ಭಾನುವಾರ (ಡಿ.4) ಕಿರುತೆರೆಯಲ್ಲಿ ಚಲನಚಿತ್ರೋತ್ಸವ

By Rajendra

ಈ ಭಾನುವಾರ(ಡಿ.4) ಸಮಸ್ತ ಕನ್ನಡಿಗರು ಮನೆಯಲ್ಲೇ ಚಲನಚಿತ್ರೋತ್ಸವ ಆಚರಿಸಿಕೊಳ್ಳಬಹುದು. ಹತ್ತಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳು ವಿವಿಧ ಟಿವಿ ವಾಹಿನಿಗಳಲ್ಲಿ ಈ ವಾರ ಪ್ರಸಾರವಾಗಲಿವೆ. ಇದೊಂದು ರೀತಿ ಪ್ರತಿ ಭಾನುವಾರ ನಡೆಯುವ ಚಲನಚಿತ್ರೋತ್ಸವ. ಕಸ್ತೂರಿ, ಈಟಿವಿ ಕನ್ನಡ, ಸುವರ್ಣ, ಉದಯ ಮೂವೀಸ್, ಜೀ ಕನ್ನಡ, ಉದಯ ಟಿವಿ, ಚಂದನದಲ್ಲಿ ಯಾವ ಸಿನಿಮಾ ಮೂಡಿಬರಲಿದೆ ಎಂಬ ಮಾಹಿತಿ ಇಲ್ಲಿದೆ. ನಿಮಗಿಷ್ಟವಾದ ಚಿತ್ರ ನೋಡಿ ಆನಂದಿಸಿ. ಯಾವ ಚಿತ್ರ ಇಷ್ಟವಾಯ್ತು ಎಂದು ">ನಮಗೂ ತಿಳಿಸಿ.

ಕಸ್ತೂರಿ: 2003ರಲ್ಲಿ ತೆರೆಕಂಡಿದ್ದ ಪುನೀತ್ ರಾಜ್ ಕುಮಾರ್ ಹಾಗೂ ರಮ್ಯಾ ಅಭಿನಯದ ಯಶಸ್ವಿ ಚಿತ್ರ 'ಅಭಿ' ಸಂಜೆ 3ಕ್ಕೆ ಪ್ರಸಾರವಾಗಲಿದೆ. ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದರು. ನಿರ್ದೇಶನ ದಿನೇಶ್ ಬಾಬು.

ಈಟಿವಿ ಕನ್ನಡ: ರೆಬಲ್ ಸ್ಟಾರ್ ಅಂಬರೀಷ್, ಲಕ್ಷ್ಮಿ ಹಾಗೂ ಪ್ರಣಯರಾಜ ಶ್ರೀನಾಥ್ ಅಭಿನಯದ 'ಟೋನಿ' ಚಿತ್ರ ಸಂಜೆ 3ಕ್ಕೆ ಪ್ರಸಾರವಾಗಲಿದೆ. ಪ್ರೀತಿಸುತ್ತಿರುವ ಯುವಕ ಆಕ್ಸಿಡೆಂಟ್‌ನಲ್ಲಿ ಸಾವಪ್ಪುತ್ತಾನೆ. ಇದರಿಂದ ಆಘಾತಕ್ಕೊಳಗಾಗುವ ಯುವತಿ ಮಾನಸಿಕವಾಗಿ ಅಸ್ವಸ್ಥಳಾಗುತ್ತಾಳೆ. ಈಕೆಯನ್ನು ಮತ್ತೊಬ್ಬ ಯುವಕ ಪ್ರೀತಿಸಿಸುತ್ತಾನೆ. ಬಳಿಕ ಏನಾಗಲಿದೆ ಎಂಬುದೇ ಚಿತ್ರದ ಕಥಾವಸ್ತು.

