ಶ್ರೀ ಶಂಕರದಲ್ಲಿ 'ಭಜನ್ ಸಾಮ್ರಾಟ್' ಟ್ಯಾಲೆಂಟ್ ಶೋ

ಡಿಸೆಂಬರ್ 1ರಿಂದ ಈಗಾಗಲೆ ಪ್ರಸಾರ ಆರಂಭವಾಗಿದ್ದು, ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 7 ಗಂಟೆಗೆ ಕಾರ್ಯಕ್ರಮವನ್ನು ವೀಕ್ಷಿಸಬಹುದು. 15 ರಿಂದ 35 ವರ್ಷ ವಯಸ್ಸಿನ ಕನಿಷ್ಠ 9 ಸದಸ್ಯರಿರುವ ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.
ಬೆಂಗಳೂರು, ಹುಬ್ಬಳ್ಳಿ, ಚೆನ್ನೈ, ಕೊಯಮತ್ತೂರು ಹಾಗೂ ತಂಜಾವೂರುಗಳಲ್ಲಿ ಆಡಿಷನ್ ನಡೆಸಿ ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ವೈವಿಧ್ಯಮಯ ಸುತ್ತುಗಳಿದ್ದು, ಪ್ರತಿ ಸುತ್ತಿನಲ್ಲಿ ನಿರ್ದಿಷ್ಟ ವಿಷಯದ ಮೇಲೆ ತಂಡಗಳು ಸ್ಪರ್ಧಿಸಬೇಕಾಗುತ್ತದೆ.
ಗೆಲ್ಲುವ ತಂಡಕ್ಕೆ ಭಜನ್ ಸಾಮ್ರಾಟ್ ಗೌರವವನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ರು.1 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ. ದಕ್ಷಿಣ ಭಾರತದ ಭಜನೆ ತಂಡಗಳಿಗೆ ಕಾರ್ಯಕ್ರಮ ಉತ್ತರ ವೇದಿಕೆಯಾಗಲಿದೆ ಎಂದು ಶ್ರೀ ಶಂಕರ ವಾಹಿನಿ ತಿಳಿಸಿದೆ. (ಒನ್‍ಇಂಡಿಯಾ ಕನ್ನಡ)
More from Filmibeat
English summary
South India based spiritual, multi-lingual, satellite television channel Sri Sankara TV is gearing up to launch a new talent hunt show in search of the best bhajan group in south India. The show - Bhajan Samraat - will premiere on 1 December and will be aired every Thursday-Friday at 7 pm.


Click it and Unblock the Notifications











