ಜೀ ಕನ್ನಡದಲ್ಲಿ ಪ್ರತಿ ನಿತ್ಯ ಬೆಂಕಿಯಲಿ ಅರಳಿದ ಹೂ

By Mahesh

1983ರಲ್ಲಿ ತೆರೆಕಂಡ ಬೆಂಕಿಯಲ್ಲಿ ಅರಳಿದ ಹೂ ಚಿತ್ರದ ಶೀರ್ಷಿಕೆ ಬಳಸಿಕೊಂಡು ನಟಿ ಪದ್ಮಜಾ ರಾವ್ ಅವರು ಹೊಸ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಜುಲೈ 4 ರಿಂದ ಪ್ರತಿ ನಿತ್ಯ ರಾತ್ರಿ 8 ಗಂಟೆಗೆ ಜೀ ಕನ್ನಡ ಟಿವಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂ ಧಾರಾವಾಹಿ ಪ್ರಸಾರವಾಗಲಿದೆ. ಯಶ್, ಪೂಜಾಗಾಂಧಿ, ದೊಡ್ಡಣ್ಣ, ಲಕ್ಷ್ಮಣ್, ಜಯಂತಿ ಸೇರಿದಂತೆ ಅನೇಕ ಹೆಸರಾಂತ ನಟ,ನಟಿಯರು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನಸಿನ ಕಣ್ಮಣಿ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿದ್ದ ನಿತ್ಯಾ ಈ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿದ್ದಾರೆ.30 ಎಪಿಸೋಡುಗಳು ಈಗಾಗಲೇ ರೆಡಿ ಇದೆ. ಇನ್ನೂ 70 ಎಪಿಸೋಡುಗಳಷ್ಟು ಚಿತ್ರಕಥೆ ಮುಂದುವರೆಯಲಿದೆ ಎಂದು ಪದ್ಮಜಾ ರಾವ್ ಹೇಳಿದ್ದಾರೆ.

ಈ ಧಾರಾವಾಹಿ ಮೂಲಕ ಬಿದ್ದು ಹೋಗಿರುವ ಜೀ ಕನ್ನಡ ಟಿಆರ್ ಪಿ ರೇಟಿಂಗ್ ಹೆಚ್ಚಿಸಲು ಸಾಕಷ್ಟು ಶ್ರಮ ಪಡಲಾಗುತ್ತಿದೆ. ಅನಂತ್ ನಾಗ್ ಸೇರಿದಂತೆ ಪ್ರಸಿದ್ಧ ನಟ ನಟಿಯರು ಈ ಸೀರಿಯಲ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಪ್ರೇಕ್ಷಕರ ಕುತೂಹಲ ಕೆರಳಿಸಲು ಟ್ರೈಲರ್ ಗಳನ್ನು ಬಳಸಲಾಗುತ್ತಿದೆ. ಫೇಸ್ ಬುಕ್ ನಲ್ಲೂ ಬೆಂಕಿಯಲ್ಲಿ ಅರಳಿದ ಹೂ ಕಾಣಿಸಿಕೊಂಡಿದೆ.

More from Filmibeat

English summary
Benkiyalli Aralidha Hoo TV Serial goes on air from 4th of July 2011 at 8 pm in Zee Kannada TV. This serial is Padmaja Rao's maiden directorial venture in small screen and she also produced it. Pooja Gandhi, Yash, Doddanna, Lakshman are likely to be appear in serial which has Nithya in the lead role
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X