ಚಲನಚಿತ್ರಗಳ ಒಳನೋಟ
ಕಾಲಿವುಡ್ ನಿರ್ದೇಶಕ ಅಶ್ವತ್ ಮಾರಿಮುತ್ತು ನಿರ್ದೇಶನದ ಹಾಗೂ ಪ್ರದೀಪ್ ರಂಗನಾಥನ್ ಹೀರೋ ಆಗಿ ನಟಿಸಿರುವ 'ಡ್ರ್ಯಾಗನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿದೆ. ಇಂಜಿನಿಯರಿಂಗ್ ಓದುತ್ತಿರುವ ಯುವಕನೊಬ್ಬನ ಕಾಲೇಜು ಲೈಫ್, ಫ್ಯಾಮಿಲಿ ಕಥೆ ಹಾಗೂ ಜೀವನದಲ್ಲಿ ಸಕ್ಸಸ್ ಆಗಲು ಪರದಾಡುವ ಸಿಂಪಲ್ ಕಥೆಯನ್ನು ನಿರ್ದೇಶಕರು ಸಖತ್ ಮನೋರಂಜನೆ ನೀಡುವಂತೆ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಭಾರತ ಮಾತ್ರವಲ್ಲ, ವಿದೇಶದಲ್ಲೂ ಡ್ರ್ಯಾಗನ್‌ಗೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಇಲ್ಲಿ ಡ್ರ್ಯಾಗನ್ ಹೀರೋ ಪ್ರದೀಪ್ ರಂಗನಾಥನ್ ಕುರಿತ ಕೆಲ ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.