ಬಿಗ್ ಬಾಸ್ ನಲ್ಲಿ 14 ಜನ ಬೆಡಗಿಯರಿಗೆ ಶಕ್ತಿ ಎದುರಾಳಿ

By Mahesh

Bigg boss 5 opening
ಬಹು ನಿರೀಕ್ಷಿತ ರಿಯಾಲಿಟಿ ಷೋ ಬಿಗ್ ಬಾಸ್ ಮತ್ತೆ ಆರಂಭಗೊಂಡಿದೆ. ಸಲ್ಮಾನ್ ಖಾನ್ ಹಾಗೂ ಸಂಜತ್ ದತ್ ಸಾರಥ್ಯದಲ್ಲಿ ಅ.2ರಂದು ಕರ್ಜಾತ್ ನ ಮನೆಗೆ ಸ್ಪರ್ಧಾಳುಗಳು ಕಾಲಿಟ್ಟರು.

ಶಿವಸೇನೆಯಿಂದ ಪ್ರತಿಭಟನೆ ಎದುರಿಸಿದ್ದ ಲೊನಾವಾಲಾ ಮನೆ ವಾಸ್ತು ಸರಿ ಹೊಂದಲಿಲ್ಲ ಎಂಬ ಕಾರಣಕ್ಕೋ ಏನೋ ಹೊಸ ಮನೆಗೆ ಹೊಸ ಸ್ಪರ್ಧಾರ್ಥಿಗಳು ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ 4 ರಲ್ಲಿ ಏಳು ಜನ ಪುರುಷರು, ಏಳು ಜನ ಮಹಿಳೆಯರು ಮನೆಯಲ್ಲಿದ್ದರು. ಆದರೆ, ಈಗ 14 ಜನ ಮಹಿಳೆಯರ ಜೊತೆ ಖ್ಯಾತ ವಿಲನ್ ಶಕ್ತಿ ಕಪೂರ್ ಎಂಟ್ರಿ ಕೊಟ್ಟಿದ್ದಾರೆ.

ಬೆಡಗಿಯರ ದಂಡು : ನಟಿ ಪೂಜಾ ಬೇಡಿ, ಪಾಪ್ ಗಾಯಕಿ ರಾಗೇಶ್ವರಿ ಲೂಂಬಾ, ಶ್ರದ್ಧಾ ಶರ್ಮ, ಶೊನಾಲಿ ನಾಗ್ರಾಣಿ, ಮಹೇಕ್ ಛಾಹಾಲ್, ಜೂಹಿ ಪರ್ಮಾರ್, ನಿಹಿತಾ ಬಿಸ್ವಾಸ್(ಚಾರ್ಲ್ಸ್ ಶೋಭರಾಜ್ ಗೆಳತಿ), ಲಕ್ಷ್ಮಿ ನಾರಾಯಣ ತ್ರಿಪಾಠಿ(trans-gender), ಸೋನಿಕಾ ಕಲಿರಮನ್, ಅಫ್ಘಾನ್ ಬೆಡಗಿ ವಿದಾ ಸಮ್ದಜೈ, ವಿಜೆ ಪೂಜಾ ಮಿಶ್ರಾ, ಡ್ಯಾನ್ಸರ್ ಗುಲಾಬಿ ಸಪೆರಾ ಹಾಗೂ ನಿರೂಪಕಿ ಮಂದೀಪ್ ಬೆಳ್ವಿ ಜತೆ ಶಕ್ತಿ ಕಪೂರ್ ಮಾತ್ರ ಏಕೈಕ ಪುರುಷ ಅಭ್ಯರ್ಥಿಯಾಗಿದ್ದಾರೆ.

ಮೂರು ತಿಂಗಳುಗಳ ಕಾಲ 55 ಕೆಮೆರಾಗಳ ಅಡಿಯಲ್ಲಿ ಮನೆಯಲ್ಲಿ ಬಂಧಿಯಾಗಿರುತ್ತಾರೆ. ಗೃಹಕೃತ್ಯ ಕೆಲಸದ ಜೊತೆಗೆ ಬಿಗ್ ಬಾಸ್ ಹೇಳುವ ನಿಯಮಗಳನ್ನು ಸ್ಪರ್ಧೆಯಲ್ಲಿ ಇರುವ ಎಲ್ಲರೂ ತಪ್ಪದೇ ಪಾಲಿಸಬೇಕು.

ಇದಲ್ಲದೆ, ಮೈಕ್ ಟೈಸನ್, ಶಕೀರಾ, ಜಾಂಟಿ ರೋಡ್ಸ್ ಕೂಡಾ ಮನೆಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಆದರೆ, ಬಿಚ್ಚಮ್ಮ ಪೂನಮ್ ಪಾಂಡೆ ಹೆಸರು ಮಾತ್ರ ಪಟ್ಟಿಯಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲದಿರುವುದು ಅಭಿಮಾನಿಗಳಿಗೆ ನಿರಾಶೆಯಾಗಿದೆ.

More from Filmibeat

English summary
The much-anticipated fifth season of the reality show Bigg Boss has finally kick-started in a different format on Sunday, 2nd October. Bigg Boss house has been shifted from Lonavala to Karjat. Salman Khan and Sanjay Dutt are co hosting the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X