twitter
    X
    Home ಚಲನಚಿತ್ರಗಳ ಒಳನೋಟ

    ಬರ್ತಡೇ ಸ್ಪೆಷಲ್: ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಟಾಪ್ ಮ್ಯೂಸಿಕಲ್ ಹಿಟ್ಸ್ ಇಲ್ಲಿವೆ.

    Author Administrator | Updated: Saturday, May 13, 2023, 10:01 AM [IST]

    ಕನ್ನಡ ಚಿತ್ರರಂಗದಲ್ಲಿ ಮ್ಯಾಜಿಕಲ್ ಕಂಪೋಸರ್ ಎಂದೇ ಗುರುತಿಸಿಕೊಂಡಿರುವ ಅರ್ಜುನ್ ಜನ್ಯ 2019 ರಲ್ಲಿ ತೆರೆಕಂಡ 99 ಚಿತ್ರದ ಮೂಲಕ ನೂರು ಚಿತ್ರಗಳ ಸಂಗೀತ ನಿರ್ದೇಶನದ ಗಡಿ ದಾಟಿದರು. ಕೆ.ಕಲ್ಯಾಣ್ ಮತ್ತು ವಿ.ಮನೋಹರ್ ರವರ ಸಹಾಯಕರಾಗಿ ಸಿನಿಪಯಣ ಆರಂಭಿಸಿದ ಅರ್ಜುನ್ ಸಂಗೀತ ನೀಡಿದ ಮೊದಲ ಚಿತ್ರ 2006 ರಲ್ಲಿ ತೆರೆಕಂಡ ಅಟೋಗ್ರಾಫ್ ಪ್ಲೀಸ್. 2009 ರಲ್ಲಿ ತೆರಕಂಡ ಬಿರುಗಾಳಿ ಚಿತ್ರದ ಹಾಡುಗಳು ಇವರ ಸಂಗೀತ ನಿರ್ದೇಶನಕ್ಕೆ ಮೊದಲ ಮನ್ನಣೆ ತಂದುಕೊಟ್ಟವು. ನಂತರ 2011 ರಲ್ಲಿ ತೆರೆಕಂಡ ಕೆಂಪೇಗೌಡ ಚಿತ್ರ ಇವರಿಗೆ ಬಿಗ್ ಬ್ರೇಕ್ ನೀಡಿತು. ಅರ್ಜುನ್ ಜನ್ಯ ಸಂಗೀತ ಪಯಣದ ಟಾಪ್ 10 ಅಲ್ಬಮ್ ಗಳನ್ನು ಈ ಕೆಳಗೆ ನೀಡಲಾಗಿದೆ.

    cover image

    ಬಿರುಗಾಳಿ

    ಅರ್ಜುನ್ ಜನ್ಯ ಸಂಗೀತ ನೀಡಿದ ಮೊದಲ ಚಿತ್ರ. ಈ ಚಿತ್ರದ ಸಂಗೀತಕ್ಕಾಗಿ ಸೌಥ್ ಸ್ಕೋಪ್ ಅತ್ತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು. ಚಿತ್ರದ ಏಳು ಗೀತೆಗಳಲ್ಲಿ ಜಯಂತ್ ಕಾಯ್ಕಿಣಿ ಬರೆದ ಮಧುರ ಪಿಸುಮಾತಿಗೆ ಮತ್ತು ಹೂವಿನ ಬಾಣದಂತೆ ಹಾಡುಗಳು ತುಂಬಾ ಪ್ರಸಿದ್ಢವಾದವು.

    ಕೆಂಪೇಗೌಡ

    ಅರ್ಜುನ್ ಜನ್ಯಗೆ ಬಿಗ್ ಬ್ರೇಕ್ ನೀಡಿದ ಚಿತ್ರ. ಈ ಚಿತ್ರದ ಹಾಡುಗಳು ಹಿಟ್ ಆಗುವುದರ ಜೊತೆಗೆ ಈ ಚಿತ್ರದ ಹಿನ್ನಲೆ ಸಂಗೀತಕ್ಕಾಗಿ( BGM- ಬ್ಯಾಕಗ್ರೌಂಡ್ ಮ್ಯೂಸಿಕ್) ಅರ್ಜುನ್ ಜನ್ಯಾ ಮನ್ನಣೆ ಪಡೆದರು.