ಉದಯ ಮೂವೀಸ್: ಬೆಳಗ್ಗೆ 7ಕ್ಕೆ ಶಂಕರನಾಗ್, ಫೈಟರ್ ಶೆಟ್ಟಿ, ಸುಂದರಕೃಷ್ಣ ಅರಸ್ ಅಭಿನಯದ ಕೆ ವಿಜಯನ್ ನಿರ್ದೇಶನದ 'ರುಸ್ತುಂ' ಚಿತ್ರ ಪ್ರಸಾರವಾಗಲಿದೆ. ಬೆಳಗ್ಗೆ 10ಕ್ಕೆ 'ಸೂತ್ರಧಾರ' ಹಾಗೂ ಮಧ್ಯಾಹ್ನ 1ಕ್ಕೆ ಮುರಳಿದೇವಿ ಹಾಗೂ ರಕ್ಷಿತಾ ಮುಖ್ಯಭೂಮಿಕೆಯಲ್ಲಿರುವ 'ಯಶವಂತ್' ಚಿತ್ರ. ಸಂಜೆ 4ಕ್ಕೆ ಬುಲ್ಲೆಟ್ ಪ್ರಕಾಶ್, ನೀರಜ್ ಶಾಮ್, ಪೂಜಾಗಾಂಧಿ, ಪ್ರಜ್ಞಾ ಅಭಿನಯದ 'ಆಪ್ತ'. ಸಂಜೆ 7.30ಕ್ಕೆ ಬಿರುಗಾಳಿ ಚಿತ್ರಗಳು ಪ್ರಸಾರವಾಗಲಿವೆ.

ಜೀ ಕನ್ನಡ: ಸಂಜೆ 5.30ಕ್ಕೆ ಆದಿತ್ಯಾ, ದರ್ಶನ್, ಲಕ್ಷ್ಮಿ ಅಭಿನಯದ 'ಸ್ನೇಹಾನಾ ಪ್ರೀತಿನಾ' ಚಿತ್ರ ಪ್ರಸಾರವಾಗಲಿದೆ. ರಾತ್ರಿ 11ಕ್ಕೆ 'ಸಂಘರ್ಷ' ಚಿತ್ರ ಪ್ರಸಾರವಾಗಲಿದೆ. ಬಸವರಾಜ್ ಕೆಸ್ತೂರ್ ನಿರ್ದೇಶನದ ಈ ಚಿತ್ರದಲ್ಲಿ ರಾಜವರ್ಧನ್, ಶ್ರೀಲಲಿತಾ, ಅರಿಕೇಸರಿ ಮುಂತಾದವರಿದ್ದಾರೆ.

ಡಿಡಿ ಚಂದನ: ಸಂಜೆ 4ಕ್ಕೆ 'ಗೆಳೆಯ ಗೆಳೆಯ' ಚಿತ್ರ ಪ್ರಸಾರವಾಗಲಿದೆ. ಅಕ್ಷಯ್ ಕೃಷ್ಣ, ಸ್ವರ್ಣಮಲ್ಯ ಮುಖ್ಯಭೂಮಿಕೆಯಲ್ಲಿರುವ ಚಿತ್ರವನ್ನು ಕೃಷ್ಣಾರೆಡ್ಡಿ ನಿರ್ದೇಶಿಸಿದ್ದಾರೆ.

ಉದಯ ಟಿವಿ: ಮಧ್ಯಾಹ್ನ 12ಕ್ಕೆ ಪೂಜಾಗಾಂಧಿ, ರಶ್ಮಿ, ಬಾಲು, ನಾಗಕಿರಣ್ ಅಭಿನಯದ ಅನು ಚಿತ್ರ ಪ್ರಸಾರವಾಗಲಿದೆ. ಶಿವ ಗಣಪತಿ ನಿರ್ದೇಶನದ ಚಿತ್ರವಿದು. ಸಂಜೆ 3ಗಂಟೆಗೆ ಪ್ರೇಮಾ, ರಂಭಾ ಹಾಗೂ ರವಿಚಂದ್ರನ್ ಅಭಿನಯದ 'ಪಾಂಡುರಂಗ ವಿಠಲ' ಚಿತ್ರ ಪ್ರಸಾರವಾಗಲಿದೆ. ಸಂಜೆ 6ಕ್ಕೆ 'ಚಿರು' ಚಿತ್ರ ಪ್ರಸಾರವಾಗಲಿದೆ.

ಸುವರ್ಣ ಟಿವಿ: ಸಂಜೆ 4.30ಕ್ಕೆ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಪೊರ್ಕಿ'. ಮಧ್ಯಾಹ್ನ 1ಕ್ಕೆ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಂಗಾರುಮಳೆ' ಚಿತ್ರವನ್ನು ನೋಡಬಹುದು. (ಒನ್‌ಇಂಡಿಯಾ ಕನ್ನಡ)

More from Filmibeat

English summary
The details about Kannada tv channels to air movies on Dec thrd Sunday. Udaya TV, Udaya movies, Zee Kannada, Kasthuri, Etv Kannada, Suvarna, DD Chandana TV channels movie time schedule.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X