ಕಿರುತೆರೆಗೆ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಎಂಟ್ರಿ

ಅಷ್ಟೇ ಅಲ್ಲದೆ ಈ ಧಾರಾವಾಹಿಯಲ್ಲಿ ಮಾಜಿ ಸಂಸದ ಶಶಿಕುಮಾರ್ ಮತ್ತು ಮಾಸ್ಟರ್ ಕಿಶನ್ ಕೂಡ ನಟಿಸುತ್ತಿದ್ದಾರೆ. ಅಣ್ಣನಾಗಿ ಸಾಯಿಕೃಷ್ಣ ಮತ್ತು ತಂಗಿಯಾಗಿ ಸಂಜನಾ ನಟಿಸಲಿದ್ದಾರೆ. ಗ್ರಾಮೀಣ ಸೊಗಡಿನ ಧಾರವಾಹಿ ಇದಾಗಿದ್ದು ಪ್ರೇಕ್ಷಕರಿಗೆ ಈ ಧಾರಾವಾಹಿ ಮೂಲಕ ಹೊಸತನ ನೀಡುತ್ತೇನೆ ಎಂದು ನಿರ್ದೇಶಕ ಮಹೇಶ್ ಬಾಬು ಭರವಸೆ ನೀಡಿದ್ದಾರೆ.
ಭಾವನಾತ್ಮಕ ಕಥಾಹಂದರದ ಧಾರವಾಹಿ ಇದಾಗಿದ್ದು ಹೊಸತನದಿಂದ ಕೂಡಿದೆ ಎಂದು ಸುವರ್ಣವಾಹಿನಿ ಹೇಳಿದೆ. ಈಗಾಗಲೇ ವಾಹಿನಿಯ ಗುರು ರಾಘವೇಂದ್ರ ವೈಭವ, ಬೊಂಬಾಟ್ ಭೋಜನ, ಲಕುಮಿ, ಕ್ಲಾಸ್ ಮೇಟ್ ಮುಂತಾದ ಧಾರಾವಾಹಿಗಳು ಉತ್ತಮ ಜನಪ್ರಿಯತೆಯನ್ನು ಪಡೆದು ಪ್ರಶಂಸೆಗೂ ಪಾತ್ರವಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
English summary
Anna Tangi mega serial is playing Today, October 3 at 6:30 PM IST on Asianet Suvarna Channel. The story is completely centered on the sacred relationship of a brother and a sister. V Harikrishna scores the music and Mahesh Babu directed the serial.


Click it and Unblock the Notifications