For Quick Alerts
  ALLOW NOTIFICATIONS  
  For Daily Alerts

  ಕಾರ್ಟೂನ್ ಚಾನಲ್ 'ಚಿಂಟು' ಟಿವಿ ನಿಮಗೆ ಯಾಕಿಷ್ಟ?

  By Rajendra
  |
  ಸನ್ ನೆಟ್‌ವರ್ಕ್‌ನ, ಕನ್ನಡದ ಮೊದಲ 24 ಗಂಟೆಗಳ ಕಾರ್ಟೂನ್ ಚಾನಲ್ 'ಚಿಂಟು' ಟಿವಿ ಚಿಣ್ಣರಿಗಾಗಿ ಬೇಸಿಗೆ ರಜೆಯ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಬೇಸಿಗೆ ರಜೆಯ ವಿಶೇಷ ಕಾರ್ಯಕ್ರಗಳಲ್ಲಿ ಒಂದಾದ ಚಿಣ್ಣರ ಮನೆಯಲ್ಲಿ ಚಿನ್ನಾರಿ ಯಲ್ಲಿ ಚಿನ್ನಾರಿ ಚಿಂಟು ಪುಟಾಣಿಗಳ ಮನೆಗೆ ಹೋಗಿ ಚೇಷ್ಟೆ ಮಾಡಲಿದ್ದಾನೆ.

  ಇನ್ನೂ ವಿವರವಾಗಿ ಹೇಳಬೇಕೆಂದರೆ : ಚಿನ್ನಾರಿ ಆಂಕರ್ ಗಗನಳ ಜೊತೆ ಚಿಂಟು ಚೇಷ್ಟೆ ಯಲ್ಲಿ ಕಾಣಿಸಿಕೊಂಡು ಚೇಷ್ಟೆ ಮಾಡುವುದನ್ನು ನಾವು ನೀವು ನೋಡ್ತಾನೇ ಇರ್ತೀವಿ. ಅದೇ ಚಿನ್ನಾರಿ ಈಗ ಟಿವಿ ಬಿಟ್ಟು ಹೊರಬಂದು ಚಿಣ್ಣರ ಮನೆಗಳಿಗೆ ಹೋಗಿ ಚೇಷ್ಟೆ ಮಾಡಿದ್ರೆ! ವಾವ್, ಇಂಟರೆಸ್ಟಿಂಗ್ ಆಗಿರುತ್ತೆ ಅಲ್ವಾ?

  ಹೌದು ಚಿಂಟು ಟಿವಿಯಲ್ಲಿ ಚಿಣ್ಣರ ಮನೆಯಲ್ಲಿ ಚಿನ್ನಾರಿ ಸ್ಪರ್ಧೆ ನಡೆಯುತ್ತಿದ್ದು, ಚಿಂಟು ಟಿವಿ ನಿಮಗೆ ಯಾಕಿಷ್ಟ? ಎನ್ನುವುದನ್ನು 60ಪದಗಳಲ್ಲಿ ಬರೆದು ಕಳಿಸಬೇಕು. ಈ ಸ್ಪರ್ಧೆಯಲ್ಲಿ 4 ರಿಂದ 14 ವರ್ಷದೊಳಗಿನ ಮಕ್ಕಳು ಮಾತ್ರ ಭಾಗವಹಿಸಬಹುದಾಗಿದೆ.

  ಆಸಕ್ತಿಕರವಾಗಿ ಬರೆದ ಬರಹಗಳನ್ನು ಚಿನ್ನಾರಿ ಆಯ್ಕೆ ಮಾಡುತ್ತಾನೆ ಮತ್ತು ವಿಜೇತ ಚಿಣ್ಣರ ಮನೆಗೆ ಹೋಗಿ ಅವರೊಂದಿಗೆ ಹಾಡು ಹೇಳುತ್ತಾನೆ, ಡ್ಯಾನ್ಸ್ ಮಾಡುತ್ತಾನೆ, ಚೇಷ್ಟೆ ಮಾಡುತ್ತಾನೆ. ನಿಮ್ಮ ಮನೆಗೂ ಚಿನ್ನಾರಿ ಬರಬೇಕೆಂಬ ಬಯಕೆ ಇದೆಯೇ?

  ಹಾಗಾದ್ರೆ ಇನ್ನೇಕೆ ತಡ? ಬೇಗ ಬೇಗ ನಿಮ್ಮ ಕಾರಣಗಳನ್ನು ಬರೆದು ಚಿಂಟು ಟಿವಿಗೆ ಪೋಸ್ಟ್ ಮಾಡಿ. ವಿಳಾಸ : ಚಿಣ್ಣರ ಮನೆಯಲ್ಲಿ ಚಿನ್ನಾರಿ ಸ್ಪರ್ಧೆ, ಚಿಂಟು ಟಿವಿ. ಅಂಚೆ ಪೆಟ್ಟಿಗೆ ಸಂಖ್ಯೆ 25225. ಬೆಂಗಳೂರು 560025.

  English summary
  Chintu TV (Kids channel) will telecast summer vacation special programs for kids. “Chinnara manege Chinnari” is one of the special the program. Why Chintu TV is your favorite channel? Write about your views on Chintu TV not more than 60 words.Chintu will be visit your home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X