    ರೋಮಿಯೋ

    ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅರ್ಜುನ ಜನ್ಯ ಸೈಮಾ ಅಂತರಾಷ್ಟ್ರೀಯ ಅತ್ತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು. ಶ್ರೇಯಾ ಘೋಷಾಲ್ ಧ್ವನಿ ನೀಡಿದ್ದ ಚಿತ್ರದ ಆಲೋಚನೆ ಗೀತೆ ತುಂಬಾ ಪ್ರಸಿದ್ಧವಾಗಿತ್ತು.

    ಅಲೆಮಾರಿ

    ಯೋಗೇಶ್ ಮತ್ತು ರಾಧಿಕಾ ಪಂಡಿತ್ ನಟಿಸಿದ್ದ ಈ ಚಿತ್ರದಲ್ಲಿ ಒಟ್ಟು ಒಂಭತ್ತು ಗೀತೆಗಳಿದ್ದವು. ಈ ಚಿತ್ರದ ಸಂಗೀತಕ್ಕಾಗಿ ಅರ್ಜುನ ಜನ್ಯ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.

    ಭಜರಂಗಿ

    ಶಿವಣ್ಣ ನಾಯಕನಾಗಿ ನಟಿಸಿದ ಈ ಚಿತ್ರದ ಸಂಗೀತಕ್ಕಾಗಿ ಪಿಲ್ಮ್ ಫೇರ್ ಅತ್ತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು. ಅನುರಾಧಾ ಭಟ್ ಹಾಡಿದ್ದ ನಂದನಂದನ ಗೀತೆ ತುಂಬಾ ಪ್ರಸಿದ್ಧಿ ಪಡೆಯಿತು.

    ವಿಕ್ಟರಿ

    ಈ ಚಿತ್ರದಲ್ಲಿ ಅರ್ಜುನ್ ಜನ್ಯ ಆರು ಹಾಡುಗಳಿಗೆ ಸಂಗೀತ ನೀಡಿದರು. ಚಿತ್ರದ ಖಾಲಿ ಕ್ವಾಟರ್ ಬಾಟಲಿ ಹಾಡು ತುಂಬಾ ಪ್ರಸಿದ್ಧಿಯಾಗಿ ಮಧ್ಯ ಪ್ರಿಯರ ಫೇವರೇಟ್ ಹಾಡಾಯಿತು.

    ಅಧ್ಯಕ್ಷ

    ಈ ಚಿತ್ರದಲ್ಲಿ ಅರ್ಜುನ್ ಜನ್ಯ ಐದು ಹಾಡುಗಳಿಗೆ ಸಂಗೀತ ನೀಡಿದರು. ಪುನೀತ್ ರಾಜಕುಮಾರ ಹಾಡಿದ ಚಿತ್ರದ ಟೈಟಲ್ ಸಾಂಗ್ ಮತ್ತು ವಿಜಯ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದ ಓಪನ್ ಹೇರ್ ಮತ್ತು ಪೋನು ಇಲ್ಲ ಹಾಡುಗಳು ಗಮನ ಸೆಳೆದವು.

    ಮಾಣಿಕ್ಯ

    ಈ ಚಿತ್ರದಲ್ಲಿ ಒಟ್ಟು ಓಂಭತ್ತು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದರು. ಕೆ.ಕಲ್ಯಾಣ್ ಸಾಹಿತ್ಯದಲ್ಲಿ ಮೂಡಿಬಂದ ಜೀವ ಜೀವ ಗೀತೆ  ಕೇಳುಗರ ಅಚ್ಚುಮೆಚ್ಚಾಯಿತು.

