ಕಿರುತೆರೆ ಮದುವೆಯಲ್ಲಿ ದುನಿಯಾ ವಿಜಯ್, ಪ್ರೇಮ್!

ಹೌದು, ರಾಧಾ ಕಲ್ಯಾಣ ಧಾರಾವಾಹಿಯಲ್ಲೊಂದು ಮದುವೆ ನಡೆಯುತ್ತಿದೆ. ಕನ್ನಡ ಕಿರುತೆರೆಯಲ್ಲೇ ಅದ್ದೂರಿ ಮದುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಲಕ್ಷಾಂತರ ರೂಪಾಯಿ ಬಜೆಟ್ ಮದುವೆಗಾಗಿ ವಿನಿಯೋಗಿಸಲಾಗಿದೆ. ಕಥೆಯ ಪ್ರಕಾರ ಮದುವೆ ಉತ್ತರ ಭಾರತ ಶೈಲಿಯಲ್ಲಿ ನಡೆಯುತ್ತಿದೆ. ಅದರಂತೆ ಮೆಹಂದಿ, ಸಂಗೀತ್, ಬಾರಾತ್, ಎಲ್ಲವೂ ವೈಭವಯುತವಾಗಿ ಮೂಡಿ ಬಂದಿದೆ.
ಈ ಮದುವೆ ದೃಶ್ಯಗಳಲ್ಲಿ ವಿಜಯ್ ಮತ್ತು ಸಿಂಧು ಯುಗಳ ಗೀತೆಗೆ ನರ್ತಿಸಿದರೆ, ನವೀನ್‌ಕೃಷ್ಣ ಸ್ವತಃ ಹಾಡೊಂದನ್ನು ಹಾಡಿದ್ದಾರೆ. ಪ್ರೇಮ್ ಮತ್ತು ವಿಜಯ್ ಟಪ್ಪಾಂಗುಚ್ಚಿ ಜೋಡಿ ನರ್ತನ ಸಖತ್ತಾಗಿದೆ. ಜೊತೆಗೆ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳೂ ನೃತ್ಯಕ್ಕೆ ಹೆಜ್ಜೆ ಹಾಕಿ ಮದುವೆ ವೈಭವಕ್ಕೆ ಮತ್ತಷ್ಟು ಕಳೆ ಬಂದಿದೆ. ಕುರಿಗಳು ಪ್ರತಾಪ್ ಮತ್ತು ಸಂಗಡಿಗರ ಹಾಸ್ಯ ನಕ್ಕು ನಕ್ಕು ಸುಸ್ತಾಗುವಂತಿದೆ.
ಏರ್ಪಾಡಾಗಿರುವುದು ಕಥಾನಾಯಕ ವಿಶಾಲ್ ಮತ್ತು ವಿಶಾಖಾ ಮದುವೆ. ಆದರೆ ಇದು ಕಥಾನಾಯಕಿ ರಾಧಿಕಾಳ ಕಲ್ಯಾಣ. ಹೇಗೆ? ಧಾರಾವಾಹಿಯಲ್ಲಿ ಉತ್ತರವಿದೆ. ಅಸಂಖ್ಯ ಅನಿರೀಕ್ಷಿತ ತಿರುವುಗಳ ರಾಧಾ ಕಲ್ಯಾಣ ಈ ಮುಖ್ಯ ತಿರುವಿನ ಮೇಲೆ ನಿಂತಿದೆ.
ರಾಧಾ ಕಲ್ಯಾಣ ಸೋಮವಾರದಿಂದ ಶುಕ್ರವಾರ ಸಂಜೆ 6:30ಕ್ಕೆ ಪ್ರಸಾರವಾಗುತ್ತಿದೆ.


Click it and Unblock the Notifications











