ಮಿಲನ ಪ್ರಕಾಶ್ ಈಗ ಕಿರುತೆರೆಯಲ್ಲಿ ಪ್ರಕಾಶಮಾನ

By Vinayakaram Kalagaru

ಮಿಲನ ಚಿತ್ರದ ನಿರ್ದೇಶಕ ಪ್ರಕಾಶ್ ಕಿರುತೆರೆ ಲೋಕದಲ್ಲಿ ಸಕ್ಸಸ್ ಆಗಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಲಕುಮಿ' ಸೀರಿಯಲ್ ಸುವರ್ಣ ವಾಹಿನಿಯ ಟೀಆರ್‌ಪಿ ರೇಟ್ ಹೆಚ್ಚಿಸಿದೆ. ಒಂದು ಧಾರಾವಾಹಿ ಸಕ್ಸಸ್ ಆಗಿದ್ದೇ ತಡ, ಅವರಿಗೆ ವಾಹಿನಿಯವರು ಕರೆದು ಇನ್ನೊಂದು ಧಾರಾವಾಹಿ ಕೊಟ್ಟಿದ್ದಾರೆ. ಅದೇ ಬೊಂಬೆಯಾಟವಯ್ಯ...

ಈ ಧಾರಾವಾಹಿಯೂ ತಕ್ಕ ಮಟ್ಟಿಗೆ ಹೆಸರು ಮಾಡಿ, ಜನರನ್ನು ಆಕರ್ಷಿಸುತ್ತಿದೆ. ಹಾಗಾದರೆ ಮಿಲನ ಪ್ರಕಾಶ್ ಸಕ್ಸಸ್ ಫಾರ್ಮುಲಾ ಏನು? ಈ ಪ್ರಶ್ನೆಗೆ ಉತ್ತರ-ನಿಜವಾದ ಕೆಲಸಗಾರನಿಗೆ ಕರೆದು ಕೈತುಂಬಾ ಕೆಲಸ ಕೊಡುವುದು! ಹೌದು, ಪ್ರಕಾಶ್ ತಮ್ಮ ಇನ್ನೊಂದು ಧಾರಾವಾಹಿ 'ಬೊಂಬೆಯಾಟವಯ್ಯ'ಕ್ಕೆ ಸಂಚಿಕೆ ನಿರ್ದೇಶನ ಮಾಡಲು ಕೈಲಾಶ್ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಹತ್ತಾರು ನಿರ್ದೇಶಕರ ಬಳಿ ಕೆಲಸ ಮಾಡಿದ್ದರೂ ಕೈಲಾಶ್ ಅವರಿಗೆ ಸಂಚಿಕೆ ನಿರ್ದೇಶಕರಾಗುವ ಭಾಗ್ಯ ಸಿಕ್ಕಿರಲಿಲ್ಲ.

ಎಲ್ಲರೂ ಅವರ ಟ್ಯಾಲೆಂಟ್‌ಅನ್ನು ಬಳಸಿಕೊಂಡು, ತಾವು ಮೆರೆದಿದ್ದರು. ಆದರೆ, ಪ್ರಕಾಶ್ ಮಾತ್ರ ಅವರನ್ನು, ಅವರ ಕೆಲಸವನ್ನು ನಿಯತ್ತಾಗಿ ಬಳಸಿಕೊಳ್ಳುತ್ತಿದ್ದಾರೆ. ಮತ್ತು ಅದೇ ಧಾರಾವಾಹಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ!ಅಂದಹಾಗೇ ಪ್ರಕಾಶ್ ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು, ಹಣ ಎರಡನ್ನೂ ಮಾಡುತ್ತಿದ್ದಾರೆ. ಗೋಕುಲ ಚಿತ್ರರಂಗದ ನಂತರ ಅವರನ್ನು ಕನ್ನಡ ಚಿತ್ರರಂಗ ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ!

More from Filmibeat

English summary
Kannada film director Prakash busy in Suvarna TV. The half-hour show is being produced by Jai Mata Combines, a home banner of Kannada film director Prakash. Prakash has made hit movies such as Kushi, Rishi and Milana, as well as a popular Kannada teleserial ‘Lakumi’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X