ಜೀ ಕನ್ನಡದಲ್ಲಿ ಮತ್ತೆ 'ಲಿಟ್ಲ್ ಚಾಂಪ್ಸ್' ಸ ರಿ ಗ ಮ ಪ

Zee Kannada Channel
ಸ ರಿ ಗ ಮ ಪ ಕಾರ್ಯಕ್ರಮದ 8 ಸೂಪರ್ ಹಿಟ್ ಆವೃತ್ತಿಗಳನ್ನು ನೀಡಿದ ಜೀ ಕನ್ನಡ ಇದೀಗ 9 ನೇ ಸೀಸನ್ ಗೆ ಅಣಿಯಾಗಿದೆ. ಇದು ಪುಟಾಣಿಗಳ ಗಾಯನ ಪ್ರತಿಭೆ ಒರೆಗೆ ಹಚ್ಚುವ ಸ ರಿ ಗ ಮ ಪ-ಲಿಟ್ಲ್ ಚಾಂಪ್ಸ್. ರಾಜ್ಯದ ವಿವಿಧ ಭಾಗಗಳಲ್ಲಿ ಆಡಿಷನ್ ನಡೆಯಲಿದೆ. ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ, ಗುಲಬರ್ಗ, ಮಂಗಳೂರು ಮತ್ತು ಹಾಸನ ಕೇಂದ್ರಗಳಲ್ಲಿ ಈ ಪ್ರತಿಭಾನೇಷ್ವಣೆ ಕಾರ್ಯಕ್ರಮ ಸದ್ಯದಲ್ಲೇ ನಡೆಯಲಿದೆ.

ಈಗಾಗಲೇ ಪೂರ್ವತಯಾರಿ ಶುರುವಾಗಿದ್ದು ಅತ್ಯಂತ ನವೀನ ಮಾದರಿಯಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ರೂಪಿಸುತ್ತಿದ್ದೇವೆ. ಮೂಲೆ ಮೂಲೆಯ, ಗ್ರಾಮಾಂತರದ ಪುಟಾಣಿಗಳೂ ಭಾಗವಹಿಸಬೇಕು, ಪಾಲಕರು ಮಕ್ಕಳನ್ನು ಈ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಬೇಕು ಎಂಬುದು ವಾಹಿನಿಯ ಆಶಯ. ಅಡಿಷನ್ಸ್ ದಿನಾಂಕಗಳ ಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಜೀ ವಾಹಿನಿಯ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ. ಗೌತಮ್ ಮಾಚಯ್ಯ ತಿಳಿಸಿದ್ದಾರೆ.

ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ ಈ ಹಿಂದಿನ ಆವೃತ್ತಿಗಳು ಅಭೂತಪೂರ್ವ ಯಶಸ್ಸು ಗಳಿಸಿದ್ದವು. ಅಲ್ಲಿ ಭಾಗವಹಿಸಿದ್ದ ಮಕ್ಕಳು ಇಂದಿಗೂ ಸರಿಗಮಪ ಪುಟಾಣಿಗಳೆಂದೇ ಗುರುತಿಸಲ್ಪಡುತ್ತಿದ್ದಾರೆ. ಇವರು ಈಗಾಗಲೇ ಚಿತ್ರರಂಗದಲ್ಲೂ ಹಿನ್ನೆಲೆ ಗಾಯಕರಾಗಿ ಹೆಸರು ಮಾಡುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
After 8 super hit editions of Sa Re Ga Ma Pa reality show, Zee Kannada is getting ready for the 9th season. It is a platform for the kids to show their singing talents. Auditions will be conducted in different parts of the State, at Bangalore, Mysore, Davanagere, Hubli, Shimoga, Belgaum, Mangalore and Hassan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X