವಿಷ್ಣುವರ್ಧನ್, ಪ್ರಭಾಕರ್, ಅಂಬರೀಶ್ ಪೋಲಿಸ್ ಪಾತ್ರಗಳಲ್ಲಿ ಮಿಂಚಿ ಯಶಸ್ವಿಯಾದರು. ಕನ್ನಡದಲ್ಲಿ ಪೋಲಿಸ್ ಚಿತ್ರಗಳಿಗೆ ಒಂದು ಗತ್ತು ತಂದು ಕೊಟ್ಟು ಕೀರ್ತಿ ಶಂಕರನಾಗ್ ಅವರಿಗೆ ಸಲ್ಲುತ್ತದೆ. ಸಾಂಗ್ಲಿಯಾನಾ, ಸಿಬಿಐ ಶಂಕರ್, ಸುಂದರ ಕಾಂಡ ಮುಂತಾದ ಚಿತ್ರಗಳ ಮೂಲಕ ಪೋಲಿಸ್ ಪವರ್ ನ್ನು ತೆರೆಮೇಲೆ ಚಿತ್ರಿಸಿದ್ದು ಶಂಕರನಾಗ್. ಆಮೇಲೆ ಕೆಲ ವರ್ಷಗಳ ನಂತರ ಸಾಯಿಕುಮಾರ್ ತಮ್ಮ ಕಂಚಿನ ಕಂಠ ಮತ್ತು ಖಡಕ್ ಡೈಲಾಗ್ ಗಳ ಮೂಲಕ ಅಗ್ನಿ ಐಪಿಎಸ್, ಪೋಲಿಸ್ ಸ್ಟೋರಿ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿದರು. ಹೀಗೆ ಕನ್ನಡದಲ್ಲಿ ಕೆಲ ಅಪೂರ್ವ ಪೋಲಿಸ್ ಚಿತ್ರಗಳನ್ನು ಕೆಳಗೆ ನೀಡಲಾಗಿದೆ.

  1. ಟೈಗರ್ 1986

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  1986

  ಟೈಗರ್ ಪ್ರಭಾಕರ್ ಕಿರಾತಕ, ಮುತ್ತೈದೆ ಬಾಗ್ಯ, ಸಿ.ಬಿ.ಐ ಶಿವ ಮುಂತಾದ ಚಿತ್ರಗಳಲ್ಲಿ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಪ್ರಬಾಕರ್ ರವರ ಬಿರುದು ಟೈಗರ್ ಹೆಸರಿನಲ್ಲಿ ಮೂಡಿಬಂದ ಈ ಚಿತ್ರವನ್ನು ಪರಿಗಣಿಸಲಾಗಿದೆ.

  2. ಸಾಂಗ್ಲಿಯಾನ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Crime

  ಬಿಡುಗಡೆ ದಿನಾಂಕ

  1988

  ಪಾತ್ರವರ್ಗ

  ಶಂಕರ್ ನಾಗ್,ಭವ್ಯ

  ಮಾರುವೇಷದಲ್ಲಿ ಬಂದು ದುಷ್ಟರ ಜಾಲವನ್ನು ಅರಿತ ನಿಷ್ಟಾವಂತ ಮತ್ತು ನಿಷ್ಟುರ ಪೋಲಿಸ್ ಅಧಿಕಾರಿ ನಂತರ ಅವರನ್ನೆಲ್ಲ ಕಂಬಿ ಹಿಂದೆ ಕಳಿಸಲು ಯಶಸ್ವಿಯಾಗುತ್ತಾನೆ. ಖಡಕ್ ಪೋಲಿಸ್ ಅಧಿಕಾರಿ ಮತ್ತು ರಾಜಕಾರಣಿ ಹೆಚ್.ಟಿ.ಸಾಂಗ್ಲಿಯಾನರ ಹೆಸರನ್ನು ಶಂಕರನಾಗ್ ಅಜರಾಮರ ಮಾಡಿದರು.

  3. ಇಂದ್ರಜಿತ್

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  1989

  ಒಂದು ಉನ್ನತ ವ್ಯಕ್ತಿಗಳ ಕೈವಾಡ ಇರುವ ಕೇಸನ್ನು ತನಿಖೆ ಮಾಡಲು ಹೋಗಿ ತಾನು ಅವರ ಜಾಲಕ್ಕೆ ಬಲಿಯಾಗಿ ಜೈಲು ಸೇರುವ ಇಂದ್ರಜಿತ್ ಹೇಗೆ ಅವರನ್ನು ಸೆದೆ ಬಡಿಯುತ್ತಾನೆ ಎಂಬುದು ಚಿತ್ರದ ಕಥೆ. ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕು ಶತದಿನೋತ್ಸವ ಆಚರಿಸಿತು.ಚಿತ್ರದ ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ ಗೀತೆ ಇನ್ನೂ ಹಸಿರಾಗಿದೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X