ಭಗವದ್ಗೀತೆ ಕಾಣದೆ ಕಂಗಾಲಾದ ಕಿಲ್ಲರ್ ಪತ್ನಿ ನಿಹಿತಾ

By Mahesh

ಬಿಗ್ ಬಾಸ್ 5 ಆರಂಭವಾದ ಮೊದಲ ದಿನವೇ ಕಿರಿಕಿರಿ ಆರಂಭವಾಗಿದೆ. ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ಪತ್ನಿ ನಿಹಿತಾ ಬಿಸ್ವಾಸ್ ತನಗೆ ಜೀವ ಬೆದರಿಕೆ ಇದೆ. ಯಾರೋ ಮಾಟ ಮಾಡಿದ್ದಾರೆ ಎಂದು ಕಣ್ಣೀರಿಟ್ಟಿದ್ದಾಳೆ.

ನಿಹಿತಾ ಗೋಳಾಟಕ್ಕೆ ಕಾರಣವೂ ಇದೆ. ಬಹುತೇಕ ಹಿಂದೂಗಳನ್ನೇ ಹೊಂದಿರುವ ನೇಪಾಳದ ಹೆಣ್ಮಗಳು ನಿಹಿತಾಗೆ ದಿನ ನಿತ್ಯ ಭಗವದ್ಗೀತೆ ಪುಸ್ತಕ ಪಠಣ ಮಾಡಿ ಮಲಗುವ ಅಭ್ಯಾಸ ಇದೆಯಂತೆ.

ಅದರೆ, ಆಕೆ ಬಳಿ ಇದ್ದ ಪವಿತ್ರ ಗ್ರಂಥ ಭಗವದ್ಗೀತೆ ಬಿಗ್ ಬಾಸ್ ಮನೆ ಹೊಕ್ಕ ಮೇಲೆ ಕಾಣೆಯಾಗಿದೆಯಂತೆ. ಕೆಟ್ಟ ಗಾಳಿ ಸೋಂಕದಂತೆ ನನ್ನನ್ನು ರಕ್ಷಿಸುತ್ತಿದ್ದ ಗೀತೆ ಈಗ ಎಲ್ಲಿದೆ ಎಂದು ಎಲ್ಲರನ್ನು ಕೇಳುತ್ತಾ ಗೋಳಾಡಿದ್ದಾಳೆ.

ಆದರೆ, ಬಿಗ್ ಬಾಸ್ ನಿಯಮಾವಳಿಗಳ ಪ್ರಕಾರ ಯಾವುದೇ ಪುಸ್ತಕಗಳನ್ನು ಮನೆಯೊಳಗೆ ಕೊಂಡೊಯ್ಯುವಂತಿಲ್ಲ. ಅದು ಧಾರ್ಮಿಕ ಗ್ರಂಥವಾದರೂ ಸರಿ, ಮತ್ತೊಂದಾದರೂ ಸರಿ.

ಪ್ರೋಡಕ್ಷನ್ ಹೌಸ್ ಜೊತೆ ಸಂಪರ್ಕಿಸಿದ ನಿಹಿತಾ ಭಗವದ್ಗೀತೆ ಪುಸ್ತಕ ನೀಡುವಂತೆ ದುಂಬಾಲು ಬಿದ್ದಿದ್ದಾಳೆ. ಅದರೆ, ಅವರ ಮನ ಕರಗಿಲ್ಲ. ಭಗವದ್ಗೀತೆ ಇಲ್ಲದಿದ್ದರೆ ಭಯಮುಕ್ತವಾಗಿ ಬದುಕಲು ಸಾಧ್ಯವಿಲ್ಲ ಎಂಬ ವಿಷಯ ನಿಹಿತಾ ತಲೆಯನ್ನು ಹೊಕ್ಕಿದೆ. ಮುಂದೇನು ಮಾಡುತ್ತಾಳೋ ಕಾದು ನೋಡಬೇಕಿದೆ.

More from Filmibeat

English summary
Bigg Boss 5 contestant, Nihita Biswas, who is Charles Sobhraj's wife fears threat to her life as she has not been allowed to take the holy book of Bhagavad Gita to the Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X