ಶನಿವಾರ (ಡಿ.3) ಯಾವ ಟಿವಿಯಲ್ಲಿ ಯಾವ ಸಿನಿಮಾ?

By Rajendra

Veera Madakari on Suvarna
ಈ ಶನಿವಾರ (ಡಿ.3) ಕಸ್ತೂರಿ, ಈಟಿವಿ ಕನ್ನಡ, ಸುವರ್ಣ, ಉದಯ ಮೂವೀಸ್, ಜೀ ಕನ್ನಡ, ಉದಯ ಟಿವಿ, ಚಂದನದಲ್ಲಿ ಯಾವ ಸಿನಿಮಾ ಮೂಡಿಬರಲಿದೆ ಎಂಬ ಮಾಹಿತಿ ಒನ್‌ಇಂಡಿಯಾ ಕನ್ನಡ ನೀಡುತ್ತಿದೆ. ನಿಮಗಿಷ್ಟವಾದ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿ. ನಮಗೂ ತಿಳಿಸಿ. ಸಾಧ್ಯವಾದರೆ ">ಚಿತ್ರವಿಮರ್ಶೆಯನ್ನೂ ಬರೆದುಕಳುಹಿಸಿ.

ಜೀ ಕನ್ನಡ: ರಜನಿ ಚಿತ್ರವನ್ನು ಸಂಜೆ 5.30ಕ್ಕೆ ಸರಿಯಾಗಿ ಕಾಫಿ ಸಮೇತ ನೋಡಬಹುದು. ಉಪೇಂದ್ರ ಅಭಿನಯದ ಚಿತ್ರವಿದು. ರಾತ್ರಿ 11ಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ ಚಿತ್ರ ಪ್ರಸಾರವಾಗಲಿದೆ. ಭಾವನಾ ಚಿತ್ರದ ಕೇಂದ್ರಬಿಂದು. ಚಿತ್ರಕಲಾವಿದೆಯಾದ ಶಾಂತಿಯನ್ನು ಉಗ್ರರು ಅಪಹರಿಸುತ್ತಾರೆ. ಬಳಿಕ ಏನಾಗುತ್ತದೆ? ಚಿತ್ರ ನೋಡಿ.

ಸುವರ್ಣ ವಾಹಿನಿ: ಶನಿವಾರ ಸಂಜೆ 4.30ಕ್ಕೆ ಸುದೀಪ್, ರಾಗಿಣಿ ಅಭಿನಯದ ವೀರಮದಕರಿ ಚಿತ್ರ ಪ್ರಸಾರವಾಗಲಿದೆ. ಸಾವಂದ್ರೆ ಭಯ ಪಡೋಕೆ ಅಲಾಲ್ ಟೋಪಿ ಅಂದುಕೊಂಡ್ರಾ... ಮದಕರಿ... ವೀರ ಮದಕರಿ... ಗಡಗಡ ಗಡಗಡಗಡಗ (ಇದು ಹಿನ್ನೆಲೆ ಸಂಗೀತ). ಚಿತ್ರ ವಿಮರ್ಶೆಯನ್ನೂ ಒಮ್ಮೆ ಓದಿ ನೋಡಿ.

ಉದಯ ಟಿವಿ: ಸಂಜೆ 3ಕ್ಕೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಮೋಹಿನಿ 9886788888. ಈ ಚಿತ್ರ ಮುಗಿಯುತ್ತಿದ್ದಂತೆ ಸಂಜೆ 6ಕ್ಕೆ ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಪ್ರಸಾರವಾಗಲಿದೆ. ಇದಕ್ಕೂ ಮುನ್ನ ಮಧ್ಯಾಹ್ನ 12ಕ್ಕೆ ಯೋಗೀಶ್ ಹುಣಸೂರು ನಿರ್ದೇಶನದ ರಾವಣ ಚಿತ್ರವನ್ನು ನೋಡಬಹುದು.

ಡಿಡಿ ಚಂದನ: ಕೆ ವಿ ಜಯರಾಮ್ ನಿರ್ದೇಶನದ ಗಾಜಿನ ಮನೆ ಚಿತ್ರ ಸಂಜೆ 4ಕ್ಕೆ ಪ್ರಸಾರವಾಗಲಿದೆ. ಪಾತ್ರವರ್ಗದಲ್ಲಿ ಬಬ್ಲು, ಕೃಷ್ಣೇಗೌಡ, ಪ್ರೇಮ ಅಭಿನಯಿಸಿದ್ದಾರೆ.

ಉದಯ ಮೂವೀಸ್: ಬೆಳಗ್ಗೆ 7ಕ್ಕೆ ಹಳ್ಳಿಯಾದರೇನು ಶಿವ. ಬೆಳಗ್ಗೆ 10ಕ್ಕೆ ಸಾಗರಿ. ಸಂಜೆ 4ಕ್ಕೆ ನನ್ನ ಪ್ರೀತಿಯ ಹುಡುಗಿ. ಸಂಜೆ 7.30ಕ್ಕೆ ಲಾಕಪ್ ಡೆತ್ ಚಿತ್ರಗಳು ಪ್ರಸಾರವಾಲಿವೆ.

ಕಸ್ತೂರಿ: ಮೇಯರ್ ಮುತ್ತಣ್ಣ ಚಿತ್ರ ಬೆಳಗ್ಗೆ 10ಕ್ಕೆ ಹಾಗೂ ಅಯ್ಯ ಚಿತ್ರ ಸಂಜೆ 3ಕ್ಕೆ ಪ್ರಸಾರವಾಗಲಿದೆ. ದರ್ಶನ್ ಹಾಗೂ ರಕ್ಷಿತಾ ಅಭಿನಯದ ಅಯ್ಯ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ. ಖಡಕ್ ಪೊಲೀಸ್ ಅಧಿಕಾಯೊಬ್ಬನ ಕತೆಯನ್ನು ಅಯ್ಯ ಚಿತ್ರ ಒಳಗೊಂಡಿದೆ.

ಈಟಿವಿ ಕನ್ನಡ: ಬೆಳಗ್ಗೆ 10.5ಕ್ಕೆ ಸರಿಯಾಗಿ ಆರ್ಯಭಟ ಚಿತ್ರ ಪ್ರಸಾರವಾಗಲಿದೆ. ರಮೇಶ್ ಹಾಗೂ ಸೌಂದರ್ಯ ಅಭಿನಯದ ಈ ಚಿತ್ರ ವಿಜ್ಞಾನಿಯೊಬ್ಬನ ಕೊಲೆಯ ಸುತ್ತ ಸುತ್ತುತ್ತದೆ. ಆಸಕ್ತಿದಾಯವಾಗಿರುವ ಈ ಚಿತ್ರ ಕುತೂಹಲ ಮೂಡಿಸುತ್ತಾ ಸಾಗುತ್ತದೆ. (ಒನ್‍ಇಂಡಿಯಾ ಕನ್ನಡ)

More from Filmibeat

English summary
The details about Kannada tv channels to air movies on Dec 3rd Saturday. Udaya TV, Udaya movies, Zee Kannada, Kasthuri, Etv Kannada, Suvarna, DD Chandana TV channels movie time schedule.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X