ಸುವರ್ಣ ವಾಹಿನಿಯಲ್ಲಿ ಮ್ಯೂಸಿಕ್ ಸೂಪರ್ ಸ್ಟಾರ್ಸ್

ಈಗಾಗಲೆ ಜನಪ್ರಿಯ ಮ್ಯೂಸಿಕ್ ರಿಯಾಲಿಟಿ ಶೋಗಳಲ್ಲಿ ಗೆದ್ದು ಖ್ಯಾತರಾದ 12 ಗಾಯಕರು ಇಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರೆಲ್ಲಾ ಸೂಪರ್ ಸಿಂಗರ್ಸ್ ಆಗಿ ಈ ಕಾರ್ಯಕ್ರಮದ ಮೂಲಕ ಹೊರಹೊಮ್ಮಲಿದ್ದಾರೆ. ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಪ್ರಶಾಂತ ವಾತಾವರಣವಿರುವ ಗುರುಕುಲವೊಂದರಲ್ಲಿ 40 ದಿನಗಳ ಕಾಲ ಸ್ಪರ್ಧಿಗಳಿಗೆ ತರಬೇತಿ ನೀಡಲಾಗುತ್ತದೆ. 24 ಗಂಟೆಗಳ ಕಾಲ ಇವರಿಗೆ ಸಂಗೀತವೇ ಪ್ರಪಂಚ. ಈ 40 ದಿನಗಳಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ ಧ್ವನಿ ಶುದ್ಧತೆ, ರಾಗಾಲಾಪ, ಶಬ್ದಗ್ರಹಣ, ಹಾಡಿನ ವಿವಿಧ ಮಜಲುಗಳ ಬಗ್ಗೆ ಪರಿಣಿತರಿಂದ ತರಬೇತಿ ನೀಡಲಾಗುತ್ತದೆ.
ಈ ಸ್ಪರ್ಧೆಯ ತೀರ್ಪುಗಾರರು ಹಾಗೂ ಮಾರ್ಗದರ್ಶಕರಾಗಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಖ್ಯಾತ ನೃತ್ಯ ಕಲಾವಿದೆ ಲಕ್ಷ್ಮಿ ಗೋಪಾಲಸ್ವಾಮಿ ಭಾಗವಹಿಸಲಿದ್ದಾರೆ. ತರಬೇತಿಯಲ್ಲಿ ಸ್ಪರ್ಧಿಗಳಿಗೆ ಯೋಗ, ಧ್ಯಾನ, ಆಧ್ಯಾತ್ಮಿಕ ಚಿಂತನೆಯನ್ನೂ ಕಲಿಸಲಾಗುತ್ತದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Suvarna TV will launches the new season of singing reality show "Music Super Stars" which would have 12 participants from across the state contesting in the show. The programme would go on air from June 6 Monday to Friday at 8 pm.
ಸುವರ್ಣ ಟಿವಿ ರಿಯಾಲಿಟಿ ಶೋ ಸಂಗೀತ ಲಕ್ಷ್ಮಿ ಗೋಪಾಲ ಸ್ವಾಮಿ suvarna tv reality show music lakshmi gopalaswamy


Click it and Unblock the Notifications











