ಉಲ್ಲಾಸ ಉತ್ಸಾಹದ ದೀಪಾವಳಿ ಮನಸಾರೆ ಆಚರಿಸಿ
ದೀಪಾವಳಿ ಹಬ್ಬದಂದು ಉದಯ ಮತ್ತು ಸುವರ್ಣ ಟಿವಿ ಎರಡು ಹಿಟ್ ಚಿತ್ರಗಳನ್ನು ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ ಬಿತ್ತರಿಸಲಿದೆ. ದೀಪಾವಳಿ ಹಬ್ಬವನ್ನು 'ಉಲ್ಲಾಸ ಉತ್ಸಾಹ'ದಿಂದ ಆಚರಿಸುತ್ತ ಹಬ್ಬದೂಟವಾದ ಮೇಲೆ ಕನ್ನಡ ಚಿತ್ರಗಳನ್ನು 'ಮನಸಾರೆ' ಸವಿಯಿರಿ.
ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಗೊಂಡ 'ಮನಸಾರೆ' ಚಿತ್ರ ನರಕ ಚತುರ್ದಶಿ ದಿನದಂದು (ನ. 5) ಸಂಜೆ ಆರು ಗಂಟೆಗೆ ಉದಯ ಟಿವಿಯಲ್ಲಿ ಬಿತ್ತರಗೊಳ್ಳಲಿದೆ. ಯೋಗರಾಜ ಭಟ್ಟರ ನಿರ್ದೇಶನ, ಮನೋಮೂರ್ತಿಯ ಸಂಗೀತ ಮತ್ತು ಜಯಂತ ಕಾಯ್ಕಿಣಿಯ ಸಾಹಿತ್ಯದ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ಈ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು. ಸತ್ಯ ಹೆಗಡೆ ಸಿನೆಮಾಟೋಗ್ರಫಿ ಹೆಗ್ಗಳಿಕೆಗೆ ಪಾತ್ರವಾಗಿತ್ತು. ದಿಗಂತ್, ಐಂದ್ರಿತಾ ರೇ, ರಾಜು ತಾಳಿಕೋಟೆ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಪ್ರಥಮ ಬಾರಿಗೆ ಭಟ್ಟರ ಚಿತ್ರದಲ್ಲಿ ದಿಗಂತ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ನಿರ್ಮಾಪಕರು ರಾಕ್ ಲೈನ್ ವೆಂಕಟೇಶ್.
ಬಲಿಪಾಡ್ಯಮಿಯಂದು (ನ. 7) ಸಂಜೆ ಐದು ಗಂಟೆಗೆ ಸುವರ್ಣ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ಚಿತ್ರ ಬಿತ್ತರಗೊಳ್ಳಲಿದೆ. ತೆಲುಗಿನಲ್ಲಿ ಯಶಸ್ವಿಯಾದ 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತರಲಾಗಿ, ಪ್ರೀತಿನೇ ಬೇರೆ ಸ್ನೇಹನೇ ಬೇರೆ ಎಂಬ ಸಣ್ಣ ಎಳೆಯನ್ನು ಇಟ್ಟುಕೊಂಡು ಹೆಣೆಯಲಾಗಿರುವ ಚಿತ್ರ. ಗಣೇಶ್ ಗೆ ನಾಯಕಿಯಾಗಿ ಯಾಮಿ ಗೌತಮ್ ನಟಿಸಿದ್ದಾರೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7


Click it and Unblock the Notifications











