ಕಿರುತೆರೆ ಕಲಾವಿದೆ ಶ್ರೀಗೌರಿ ನಿಗೂಢ ಸಾವು

ಶನಿವಾರ ಟಿವಿ ಮಾಧ್ಯಮಗಳಲ್ಲಿ ನಿದ್ರೆ ಮಾತ್ರೆ ಸೇವಿಸಿ ಶಬನಾ ಅಲಿಯಾಸ್ ಶ್ರೀಗೌರಿ(26) ಸಾವನ್ನಪ್ಪಿರುವ ಸುದ್ದಿ ಪ್ರಸಾರವಾಗಿತ್ತು. ಮಹಾನವಮಿ, ಪಾರ್ವತಿ ಪರಮೇಶ್ವರ ಧಾರಾವಾಹಿಯಲ್ಲಿ ಶ್ರೀಗೌರಿ ನಟಿಸಿದ್ದಾರೆ.
ಮೂಲತಃ ಹಿರಿಯೂರಿನವರಾದ ಶ್ರೀಗೌರಿ ಅವರು ಸುಬ್ರಮಣ್ಯ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗಾಯತ್ರಿನಗರದ ಪಿಜಿ ಹಾಸ್ಟೆಲ್ ನಲ್ಲಿ ವಾಸವಾಗಿದ್ದರು. ಒಂದೂವರೆ ವರ್ಷದ ಕೆಳಗೆ ನಾಗರಾಜ್ ಎಂಬುವರನ್ನು ಮದುವೆಯಾಗಿದ್ದರು.
ಪತಿ ಹಿರಿಯೂರಿನಲ್ಲೇ ನೆಲೆಸಿದ್ದರು. ಶುಕ್ರವಾರ ಊರಿಗೆ ಹೋಗಿ ಬಂದಿದ್ದ ಶ್ರೀಗೌರಿ ಮತ್ತೆ ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶನಿವಾರ ಎಷ್ಟು ಹೊತ್ತಾದರೂ ಮೊಬೈಲ್ ಕರೆ ಸ್ವೀಕರಿಸದಿದ್ದಾಗ ಶ್ರೀಗೌರಿ ಪಿಜಿಗೆ ಪತಿ ನಾಗರಾಜ್ ಕರೆ ಮಾಡಿದ್ದಾರೆ.
ನಂತರ ಗೆಳತಿಯರು ಶ್ರೀಗೌರಿ ರೂಮ್ ಗೆ ಬಂದು ನೋಡಿದಾಗ ಶ್ರೀಗೌರಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸುಬ್ರಮಣ್ಯ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.
More from Filmibeat
English summary
Kananda TV Actress Shabana alias Sri Gowri(26) death mystery is yet to be solved. SriLakshmi allegedly committed suicide at Rajajinagar Hostel last night(Oct.1). But family sources say she had died due to Epilepsy disorder.0


Click it and Unblock the Notifications











