For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ ಬರಲಿದೆ ಕಾಮಪ್ರಚೋದಕ ಟಿವಿ ಚಾನಲ್

  By Rajendra
  |

  ಸದಾ ಹೊಸತನ್ನು ನಿರೀಕ್ಷಿಸುತ್ತಿರುವ ಪ್ರೇಕ್ಷಕರಿಗೆ ಮತ್ತೊಂದು ಹೊಸ ಟಿವಿ ಚಾನಲ್ ಜಗತ್ತಿಗೆ ಅಡಿಯಿಡುತ್ತಿದೆ. ಫ್ಯಾಷನ್ ಟಿವಿಗಿಂತಲೂ ಇನ್ನೂ ಒಂದು ಹೆಜ್ಜೆ ಮುಂದಿರುವ ಈ ಟಿವಿ ಕಾಮಪ್ರಚೋದಕ ಅಂಶಗಳನ್ನು ಹೊತ್ತು ತರಲಿದೆ. ಆದರೆ ಈ ಟಿವಿ ಜನ್ಮ ತಾಳುತ್ತಿರುವುದು ಭಾರತದಲ್ಲಂತೂ ಅಲ್ಲ ಯೂರೋಪ್‌ನಲ್ಲಿ. ಮೆನ್ಸ್ ಮ್ಯಾಗಜಿನ್‌ ಪೆಂಟ್‌ಹೌಸ್ ಈ ಹೊಸ ಚಾನಲ್ ಹೆತ್ತವರು.

  ಇದು ಅಂತಿಂಥ ಟಿವಿಯಲ್ಲ. ಇಲ್ಲಿನ ಪ್ರತಿಯೊಂದು ದೃಶ್ಯವನ್ನು ತ್ರಿಡಿಯಲ್ಲಿ ಸವಿಯಬಹುದು. ತಿಂಗಳಿಗೆ ಒಟ್ಟು 30 ಗಂಟೆಗಳ ಕಾಮಪ್ರಚೋದಕ ಮಾಹಿತಿ ಬಿತ್ತರವಾಗಲಿದೆ. ಈ ಚಾನಲ್ ಕೇವಲ ವಯಸ್ಕರಿಗೆ ಮಾತ್ರ ಎಂಬುದು ನಿಮ್ಮ ಗಮನಕ್ಕಿರಲಿ. ಪೆಂಟ್‌ಹೌಸ್ ತ್ರಿಡಿ ಚಾನಲ್‌ನ ಮತ್ತೊಂದು ವಿಶೇಷ ಎಂದರೆ, ಸಾಫ್ಟ್ ಕೋರ್ ಮತ್ತು ಹಾರ್ಡ್ ಕೋರ್ ಕಾಮಪ್ರಚೋದಕ ಮಾಹಿತಿ ಈ ಚಾನಲ್ಲಿನಲ್ಲಿ ಪ್ರಸಾರ ಭಾಗ್ಯ ಕಾಣಲಿದೆ ಎಂದಿದ್ದಾರೆ ಪೆಂಟ್ ಹೌಸ್ ಮೀಡಿಯಾ ಹೌಸ್‌ನ ಮಾರ್ಕ್ ಬೆಲ್.

  ಈ ಚಾನಲ್ ಬಗ್ಗೆ ಈಗಾಗಲೆ ಪ್ರೇಕ್ಷಕರು ಕಾತುರದಿಂದ ಎದುರು ನೋಡುತ್ತಿದ್ದಾರಂತೆ. ಈಗಾಗಲೆ ಭರದಿಂದ ತ್ರಿಡಿ ಗುಣಮಟ್ಟದ ಚಿತ್ರೀಕರಣ ನಡೆಯುತ್ತಿದ್ದು ಮುಂಬರುವ ಜನವರಿ ಹೊತ್ತಿಗೆ ಚಾನಲ್ ಕಣ್ಬಿಡಲಿದೆ ಎಂದಿದೆ ಪೆಂಟ್ ಹೌಸ್ ಮೀಡಿಯಾ ಗ್ರೂಪ್. ಕಿರುತೆರೆ ಕ್ಷೇತ್ರದಲ್ಲಿ ಪೆಂಟ್‌ಹೌಸ್ ತ್ರಿಡಿ ಚಾನಲ್ ಒಂದು ಹೊಸ ಬೆಳವಣಿಗೆ ಎಂದೇ ಹೇಳಬೇಕು.

  English summary
  The men's magazine Penthouse is set to launch the world's first 3D porn television channel in Europe. Penthouse said that the station will broadcast full 3D in high definition, streaming 30 hours of programming monthly, and the network's original, adult-oriented programming will include "both soft-core and hard-core feeds."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X