ಜೀ ಕನ್ನಡ ಅರಸಿ ಧಾರಾವಾಹಿಗೆ ಹೊಸ ನಾಯಕಿಯರು

harshika-bindhiya
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಅರಸಿ'ಯ ಸೂಜಿ ಮತ್ತು ರಶ್ಮಿಯರ ಪ್ರೌಢಾವಸ್ಥೆಯ ಪಾತ್ರಗಳಿಗೆ ಹೊಸ ನಾಯಕಿಯರ ಹುಡುಕಾಟ ಮುಗಿದಿದ್ದು ಸೂಜಿಯ ಪಾತ್ರಕ್ಕೆ ಹರ್ಷಿತಾ ಮತ್ತು ರಶ್ಮಿಯ ಪಾತ್ರಕ್ಕೆ ಬಿಂದಿಯಾ ರಾಮ್ ಆಯ್ಕೆಯಾಗಿದ್ದಾರೆ. ಅರಸಿ ಧಾರಾವಾಹಿಯನ್ನು ಚಿತ್ರನಿರ್ದೇಶಕ ಅರವಿಂದ್ ಕೌಶಿಕ್ ನಿರ್ದೇಶಿಸುತ್ತಿದ್ದಾರೆ.

ಹೊಸ ಪ್ರತಿಭೆಗಳಿಗೆ ಮನ್ನಣೆ ಕೊಡುವ ಜೀ ಕನ್ನಡದ ಪರಂಪರೆ ಅನುಸರಿಸಿ ಚಿತ್ರತಂಡ ಅರಸಿಗಾಗಿ ಆಡಿಷನ್ ನಡೆಸಿತ್ತು. 1000ಕ್ಕೂ ಹೆಚ್ಚು ಆಸಕ್ತರು ಧಾರಾವಾಹಿಯಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಇಬ್ಬರು ಹುಡುಗಿಯರು ಮುಖ್ಯ ಪಾತ್ರಗಳಿಗೆ ಆಯ್ಕೆಯಾಗಿದ್ದರೆ, ಇತರ ಪೋಷಕ ಪಾತ್ರಗಳಿಗೂ ಹೊಸ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

200ನೇ ಸಂಚಿಕೆಯತ್ತ ಮುನ್ನುಗ್ಗುತ್ತಿರುವ ಅರಸಿಯ ಸೂಜಿ ಮತ್ತು ರಶ್ಮಿ ಇದುವರೆಗೆ ಪುಟ್ಟ ಹುಡುಗಿಯರಾಗಿದ್ದರು. ಇದೇ ನವೆಂಬರ್ 7ರ ಸಂಚಿಕೆಯಿಂದ ಹೊಸ ನಾಯಕಿಯರು ಪಾದಾರ್ಪಣೆ ಮಾಡಲಿದ್ದಾರೆ. ದ್ವೇಷವನ್ನು ಪ್ರೀತಿಯಿಂದ ಗೆಲ್ಲಬಹುದೆ? ಎಂಬ ಪ್ರಶ್ನೆಯೊಂದಿಗೆ ಸೂಜಿ ಪ್ರೀತಿಯ ಪ್ರತೀಕವಾಗಿ, ರಶ್ಮಿ ದ್ವೇಷದ ಪ್ರತೀಕವಾಗಿ ಧಾರಾವಾಹಿಯ ರೋಚಕ ತಿರುವುಗಳಿಗೆ ಕಾರಣರಾಗುತ್ತಾರೆ.

ಜೀ ಕನ್ನಡ, 'ಹಳೆ ಬೇರು ಹೊಸ ಚಿಗುರು' ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದೆ. ಹಳಬರನ್ನು ಕಡೆಗಣಿಸದೇ ಹೊಸ ಪ್ರತಿಭೆಗಳನ್ನು ಹುಡುಕುವತ್ತ ವಾಹಿನಿ ಸದಾ ಕಾರ್ಯಪ್ರವೃತ್ತವಾಗಿರುತ್ತದೆ ಎಂದು ಜೀ ಕನ್ನಡ ಮುಖ್ಯಸ್ಥ ಗೌತಮ ಮಾಚಯ್ಯ ಹೇಳಿದ್ದಾರೆ. ಗಣಪತಿ ಭಟ್ ನಿರ್ಮಾಪಕರು ಹಾಗೂ ಸಂಕಲನಕಾರರು. (ಒನ್ ಇಂಡಿಯಾ ಕನ್ನಡ)

More from Filmibeat

English summary
The search for two new faces in Zee Kannada’s popular serial ‘Arasi’ has come to an end. Sooji and Rashmi the two lead characters will be played by Harshita and Bidya Ram respectively. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X