twitter
    X
    Home ಚಲನಚಿತ್ರಗಳ ಒಳನೋಟ

    'ಓಂ' ಚಿತ್ರಕ್ಕೆ 28 ವರ್ಷ: ಮೆಗಾ ಹಿಟ್ ಸಿನಿಮಾದ ಅಪರೂಪದ ವಿ‍ಶೇಷತೆಗಳಿವು!

    Author Administrator | Updated: Friday, May 19, 2023, 09:53 AM [IST]

    ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳು ವಿಶಷ್ಟ ದಾಖಲೆ ಬರೆದಿವೆ. ಕೇವಲ ಬಾಕ್ಸಾಫೀಸ್ ಗಳಿಕೆ ಮಾತ್ರವಲ್ಲದೇ ಹಲವು ವಿಶಿಷ್ಟತೆಗಳಿಂದ ಕೆಲವು ಚಿತ್ರಗಳು ಇಂದಿಗೂ ಜನಪ್ರಿಯವಾಗಿವೆ. ಉಪೇಂದ್ರ ನಿರ್ದೇಶನದ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕನಾಗಿ ನಟಿಸಿದ್ದ ಓಂ ಚಿತ್ರ ಕನ್ನಡ ಚಿತ್ರಗಳಲ್ಲಿಯೇ ಒಂದು ವಿಶಿಷ್ಟ ದಾಖಲೆ ಬರೆದಿದೆ. ಈ ಚಿತ್ರದ ಕೆಲ ವಿಶೇಷತೆಗಳು ಇಲ್ಲಿವೆ ನೋಡಿ..

    cover image
    ಓಂ ಚಿತ್ರದ ಸ್ಕ್ರಿಪ್ಟ್

    ಓಂ ಚಿತ್ರದ ಸ್ಕ್ರಿಪ್ಟ್

    1

    ಈ ಚಿತ್ರದ ಕಥೆಯನ್ನು ಸ್ಕ್ರಿಪ್ಟನ್ನು ಉಪೇಂದ್ರರವರು ತಮ್ಮ ಕಾಲೇಜು ದಿನಗಳಲ್ಲಿಯೇ ಬರೆದಿದದ್ದರು. ತಮ್ಮ ಗೆಳೆಯ ಪುರಷೋತ್ತಮ್ ಎಂಬುವವರ ಲೆಟರ್ ಒಂದನ್ನು ಇಟ್ಟುಕೊಂಡು ಚಿತ್ರಕಥೆಯನ್ನು ಬರೆದಿದ್ದರು. ಚಿತ್ರರಂಗಕ್ಕೆ ಬರುವ ಮುನ್ನವೇ ಉಪ್ಪಿ ಸುಮಾರು ಹತ್ತು ಚಿತ್ರಕಥೆಗಳನ್ನು ಬರೆದಿದ್ದರು.

    ನಾಗಾರ್ಜುನ ಶಿವ ಚಿತ್ರ

    ನಾಗಾರ್ಜುನ ಶಿವ ಚಿತ್ರ

    2

    1989 ರಲ್ಲಿ ತೆರೆಕಂಡ ನಾಗಾರ್ಜುನ ಅಭಿನಯದ ಶಿವ ಚಿತ್ರ ಉಪೇಂದ್ರ ರವರು ಬರೆದ ಕಥೆಯ ಮಾದರಿಯಲ್ಲಿಯೇ ಇದ್ದುದ್ದರಿಂದ ಉಪ್ಪಿ ಓಂ ಚಿತ್ರದ ಕಥೆಯನ್ನು ಸಂಪೂರ್ಣ ಬದಲಾಯಿಸಿದರು. ತಮ್ಮ ಕಥೆಯಲ್ಲಿ ಭೂಗತ ಜಗತ್ತನ್ನು ಆದಷ್ಟು ನೈಜವಾಗಿ ತೋರಿಸಲು ನಿರ್ಧರಿಸಿದರು.

