For Quick Alerts
  ALLOW NOTIFICATIONS  
  For Daily Alerts

  ರಾಯರು ಬೃಂದಾವನ ಪ್ರವೇಶಿಸುವ ಅಮೋಘ ಕ್ಷಣ

  By Rajendra
  |
  ಐತಿಹಾಸಿಕ ಹಾಗೂ ಪುರಾಣಗಳನ್ನು ಆಧಾರಿತವಾದ "ಗುರು ರಾಘವೇಂದ್ರ ವೈಭವ " ಧಾರಾವಾಹಿಯಲ್ಲಿ ಬರುವ ರಾಯರ ಬೃಂದಾವನ ಪ್ರವೇಶಿಸುವ ಅಮೋಘ ಕ್ಷಣಗಳನ್ನು ಚಿತ್ರಿಸಿಕೊಳ್ಳಲಾಯಿತು.ಕ್ರಿ.ಶ.1595 ರಲ್ಲಿ ವೆಂಕಟನಾಥನ ಜನನದಿಂದ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳಾಗುವವರೆಗಿನ ಕಥೆಯನ್ನು ಈ ಅಪೂರ್ವ ಧಾರಾವಾಹಿಯಲ್ಲಿ ಸವಿಯಬಹುದು.

  ಕರ್ನಾಟಕ ಜನತೆಯ ಆರಾಧ್ಯ ಗುರು, ಮಂತ್ರಾಲಯದ ಮಹಿಮಾ ಪುರುಷ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನಗಾಥೆಯ ಸಂಪೂರ್ಣ ಚಿತ್ರಣ ನೀಡುವ "ಗುರು ರಾಘವೇಂದ್ರ ವೈಭವ" ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ರಾತ್ರಿ 10 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಒಟ್ಟು ಮೂವತ್ತು ನಿಮಿಷಗಳ ಕಾಲ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾ ಸಾಗುತ್ತಿದೆ.

  ರಾಯರ ಬೃಂದಾವನ ಪ್ರವೇಶಿಸುವ ಅಮೋಘ ಕ್ಷಣಗಳನ್ನು ಚಿತ್ರೀಕರಿಸಿಕೊಳ್ಳುವ ಸಂದರ್ಭದಲ್ಲಿ ತೆಗೆದ ಚಿತ್ರವನ್ನು ತಾವಿಲ್ಲಿ ಕಾಣುತ್ತಿದ್ದೀರಿ. ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕ ರಘುನಂದನ್, ನಿರ್ಮಾಪಕ ಪಟ್ಟಾಭಿರಾಮ್, ನಿರ್ದೇಶಕ ಬ.ಲ.ಸುರೇಶ್, ರಾಯರ ಪಾತ್ರಧಾರಿ ಪರೀಕ್ಷಿತ್, ಸಂಚಿಕೆ ನಿರ್ದೆಶಕ ಆದರ್ಶ ಹೆಗಡೆ ಹಾಗೂ ಸಂಪಂಗಿರಾಮ್ ಅವರು ಇದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Asianet Suvarna Channel's Guru Raghavendra Vaibhava mythological soap's Vrindavana entry episode shot at Mantralaya. Raghavendra Swami's erarly life, Marriage, Poorvashrama Miracles, Ordination into Sanyasa as Guru Raghavendra, Moksha all these things are shown in it.
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X