    ರಿಕ್ಕಿ

    ಅರ್ಜುನ್ ಸಂಗೀತ ನೀಡಿದ ಚಿತ್ರದ ಐದು ಹಾಡುಗಳು ಕೆ.ಕಲ್ಯಾಣ್, ಕವಿರಾಜ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಮೂಡಿಬಂದವು. ಚಿತ್ರದ ಓ ಬೇಬಿ ಗೀತೆ ಗಮನ ಸೆಳೆಯಿತು.

    ಚಕ್ರವರ್ತಿ

    ಈ ಚಿತ್ರದಲ್ಲಿ ಅರ್ಜುನ್ ಜನ್ಯ ಒಟ್ಟು ಐದು ಹಾಡುಗಳಿಗೆ ಸಂಗೀತ ನೀಡಿದರು. ಚಿತ್ರ 90 ದಶಕದ ಕಥೆ ಹೊಂದಿದ್ದರಿಂದ ಮೈಸೂರು ದಸರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ `ಭಾರತ್ ಬ್ರಾಸ್' ಎಂಬ ಬ್ಯಾಂಡನ್ನು ಚಿತ್ರದ ಗೀತೆಗಳಿಗೆ ಜನ್ಯ ಬಳಿಸಿದರು. ಚಿತ್ರದ ಒಂದು ಮಳೆಬಿಲ್ಲು ಗೀತೆ ಕೇಳುಗರ ಫೇವರೇಟ್ ಆಯಿತು.

    ಅಯೋಗ್ಯ

    ಈ ಚಿತ್ರದ ಐದು ಗೀತೆಗಳಲ್ಲಿ ವಿಜಯ್ ಪ್ರಕಾಶ್ ಮತ್ತು ಪಾಲಕ್ ಮುಚ್ಚಲ್ ಧ್ವನಿಯಲ್ಲಿ ಮೂಡಿಬಂದ `ಏನಮ್ಮಿ ಏನಮ್ಮಿ' ಗೀತೆ ಯ್ಯೂಟ್ಯೂಬ್ ನಲ್ಲಿ ಲಿರಿಕಲ್ ಮತ್ತು ವಿಡಿಯೋ ಸೇರಿ ನೂರು ಮಿಲಿಯನ್ ವೀಕ್ಷಣೆಗೊಂಡ ಮೊದಲ ಕನ್ನಡ ಗೀತೆಯಾಗಿ ದಾಖಲಾಗಿದೆ. ಈ ಚಿತ್ರದ ಸಂಗೀತಕ್ಕಾಗಿ ಅರ್ಜುನ್ ಜನ್ಯ ಸೈಮಾ ಪ್ರಶಸ್ತಿಗೆ ನಾಮಾಂಕಿತರಾಗಿದ್ದರು.

    ದಿ ವಿಲನ್

    ಶಿವಣ್ಣ ಮತ್ತು ಸುದೀಪ್ ಜೊತೆಯಾಗಿ ನಟಿಸಿದ ಈ ಚಿತ್ರದ ಒಟ್ಟು ಆರು ಹಾಡುಗಳಿಗೆ ಅರ್ಜುನ್ ಸಂಗೀತ ನೀಡಿದರು. ಚಿತ್ರದ ನಾಲ್ಕು ಗೀತೆಗಳು ತುಂಬಾ ಪ್ರಸಿದ್ಧಿಯಾದವು. ಶಿವಣ್ಣ ಮತ್ತು ಸುದೀಪ್ ಇಂಟ್ರಡಕ್ಷನ್ ಗೀತೆಗಳಾದ ಟಿಕ್ ಟಿಕ್ ಟಿಕ್ ಮತ್ತು ಐ ಯ್ಯಾಮ್ ವಿಲನ್ ಗೀತೆಗಳು ಕ್ರೇಜ್ ಕ್ರಿಯೇಟ್ ಮಾಡಿದವು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X