    ನಾಯಕನಾಗಿ ಕುಮಾರ್ ಗೋವಿಂದ್ ಮೊದಲ ಆಯ್ಕೆ

    ನಾಯಕನಾಗಿ ಕುಮಾರ್ ಗೋವಿಂದ್ ಮೊದಲ ಆಯ್ಕೆ

    3

    ಓಂ ಚಿತ್ರದಲ್ಲಿ ನಾಯಕನಾಗಿ ನಟಿಸಲು ಉಪೇಂದ್ರರವರ ಹಿಂದಿನ ಚಿತ್ರ `ಶ್!' ದಲ್ಲಿ ನಾಯಕನಾಗಿ ನಟಿಸಿದ್ದ ಕುಮಾರ್ ಗೋವಿಂದ್ ಮೊದಲ ಆಯ್ಕೆಯಾಗಿದ್ದರು. ಆದರೆ ಚಿತ್ರದ ಕಥೆ ಬರೆಯುತ್ತಾ ಹೋದಂತೆ ಉಪ್ಪಿಗೆ ಇಷ್ಟು ರಾ ಪಾತ್ರಕ್ಕೆ ಶಿವಣ್ಣ ಸೂಕ್ತ ಎನಿಸಿದರು. ನಂತರ ಉಪ್ಪಿ ಹೊನ್ನವಳ್ಳಿ ಕೃಷ್ಣರ ಮುಖಾಂತರ ಡಾ.ರಾಜ್ ಸಂಪರ್ಕಕ್ಕೆ ಬಂದು ಶಿವಣ್ಣ ಕಾಲ್ ಶೀಟ್ ಪಡೆದರು.

    ಹತ್ತು ನಿಮಿಷದಲ್ಲಿ ರಾಜ್ ಮೆಚ್ಚುಗೆ ಪಡೆದ ಉಪ್ಪಿ

    ಹತ್ತು ನಿಮಿಷದಲ್ಲಿ ರಾಜ್ ಮೆಚ್ಚುಗೆ ಪಡೆದ ಉಪ್ಪಿ

    4

    ಹೊನ್ನವಳ್ಳಿ ಕೃಷ್ಣ ಮೂಲಕ ಡಾ. ರಾಜ್ ಸಹೋದರ ವರದಪ್ಪರವರನ್ನು ಭೇಟಿ ಮಾಡಿದ ಉಪೇಂದ್ರ ನಂತರ ರಾಜ್ ಸಮ್ಮುಖದಲ್ಲಿ ಹತ್ತು ನಿಮಿಷಗಳಲ್ಲಿ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾದ ರಾಜ್ ತಮ್ಮ ಬ್ಯಾನರ್ ಅಡಿಯಲ್ಲಿಯೇ ನಿರ್ಮಾಣ ಮಾಡುವುದಾಗಿ ಹೇಳಿದರು. ಹಾಗೇ ಅಡ್ವಾನ್ ಆಗಿ ಉಪೇಂದ್ರರವರಿಗೆ 50000 ರೂ ನೀಡಿದರು. ಈ ಘಟನೆಯನ್ನು ನೆನೆಯುವ ಉಪ್ಪಿ ಆಗ ತಾವು ಆನಂದಭಾಷ್ಪ ಸುರಿಸಿದ್ದಾಗಿ ಹೇಳಿದ್ದಾರೆ.

    ಚಿತ್ರಕ್ಕೆ ಓಂ ಹೆಸರು

    ಚಿತ್ರಕ್ಕೆ ಓಂ ಹೆಸರು

    5

    ಚಿತ್ರಕ್ಕೆ ಮೊದಲು ಸತ್ಯ ಎಂದು ಹೆಸರಿಡಲು ನಿರ್ಧರಿಸಿಲಾಗಿತ್ತು. ಮುಹೂರ್ತದ ದಿನ ಕ್ಲ್ಯಾಪ್ ಬಾಕ್ಸ್ ಮೇಲೆ ಡಾ. ರಾಜಕುಮಾರ್ ಓಂ ಬರೆದು ಚಿತ್ರಕ್ಕೆ ಚಾಲನೆ ನೀಡಿದರು. ನಂತರ ಉಪ್ಪಿ ಚಿತ್ರಕ್ಕೆ ಓಂ ಎಂದೇ ಹೆಸರಿಟ್ಟರು.

