For Quick Alerts
ALLOW NOTIFICATIONS  
For Daily Alerts

ಕಾಮಿಡಿ ನಟ ಮಾಸ್ಟರ್ ಆನಂದ್ ಈಗ ಸುವರ್ಣ ಹಳ್ಳಿ ಹೈದ

By Vinayakaram Kalagaru
|

ಮಾಸ್ಟರ್ ಆನಂದ್ ಮತ್ತೆ ಕಿರುತೆರೆಗೆ ಮರಳಲು ಅಖಾಡ ಸಿದ್ಧಮಾಡುತ್ತಿದ್ದಾರೆ. '5 ಈಡಿಯಟ್ಸ್' ಚಿತ್ರದ ಭಯಾನಕ ರೀತಿಯಲ್ಲಿ ಸೋಲು ಅನುಭವಿಸಿದ್ದು ಒಂದು ಕಡೆಯ ಸುದ್ದಿಯಾದರೆ, ಕಿರುತೆರೆಯತ್ತ ಮತ್ತೆ ಮುಖ ಮಾಡುತ್ತಿರುವುದು ಹಾಟ್ ನ್ಯೂಸ್!

ಈಗಾಗಲೇ ಸುವರ್ಣ ವಾಹಿನಿಗೆ 'ಎಸ್ಸೆಸ್ಸೆಲ್ಸಿ ನನ್ ಮಕ್ಳು' ಎಂಬ ಅರೆ ಕಾಮಿಡಿ ಧಾರಾವಾಹಿ ಮಾಡಿ, ಒಂದಷ್ಟು ಸುದ್ದಿ ಮಾಡಿದ್ದ ಆನಂದ್, ಮರಳಿ ಗೂಡಿಗೆ ತೆರಳಲಿದ್ದಾರೆ.

ಈ ಬಾರಿ ಅವರು ನಿರ್ದೇಶಿಸುತ್ತಿರುವ ಧಾರಾವಾಹಿಯ ಹೆಸರು 'ಹಳ್ಳಿ ಹೈದ್ರು'. ಇದನ್ನು ಅವರು ಸಂಕಲನಕಾರ ಶ್ರೀಕಾಂತ್ ಜೊತೆ ಸೇರಿ, ನಿರ್ಮಿಸುತ್ತಿದ್ದಾರೆ.

ಈಗಾಗಲೇ ಲಕುಮಿ ಮೊದಲಾದ ಸೀರಿಯಲ್ ಗಳಿಗೆ ಶ್ರೀಕಾಂತ್ ಸಂಕಲನ ಮಾಡಿದ್ದಾರೆ. ಇದೂ ಕೂಡ ಕಾಮಿಡಿ ಕತೆ. ಇಷ್ಟು ದಿನ ಎಸ್ಸೆಸ್ಸೆಲ್ಸಿ.. ನಲ್ಲಿ ಪ್ಯಾಟೇ ಹೈಕಳ ಜೊತೆ ಕಾಮಿಡಿ ಕಮಾಲ್ ನಡೆಸುತ್ತಿದ್ದ ಆನಂದ್ ಅವರನ್ನು ಇನ್ನು ಮುಂದೆ "ವಿಲೇಜ್ ಅಕೌಂಟೆಂಟ್" ಎಂದು ತಮಾಷಿ ಮಾಡಬಹುದು!

English summary
Master Anand back to small screen. His comedy pack '5 Idiots' not doing so well at the box office. So he decided to move back to Suvarna TV. His new Television serial titled as 'Halli Hyda' (Village Boy) are set to go on air. Srikanth and Ananad jointly produced this comedy serial.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more