For Quick Alerts
  ALLOW NOTIFICATIONS  
  For Daily Alerts

  ಫೆ.12ಕ್ಕೆ ಪಬ್ಲಿಕ್ ಟಿವಿ ಆರಂಭ, ರಂಗಣ್ಣ ಆಹ್ವಾನ

  By Mahesh
  |

  ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್ ಟಿವಿ ಗುರುವಾರ (ಜ.26) ರಿಪಬ್ಲಿಕ್ ಡೇ ದಿನ ಪರೀಕ್ಷಾರ್ಥ ಪ್ರಸಾರ ಆರಂಭಿಸಿರುವುದು, ರಾಜಕೀಯ ಧುರೀಣರು, ಸಾಹಿತಿಗಳು, ಸಿನಿಮಾ ತಾರೆಗಳು ಶುಭ ಹಾರೈಸಿರುವುದನ್ನು ನೋಡಿರುತ್ತೀರಿ..

  ಜೊತೆಗೆ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರ ಅರಿಕೆ, ಕಾರ್ಯಕ್ರಮಗಳ ಪ್ರೊಮೋಗಳನ್ನು ನೋಡಿರಬಹುದು. ಆದರೆ, ಪರೀಕ್ಷಾರ್ಥ ಪ್ರಸಾರ ಯಾವಾಗ ಮುಕ್ತಾಯ. ಪೂರ್ಣಪ್ರಮಾಣದ ಸುದ್ದಿ ಪ್ರಸಾರ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಗ್ಗೆ ಎಚ್ ಆರ್ ರಂಗನಾಥ್ ಅವರು ಫೇಸ್ ಬುಕ್ ಮೂಲಕ ನೀಡಿರುವ ಆಹ್ವಾನ ಈ ರೀತಿ ಇದೆ:

  ನಮಸ್ಕಾರ, ಆತ್ಮೀಯರೇ,

  ಜನರಿಗಾಗಿ, ಜನರಿಗೋಸ್ಕರ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್ ಟಿವಿ ಆರಂಭಗೊಳ್ಳುತ್ತಿದೆ. ಈ ಸಾಹಸದಲ್ಲಿ ಸದಾ ನೀವು ನಮ್ಮೊಂದಿಗೆ ಇದ್ದೀರಿ ಎಂಬ ವಿಶ್ವಾಸ, ನಂಬಿಕೆ ನಮಗಿದೆ. ಆದ್ದರಿಂದಲೇ, ತಾವು ದಯಮಾಡಿ ಫೆ.10, 2012ರಂದು ಸ್ವಲ್ಪ ಪುರುಸೊತ್ತು ಮಾಡಿಕೊಳ್ಳಿ.(ನಂತರ ಫೆ.12ಕ್ಕೆ ಬದಲಾಯಿತು)

  ನಮ್ಮ ಕಚೇರಿಗೆ ಬನ್ನಿ, ಕಾರ್ಯಕ್ರಮ, ಟೇಪ್ ಕಟ್ಟಿಂಗ್ ಯಾವುದೂ ಇಲ್ಲ, ಹಾಗಾಗಿ ಬೆಳಿಗ್ಗೆ 10 ರಿಂದ ರಾತ್ರಿ 10 ರ ವರೆಗೆ ಯಾವಾಗಲಾದರೂ 10 ನಿಮಿಷ ಬಂದರೆ ನಿಮ್ಮ ಆಗಮನವೇ ನಮಗೆ ಆನೆಯ ಬಲ ತರುತ್ತದೆ.

  ದಯಮಾಡಿ ಮರೆಯಬೇಡಿ-ಫೆ.10, 2012
  - ಎಚ್ ಆರ್ ರಂಗನಾಥ್, ಮುಖ್ಯಸ್ಥರು , ಆಡಳಿತ ನಿರ್ದೇಶಕರು, ಪಬ್ಲಿಕ್ ಟಿವಿ

  ಪಬ್ಲಿಕ್ ಟಿವಿ ವಿಳಾಸ: Writmen Media Private Limited
  TTMC, BMTC building, Yeshwanthpur Circle, Bangalore-560 022
  ದೂ: +91 80 2357 4041

  English summary
  Public TV a Kannada news channel has started its test run on 26 January. Public TV fan page in facebook has invitation from Chairman and Managing director of Public TV HR Ranganath in which he has openly invited public to join launch party on Feb.12.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X