    ನಿಜವಾದ ರೌಡಿಗಳು

    ನಿಜವಾದ ರೌಡಿಗಳು

    6

    ಚಿತ್ರದ ಕಥೆಗೆ ಜೀವ ನೋಡಲು ಚಿತ್ರದಲ್ಲಿ ನಿಜ ಜೀವನದ ರೌಡಿಗಳು ನಟಿಸಿದ್ದರು. ಬೆಂಗಳೂರಿನ ಭೂಗತ ಲೋಕದ ರೌಡಿಗಳಾದ ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ. ತನ್ವೀರ್ ಅಹ್ಮದ್. ಜೇಡರಹಳ್ಳಿ ಕೃಷ್ಣ, ಕೋಳಿ ಫಯಾಜ್ ಮುಂತಾದವರು ತಮ್ಮ ನಿಜವಾದ ಹೆಸರಿನಿಂದಲೇ ನಟಿಸಿದ್ದರು. ಹಾಗೇ ಚಿತ್ರವನ್ನು ಛಾಯಾಗ್ರಾಹಕ ಗೌರಿಶಂಕರ್ ಹಳದಿ ಫಿಲ್ಮ್ ಬಳಸಿ ಚಿತ್ರೀಕರಿಸಿದ್ದರು.

    ಹೇ ದಿನಕರ ಗೀತೆ

    ಹೇ ದಿನಕರ ಗೀತೆ

    7

    ಡಾ.ರಾಜ್ ಧ್ವನಿಯಲ್ಲಿ ಮೂಡಿಬಂದ ಚಿತ್ರದ ಪ್ರಸಿದ್ಧ ಹಾಡು `ಹೇ ದಿನಕರ' ಮೊದಲು ಚಿತ್ರದಲ್ಲಿರಲಿಲ್ಲ. ಆದರೆ ಡಾ.ರಾಜ್ ಚಿತ್ರದ ಟೈಟಲ್ ಹೆಸರಿನ ಹಾಡು ಚಿತ್ರದಲ್ಲಿರಲಿ ಎಂದು ಸೂಚಿಸಿದರು. ನಂತರ ಹಂಸಲೇಖ ಸಾಹಿತ್ಯ ಮತ್ತು ಸಂಗೀತದಲ್ಲಿ ಮೂಡಿಬಂದ ಈ ಗೀತೆಯನ್ನು ರಾಜ್ ಅದ್ಭುತವಾಗಿ ಹಾಡಿದ್ದರು. ಹಾಗೇ ಚಿತ್ರದ ಸಂಗೀತದ ಹಕ್ಕುಗಳು ಚಿತ್ರ ಬಿಡುಗಡೆಯಾದ ಇಪ್ಪತ್ತು ವರ್ಷಗಳ ನಂತರ 2015 ರಲ್ಲಿ ಸೋನಿ ಇಂಟರ್ನ್ಯಾಷನಲ್ ಖರೀದಿ ಮಾಡಿತು.

    ರಿ-ರೀಲೀಸ್ ನಲ್ಲಿ ದಾಖಲೆ

    ರಿ-ರೀಲೀಸ್ ನಲ್ಲಿ ದಾಖಲೆ

    8

    ಈ ಚಿತ್ರ ಸುಮಾರು 632 ಕ್ಕೂ ಹೆಚ್ಚು ಬಾರಿ ಮರು ಬಿಡುಗಡೆಯಾಗಿ ಭಾರತದ ಚಿತ್ರರಂಗದಲ್ಲಿಯೇ ಅದ್ಭುತ ದಾಖಲೆ ಮಾಡಿದೆ.2015 ರಲ್ಲಿ ಡಿಟಿಎಸ್ ನೊಂದಿಗೆ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

    ತೆಲುಗು ಮತ್ತು ಹಿಂದಿಗೆ ರಿಮೇಕ್

    9

    ಈ ಚಿತ್ರ 1997 ರಲ್ಲಿ ತೆಲುಗುವಿನಲ್ಲಿ `ಓಂಕಾರಂ' ಹೆಸರಿನಿಂದ ಬಿಡುಗಡೆಯಾಯಿತು. ಉಪೇಂದ್ರರವರೇ ತೆಲುಗು ಭಾಷೆಯಲ್ಲಿ ನಿರ್ದೇಶನ ಮಾಡಿದ್ದರು. ರಾಜಶೇಖರ್ ಮತ್ತು ಪ್ರೇಮಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಿಂದಿಯಲ್ಲಿ ಸನ್ನಿ ಡಿಯೋಲ್ ನಾಯಕತ್ವದಲ್ಲಿ ಅರ್ಜುನ್ ಪಂಡಿತ್ ಹೆಸರಿನಲ್ಲಿ ಬಿಡುಗಡೆಯಾಯಿತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X