twitter
    For Quick Alerts
    ALLOW NOTIFICATIONS  
    For Daily Alerts

    ಚಂದನ ವಾಹಿನಿಯಲ್ಲಿ ಪಿಯುಸಿ, ಸಿಇಟಿ ಮಾರ್ಗದರ್ಶನ

    By Rajendra
    |

    PUC, CET Counseling on DD Chandana
    ವಿದ್ಯಾರ್ಥಿಗಳ ಜೀವನದಲ್ಲಿ ದ್ವಿತೀಯ ಪಿಯುಸಿ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪ್ರಮುಖ ತಿರುವು ಕೊಡುವಂತಹ ಪರೀಕ್ಷೆಗಳು. ಈ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಜಾಣ್ಮೆಯಿಂದಎದುರಿಸಿದರೆ ಗುರಿ ಮುಟ್ಟುವುದು ತುಂಬ ಸುಲಭ. ಹಾಗೆ ಮಾಡಬೇಕೆಂದರೆ ಸೂಕ್ತ ಮಾರ್ಗದರ್ಶನ ಹಾಗೂ ಶಿಕ್ಷಣದ ಅವಶ್ಯಕತೆ ಇದೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಚಂದನ ವಾಹಿನಿ ಮುಂದಡಿಯಿಟ್ಟಿದೆ.

    ದ್ವಿತೀಯ ಪಿಯುಸಿ ವಿಜ್ಞಾನ ಹಾಗೂ ಸಿಇಟಿ ಪರೀಕ್ಷೆಗಳನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಚಂದನ ವಾಹಿನಿ ಹೊಸ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದು ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.

    ಮಾರ್ಚ್ 7ರಿಂದ 15ರವರೆಗೆ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಹಾಗೂ ಮಾರ್ಚ್ 29 ರಿಂದ ಏಪ್ರಿಲ್ 25ರವರೆಗೆ ಸಿಇಟಿ ಪರೀಕ್ಷೆಯ ಮಾರ್ಗದರ್ಶನ ತರಗತಿಗಳು ಪ್ರಸಾರವಾಗಲಿವೆ. ದ್ವಿತೀಯ ಪಿಯುಸಿ ನಾಲ್ಕು ವಿಜ್ಞಾನ ವಿಷಯಗಳ ಕುರಿತ ಮಾರ್ಗದರ್ಶನ ಕಾರ್ಯಕ್ರಮ ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ (ಮಾ.7ರಿಂದ 15ರವರೆಗೆ)ಪ್ರಸಾರವಾಗಲಿದೆ. ನಾಲ್ಕು ವಿಜ್ಞಾನ ವಿಷಯಗಳ ಕುರಿತು ತಲಾ ಅರ್ಧ ಗಂಟೆ ಕಾಲ ಮಾರ್ಗದರ್ಶನ ನೀಡಲಾಗುತ್ತದೆ.

    ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು. ಎರಡು ದಿನಗಳಿಗೊಮ್ಮೆ ಒಂದೊಂದು ವಿಷಯ ಕುರಿತು ಮಧ್ಯಾಹ್ನ 12 ರಿಂದ 1 ಗಂಟೆಯ ತನಕ ನೇರ ಫೋನ್ ಇನ್ ಕಾರ್ಯಕ್ರಮವಿರುತ್ತದೆ. ಸಿಇಟಿ ಮಾರ್ಗದರ್ಶನ ವೇಳಾಪಟ್ಟಿಯನ್ನು ಶೀಘ್ರದಲ್ಲೆ ಪ್ರಕಟಿಸಲಾಗುತ್ತದೆ.

    English summary
    DD Chandana TV to air a counseling programme for second PUC (science) students and CET 2011 aspirants. The programme starts from 7th March to 15th March and for PUC student and 29th March to 25th April for CET aspirants.
    Friday, March 4, 2011, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X